BengaluruState

ವೆಂಟಿಲೇಟರ್ ಸಿಗದೆ  ಸಾವನಪ್ಪಿದ ಶಿಕ್ಷಣ ಸಚಿವರ ಆಪ್ತಸಹಾಯಕ


ಬೆಂಗಳೂರು: ಒಂದು ಕಡೆ ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿದ್ದರೆ ಮತ್ತೊಂದು ಕಡೆ ಆಸ್ಪತ್ರೆಯಲ್ಲಿ ಬೆಡ್ ಮತ್ತು ವೆಂಟಿಲೇಟರ್ ಸಿಗದೇ ರೊಗಿಗಳು ಸಾವಿನ ಬಾಗಿಲು ತಟ್ಟುತ್ತಿದ್ದಾರೆ.  ಇಂದು ಶಿಕ್ಷಣ ಸಚಿವ ಸುರೇಶ ಕುಮಾರ ಅವರ ಪಿಎ ರಮೇಶ್ ಆಕ್ಸಿಜೆನ್ ವೆಂಟಿಲೇಟರ್ ಸಿಗದೇ  ಕೊರೋನಾದಿಂದ ಬಲಿಯಾಗಿದ್ದಾರೆ.

ಕೊರೊನಾ ದೃಡಪಟ್ಟ ಹಿನ್ನೆಲೆ ರಮೇಶ ಒಂದು ವಾರದಿಂದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಪರಿಸ್ಥಿತಿ ಗಂಭೀರವಾದರೂ ವೆಂಟಿಲೇಟರ್ ಸಿಗದೆ ಸಾವನ್ನಪ್ಪಿದ್ದಾರೆ. ರಮೇಶ 8 ವರ್ಷದಿಂದ ಸಚಿವರ ಜೊತೆ ಕೆಲಸ ಮಾಡುತ್ತಿದ್ದರು. ಅವರಿಗೆ 55 ವರ್ಷ ವಯಸ್ಸಾಗಿತ್ತು.

ಜನಪ್ರತಿನಿಧಿಗಳಿಗೆ ಮತ್ತು ಆಪ್ತ ಸಹಾಯಕರಿಗೆ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಸಿಗದಿರುವಂತಹ ಪರಿಸ್ಥಿತಿ ನಿರ್ಮಾಣವಾಗಿದ್ದು ಹೀಗೆ ಆದರೆ ಜನಸಾಮಾನ್ಯರ ಪರಿಸ್ಥಿತಿ ಏನು ಅನ್ನು ಚಿಂತೆ ಎಲ್ಲರಲ್ಲೂ ಮೂಡಿದೆ.

 


Leave a Reply