BengaluruState

ಕೋವಿಡ್ ಹೆಚ್ಚಳಕ್ಕೆ ಜನರೇ ಹೊಣೆ: ಕೆ.ಸುಧಾಕರ


ಬೆಂಗಳೂರು: ಸಾರ್ವಜನೀಕರ ನಿರ್ಲಕ್ಷ್ಯದಿಂದಲೇ ಕೊರೊನಾ ಎರಡನೆಯ ಅಲೆ ಹೆಚ್ಚಾಗಿದ್ದು ನಿಯಮಗಳನ್ನು ಪಾಲಿಸದೇ ಇರುವುದರಿಂದ ಈ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಸಚಿವ ಸುಧಾಕರ್ ಜನರ ವಿರುದ್ಧ ಗರಂ ಆಗಿದ್ದಾರೆ.

ಇಂದು ಮಾದ್ಯಮಗಳೊಂದಿಗೆ ಮಾತನಾಡಿದ ಅವರು ಜನರು ಸರಕಾರ ಹೇಳಿದ ನಿಯಮಗಳನ್ನು ಸರಿಯಾಗಿ ಪಾಲಿಸಲಿಲ್ಲ. ಮಾಸ್ಕ ಧರಿಸಲಿಲ್ಲ, ಸಾಮಾಜಿಕ ಅಂತರ ಕಾಯ್ದುಕೊಳ್ಳಲಿಲ್ಲ ಅದ್ದರಿಂದ ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿವೆ ಎಂದು ಜನತೆಯ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.

ಎರಡನೆ ಅಲೆಯು ಗಾಳಿಯ ಮೂಲಕವು ಹರಡಿದ್ದು ಜನರು ಮುಂಜಾಗ್ರತಾ ಕ್ರಮ ವಹಿಸಬೇಕಿತ್ತು, ಹಾಗೆ ಮಾಡಿದ್ದರೆ ಲಾಕ್ ಡೌನ್, ಸೀಲ್ ಡೌನ್ ಅವಶ್ಯಕತೆ ಇರುತ್ತಿರಲಿಲ್ಲ. ಜನರು ತಮ್ಮ ಜವಾಬ್ದಾರಿ ಮರೆತಿರುವುದರಿಂದ ಸರಕಾರ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವುದು ಅನಿವಾರ್ಯವಾಗಿದೆ ಎಂದರು.

ಆರೋಗ್ಯ ಸಚಿವರ ಈ ಹೇಳಿಕೆಗೆ ವಿರೋಧ ಪಕ್ಷದ ನಾಯಕರು ತೀವೃ ಆಕ್ರೋಶ ವ್ಯಕ್ತ ಪಡಿಸುತ್ತಿದ್ದು ಸರಕಾರ ಮಾಡಿದ ತಪ್ಪುಗಳನ್ನು ಜನರ ಮೇಲೆ ಹೇರುವ ಕೆಲಸ ಮಾಡುತ್ತಿದೆ. ತಜ್ಞರು ನವೆಂಬರ್ ತಿಂಗಳಲ್ಲಿಯೇ ಮುನ್ಸುಚನೆ ನೀಡಿದ್ದರೂ ಅದಕ್ಕೆ ಬೇಕಾದ ಪೂರ್ವ ತೈಯಾರಿ ಮಾಡಿಕೊಳ್ಳದೇ ಪರಿಸ್ಥಿತಿ ಕೈಮೀರಿದ ನಂತರ ಜನರ ಮೇಲೆ ಹರಿಹಾಯುವ ಕೆಲಸ ಮಾಡುತ್ತಿದೆ ಇದು ನಾಚಿಕೆಗೇಡಿನ ಸಂಗತಿ ಎಂದು ವಾಗ್ದಾಳಿ ನಡೆಸುತ್ತಿದ್ದಾರೆ.


Leave a Reply