Koppal

ಆಶಾ ಕಾರ್ಯಕರ್ತೆ ಮೇಲೆ ಅತ್ಯಾಚಾರ ಯತ್ನ ಆರೋಪಿ ಬಂಧನಕ್ಕೆ ಆಗ್ರಹ 


  • ಗಂಗಾವತಿ ; ನಗರದ ಖಾಸಗಿ ಆಸ್ಪತ್ರೆಯಲ್ಲಿ ಆಶಾ ಕಾರ್ಯಕರ್ತೆಯ ಮೇಲೆ ಅತ್ಯಾಚಾರ ಯತ್ನ ಖಂಡಿಸಿ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘ ಅಪರಾಧಿಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂದು ತಹಸೀಲ್ದಾರ್ ಕಚೇರಿಗೆ ಹೋಗಿ ಮನವಿ ಕೊಟ್ಟರು

ಕೊರೋನಾ ವಾರಿಯರ್ಸ್ ಎಂದೇ ಹೆಸರಾದ ಆಶಾ ಕಾರ್ಯಕರ್ತೆ ಮೇಲೆ ಅತ್ಯಾಚಾರ ಯತ್ನ ಘಟನೆ ಇಡೀ ಸಮಾಜವೇ ತಲೆತೆಗ್ಗಿಸುವಂತದ್ದು. ಅರೋಗ್ಯ ಕಾರ್ಯಕರ್ತೆಯರ ಮೇಲೆ ಈ ರೀತಿ ಆದರೆ ಜನಸಾಮಾನ್ಯರ ಪರಿಸ್ಥಿತಿ ಇನ್ನೆಷ್ಟು ಅಭದ್ರತೆ ಇರಬಹುದು. ಒಬ್ಬಂಟಿಯಾಗಿ ಆಶಾ ಕಾರ್ಯಕರ್ತೆಯರು ನೂರಾರು ಸರ್ವೆಗಳನ್ನು ಮಾಡಲು ಮನೆ ಮನೆಗೆ ಹೋಗುತ್ತಾರೆ ಇಂತ ಘಟನೆ ಕಿರುಕುಳ ಅನುಭವಿಸುತ್ತ ಬಂದಿದ್ದಾರೆ. ಅಲ್ಪ ಪಗಾರಕ್ಕಾಗಿ ಮನೆ ಮಕ್ಕಳು, ಗಂಡಂದಿರನ್ನು ಬಿಟ್ಟು ಅರೋಗ್ಯ ಸೇವೆ ಮಾಡುವ ಇಂತ ತಾಯಂದಿಯರಿಗೆ ಈ ಅತ್ಯಾಚಾರ ದೌರ್ಜನ್ಯ ವನ್ನು ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘ ಖಂಡಿಸುತ್ತಾ ಅಪರಾಧಿಗೆ ಕಠಿಣ ಶಿಕ್ಷೆ ವಿಧಿಸಲು ಆಗ್ರಹಿಸುತ್ತದೆ.
ಕನಕಗಿರಿ ತಾಲೂಕಿನ ಬಸರಿಹಾಳ ಗ್ರಾಮದ ರೇಶ್ಮಾ ಗಂ ಮಹೇಶ್ ಎಂಬ ಮಹಿಳೆಗೆ ಹೆರಿಗೆ ಮಾಡಿಸಲು ಬಸರಿಹಾಳ ಗ್ರಾಮದ ಆಶಾ ಕಾರ್ಯಕರ್ತೆ ಗಂಗಾವತಿ ನಗರದ ಉಪವಿಭಾಗ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದರು ಸರ್ಕಾರಿ ಆಸ್ಪತ್ರೆಯಲ್ಲಿ ಹೆರಿಗೆ ಆಗದ ಕಾರಣ ಸಮೀಪದ ಖಾಸಗಿ ಆಸ್ಪತ್ರೆಯಲ್ಲಿ ಗರ್ಭಿಣಿ ಮಹಿಳೆಯನ್ನು ದಾಖಲಿಸಿ ರಾತ್ರಿ ಆದ ಕಾರಣ ಆಶಾ ಕಾರ್ಯಕರ್ತೆ ಅದೇ ಆಸ್ಪತ್ರೆಯಲ್ಲಿ ಮಲಗಿರುತ್ತಾಳೆ ಇದೇ ವೇಳೆ ಗರ್ಭಿಣಿ ಮಹಿಳೆಯ ತಂದೆ ಬಾಲಪ್ಪ ತಂದೆ ಮುದುಕಪ್ಪ (59) ತಡ ರಾತ್ರಿ ಆಶಾ ಕಾರ್ಯಕರ್ತೆ ಮೇಲೆ ಅತ್ಯಾಚಾರಕ್ಕೆ ಯತ್ನಿಸಿ ನಂತರ ಜೀವ ಬೆದರಿಕೆ ಹಾಕಿದ್ದಾನೆ.
ತನ್ನ ಮಗಳ ಹೆರಿಗೆ ಮಾಡಿಸಲು ಬಂದ‌ ಆಶಾ ಕಾರ್ಯಕರ್ತೆಗೆ ಕರುಣೆ ತೋರದೆ ಬಲಾತ್ಕಾರಕ್ಕೆ ಯತ್ನಿಸಿರುವುದು ನಾಚಿಕೆಗೆಡಿನ ಸಂಗತಿ, ಹಗಲು ರಾತ್ರಿ ಎನ್ನದೆ ಗರ್ಭಿಣಿಯರ ಆರೈಕೆ ಮಾಡುತ್ತಾ ಹೆರಿಗೆ ಮಾಡಿಸುವವರೆಗೂ ತಮ್ಮ ಪರಿವಾರವನ್ನು ಬಿಟ್ಟು ಸಮಾಜದ ಕೆಲಸಕ್ಕೆ ಮುಂದೆ ಬಂದ ಮಹಿಳೆಯರನ್ನು ಈ ರೀತಿಯಾಗಿ ನೋಡುವುದು ಸಮಾಜಕ್ಕೆ ಕಪ್ಪು ಚುಕ್ಕೆ,ಹಳ್ಳಿಯಿಂದ ಹಗಲು ರಾತ್ರಿಯನ್ನದೆ
ಗರ್ಭಿಣಿ ಮಹಿಳೆಯರನ್ನು ಆಸ್ಪತ್ರೆಗೆ ಕರೆದುಕೊಂಡು ಬರುತ್ತಾರೆ ಅವರಿಗೆ ಉಳಿದುಕೊಳ್ಳಲು ಕೋಣೆ ವ್ಯವಸ್ಥೆ ಇಲ್ಲ, ಎಂದು ಮಾತನಾಡಿದರು ಈ ಸಂದರ್ಭದಲ್ಲಿ ಆಶಾ ಕಾರ್ಯಕರ್ತೆಯರ ಸಂಘದ ಜಿಲ್ಲಾ ಅಧ್ಯಕ್ಷ ಶರಣು ಗಡ್ಡಿ ಜಿಲ್ಲಾ ಕಾರ್ಯದರ್ಶಿ ಕೌಶಲ್ಯ ಗಂಗಾವತಿ ನಗರ ಘಟಕದ ಅಧ್ಯಕ್ಷೆ ವಿಜಯಲಕ್ಷ್ಮಿ ಆಚಾರ್ಯ ಲಾಲಬಿ, ಮತ್ತು ಗ್ರಾಮೀಣ ಘಟಕದ ತಾಲೂಕು ಅಧ್ಯಕ್ಷ ಶಾರದಾ ಕಟ್ಟಿಮನಿ ಆಶಾ ಕಾರ್ಯಕರ್ತೆಯರಾದ ಬಸ್ಸಮ್ಮ, ದೀಪ, ಮೇರುನಿಸ ಬೇಗಂ, ರೂಪ  ಮುಂತಾದವರು ಉಪಸ್ಥಿತರಿದ್ದರು .

ಹನುಮೇಶ್ ಬಟಾರಿ

 

 


Leave a Reply