Belagavi

ವಿದ್ಯಾರ್ಥಿಗಳ ಭವಿಷ್ಯದ ಜೊತೆ ಆಟವಾಡುತ್ತಿರುವ ಉಪನ್ಯಾಸಕರು


ಪಾಠ ಮಾಡಿ ಎಂದರೆ. ನೀವೆ ಓದಿಕೊಳ್ಳಿ ಎಂದ ಭೂಪರು.
ಐದು ಉಪನ್ಯಾಸಕರ ಪೈಕಿ ಮೂವರು ಮಾತ್ರ ನೇಮಕ.
ಪತ್ರಿಕಾ ಮಾಧ್ಯಮದ ಜೊತೆ ಅಳಲು ತೊಡಿಕೊಂಡ ವಿದ್ಯಾರ್ಥಿಗಳು.

ಯರಗಟ್ಟಿ : ಶಿಕ್ಷಣ ಅರಸಿ ಬಂದ ವಿಧ್ಯಾರ್ಥಿಗಳಿಗೆ ಶಿಕ್ಷಣ ನೀಡದೆ ಉಪನ್ಯಾಸಕರು ಬೇಜವಾಬ್ದಾರಿ ತೊರುತ್ತಿರುವ ಘಟನೆಯೊಂದು ತಾಲೂಕಿನ ಸತ್ತಿಗೇರಿ ಗ್ರಾಮದಲ್ಲಿ ನಡೆದಿದೆ.

ಹೌದು ಸತ್ತಿಗೇರಿಯ ಕರ್ನಾಟಕ ಪಬ್ಲಿಕ್ ಶಾಲೆಯ ಪಿಯು ಕಾಲೇಜಿನಲ್ಲಿ ಉಪನ್ಯಾಸಕರು ಸರಿಯಾದ ವೇಳೆಗೆ ಹಾಜರಾಗದೆ ಮತ್ತು ವಿದ್ಯಾರ್ಥಿಗಳಿಗೆ ಸರಿಯಾಗಿ ಪಾಠ ಮಾಡದೆ ಹಾಜರಾತಿಗೆ ಸಹಿ ಹಾಕಿ ಹೋಗವ ಕೆಲಸ ಮಾಡುತ್ತಿರುವುದರಿಂದ ವಿದ್ಯಾಭ್ಯಾಸದ ಮೇಲೆ ಕರಿನೆರಳು ಬಿದ್ದಂತಾಗಿದೆ.

ವಿದ್ಯಾರ್ಥಿಗಳು ಪಾಠ ಮಾಡಿ ಎಂದು ಉಪನ್ಯಾಸಕರನ್ನು ಪ್ರಶ್ನಿಸಿದಾಗ ನೀವೆ ಓದಿಕೊಳ್ಳಿ ಎಂಬ ಉಡಾಫೆ ಉತ್ತರವನ್ನು ಉಪನ್ಯಾಸಕರು ನೀಡುತ್ತಿದ್ದಾರೆ ಎಂದು ವಿಧ್ಯಾರ್ಥಿಗಳು ಪತ್ರಿಕಾ ಮಾಧ್ಯಮದ ಜೊತೆ ತಮ್ಮ ಅಳಲನ್ನು ತೊಡಗಿಕೊಂಡರು.

ನಾವೆ ಕಲಿಯಬೇಕು ಎಂದರೆ ಕಾಲೇಜಿನಲ್ಲಿ ಕಲಿಕೆಗೆ ಸರಿಯಾದ ಪರಿಕರಗಳಿಲ್ಲ ಐದು ಉಪನ್ಯಾಸಕರ ಪೈಕಿ ಮೂವರು ಮಾತ್ರ ನೇಮಕ ಮಾಡಲಾಗಿದೆ ಇದರಿಂದ ಶಿಕ್ಷಣದಲ್ಲಿ ನಮಗೆ ಹಿನ್ನಡೆ ಉಂಟಾಗುತ್ತಿದ್ದು ಸಂಬಂಧಿಸಿದ ಅಧಿಕಾರಿ ಸೂಕ್ತವಾದ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
(ವರದಿ ಈರಣ್ಣಾ ಹುಲ್ಲೂರ ಯರಗಟ್ಟಿ)


Leave a Reply