BengaluruState

ಸಿನಿಮಾ ಪ್ರಿಯರಿಗೆ ಬಿಗ್ ಶಾಕ್, ಶುಕ್ರವಾರದಿಂದ ಚಿತ್ರಮಂದಿರಗಳು ಸ್ವಯಂ ಪ್ರೇರಿತ ಬಂದ್..!


ಬೆಂಗಳೂರು : ರಾಜ್ಯದಲ್ಲಿ ಸರಕಾರ ಟಪ್ ರೂಲ್ಸ್ ತರುವ ಮೊದಲೇ  ಚಿತ್ರರಂಗಕ್ಕೆ ಮತ್ತೊಂದು ಬಿಗ್ ಶಾಕ್ ಎದುರಾಗಿದ್ದು, ಶುಕ್ರವಾರದಿಂದ ಚಿತ್ರಮಂದಿರಗಳನ್ನು ಸ್ವಯಂ ಬಂದ್ ಮಾಡಲು ಪ್ರದರ್ಶಕರು ನಿರ್ಧರಿಸಿದ್ದಾರೆ.

ರಾಜ್ಯದಲ್ಲಿ ದಿನದಿಂದ ದಿನಕ್ಕೆ ಕೊರೊನಾ ವೈರಸ್ ಸೋಂಕಿನ ಪ್ರಕರಣಗಳು ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಚಿತ್ರಮಂದಿರಕ್ಕೆ ಪ್ರೇಕ್ಷಕರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿಲ್ಲ. ಹೀಗಾಗಿ ಶುಕ್ರವಾರದಿಂದ ರಾಜ್ಯಾದ್ಯಂತ ಚಿತ್ರಮಂದಿರಗಳನ್ನು ಬಂದ್ ಮಾಡಲಾಗುವುದು ಎಂದು ಪ್ರದರ್ಶಕರ ವಲಯದ ಅಧ್ಯಕ್ಷ ಕೆ. ಚಂದ್ರಶೇಖರ್ ಹೇಳಿದ್ದಾರೆ.

ರಾಜ್ಯದಲ್ಲಿ ಈಗಾಗಲೇ 650 ಕ್ಕೂ ಹೆಚ್ಚು ಚಿತ್ರಮಂದಿರಗಳು ಮುಚ್ಚಿವೆ. ಥಿಯೇಟರ್ ಗಳು ತೀವ್ರ ನಷ್ಟ ಅನುಭವಿಸುತ್ತಿವೆ. ಮೇ ಅಂತ್ಯದವರೆಗೂ ಬಂದ್ ಮಾಡುವ ನಿರ್ಧಾರ ಮಾಡಲಾಗಿದ್ದು ಸ್ಟಾರ್ ನಟರ ಚಿತ್ರಗಳು ಬಿಡುಗಡೆಯಾದ ಬಳಿಕ ಚಿತ್ರಮಂದಿರಗಳನ್ನು ಸ್ಟಾರ್ಟ್ ಮಾಡುತ್ತೇವೆ. ಈಗ ಪ್ರೇಕ್ಷಕರು ಬರುತ್ತಿಲ್ಲ ಇದರಿಂದ ಚಿತ್ರಮಂದಿರದ ವಿದ್ಯೂತ್ ಬಿಲ್ ಕೂಡ ಕಟ್ಟಲು ಆಗುತ್ತಿಲ್ಲ ಆದ್ದರಿಂದ  ನಿರ್ಧಾರ ಕೈಗೊಳ್ಳಲಾಗಿದೆ ಎಂದು ಹೇಳಿದ್ದಾರೆ.


Leave a Reply