BengaluruState

ಸರಕಾರಕ್ಕೆ ಕ್ಲಾಸ್ ತೆಗೆದುಕೊಂಡ ಸಿದ್ದರಾಮಯ್ಯ, ಟಗರಿನ ಗುಟುರಿಗೆ ದಂಗಾದ ಸಭೆ

ಏನಾಗ್ತಿದೆ ರಾಜ್ಯ ಬಿಜೆಪಿಯಲ್ಲಿ..? ರಾಷ್ಟ್ರಪತಿ ಆಡಳಿತಕ್ಕೆ ಸಿದ್ದರಾಮಯ್ಯ ಒತ್ತಾಯ

ಬೆಂಗಳೂರು: ರಾಜ್ಯಪಾಲರಿಗೆ ಆಡಳಿತದಲ್ಲಿ ಹಸ್ತಕ್ಷೇಪ ಮಾಡಲು ಅವಕಾಶವಿಲ್ಲವೆಂದು ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ. ರಾಜ್ಯಪಾಲರು ಸಭೆ ಕರೆದಿರುವ ಸರ್ವಪಕ್ಷ ಸಭೆಯಲ್ಲಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ ರಾಜ್ಯದ ಆಡಳಿತದಲ್ಲಿ ರಾಜ್ಯಪಾಲರ ಹಸ್ತಕ್ಷೇಪ ಸರಿಯಲ್ಲವೆಂದು ಹೇಳಿದ್ದಾರೆ.

ರಾಜ್ಯಪಾಲರು ಕರೆದ ಸಭೆಗೆ ಗೌರವದಿಂದ ಭಾಗಿಯಾಗಿದ್ದೇವೆ.  ರಾಜ್ಯದ ಆಡಳಿತದಲ್ಲಿ ಹಸ್ತಕ್ಷೇಪಕ್ಕೆ ರಾಜ್ಯಪಾಲರಿಗೆ ಅಧಿಕಾರವಿಲ್ಲ. ಅವರು ಸರ್ಕಾರಕ್ಕೆ ಈ ರೀತಿ ಸಭೆ ನಡೆಸಿ ಎಂದು ಸೂಚನೆ ನೀಡಬಹುದು ಎಂದು ಹೇಳಿದ ಅವರು, ಬಳಿಕ ಸರಕಾರವನ್ನು ತರಾಟೆಗೆ ತೆಗೆದುಕೊಮಡಿದ್ದು ತಜ್ಞರ ಸಲಹೆಯನ್ನು ಗಂಭೀರವಾಗಿ ಪರಿಗಣಿಸದೇ ಇರುವುದರಿಮದ ತಹ ಪರಿಸ್ಥಿತಿ ರಾಜ್ಉಕ್ಕೆ ಒದಗಿದೆ. ಕೋವಿಡ್ ಸಮಯದಲ್ಲಿಯೂ ಚುನಾವಣೆಗಳನ್ನು ಮಾಡಿ ಕೋವಿಡ್ ನಿಯಮಗಳನ್ನು ಗಾಳಿಗೆ ತೂರಿವೆ. ಇಷ್ಟೆಲ್ಲ ರಾದ್ದಾಂತವಾದರೂ ರಾಜ್ಯ ಮತ್ತು ದೇಶದಲ್ಲಿ ಇನ್ನೂ ಚುನಾವಣೆಗಳು ನಡೆಯುತ್ತಲೇ ಇದೆ. ಸರಕಾರದ ನಿರ್ಲಕ್ಷವೇ ಇದಕ್ಕೆಲ್ಲ ಕಾರಣವಾಗಿದೆ ಎಂದರು.

ಸಿಎಂ ಮತ್ತು ಸಚಿವರ ನಡುವೆ ಆಡಳಿತ ಸರಿಯಾಗಿಲ್ಲ ಸಿಎಂ ಒಂದುಕಡೆಯಾದರೆ ಆರೋಗ್ಯ ಸಚೀವ ಸುದಾಕರ್ ಮತ್ತೊಂದು ಕಡೆ ಇದಾರೆ, ಎಲ್ಲ ಜಿಲ್ಲೆಗಳಲ್ಲಿ ಉಸ್ತುವಾರಿ ಸಚಿವರುಗಳು ಕೆಲಸ ಮಾಡದೇ ಕೈಕಟ್ಟಿ ಕುಳಿತಿದ್ದಾರೆ ಪರಿಸ್ಥತಿ ಕೈಮೀರಿದ ಮೇಲೆ ನಿಯಂತ್ರಣಕ್ಕಾಗಿ ಓಡಾಡುವ ಕೆಲಸ ಮಾಡುತ್ತಿದ್ದಾರೆ ಎಂದು ಸಿಎಂ ಮತ್ತು ಸರಕಾರದ ವಿರುದ್ಧ ಮಾತಿನ ಚಾಟಿ ಬೀಸಿದರು.

ಇನ್ನು ಕರೋನ ಕೇಸ್‌ ಹೆಚ್ಚಳವಿರುವ ಪ್ರದೇಶ/ಜಿಲ್ಲೆಗಳನ್ನು 15 ದಿನ ಲಾಕ್‌ಡೌನ್‌ ಮಾಡಿ ಅಂತ ರಾಜ್ಯ ಸರ್ಕಾರಕ್ಕೆ ಮಾಜಿ ಸಿಎಂ ಹೆಚ್‌ಡಿ ಕುಮಾರಸ್ವಾಮಿ ಮನವಿ ಮಾಡಿಕೊಂಡಿದ್ದಾರೆ. ಇಂದು ರಾಜ್ಯಪಾಲರ ನೇತೃತ್ವದಲ್ಲಿ ನಡೆದ ಸರ್ವಪಕ್ಷ ಸಭೆ ಯಲ್ಲಿ ಮಾತನಾಡಿರುವ ಅವರು ಲಾಕ್‌ಡೌನ್‌ ಮಾಡುವುದು ಸದ್ಯದ ಪರಿಸ್ಥಿತಿಯಲ್ಲಿ ಅಗತ್ಯವಾಗಿದ್ದು, ನೈಟ್‌ ನೈಟ್ ಕರ್ಫ್ಯೂ ಜಾರಿ ಮಾಡಿರುವುದರಿಂದ ಯಾವುದೇ ಪ್ರಯೋಜನವಾಗುವುದಿಲ್ಲ ಅಂತ ಹೇಳಿದ್ದಾರೆ ಎನ್ನಲಾಗಿದೆ. ಬಡವರಿಗೆ 1 ತಿಂಗಳ ಆರ್ಥಿಕ ಸಹಾಯವನ್ನು ಮಾಡಿ, ಪರ್ಯಾಯ ಯೋಚನೆಗಳನ್ನು ಮಾಡಬೇಕಾಗಿದ್ದು, ಯಾವುದೇ ಮುಲಾಜು ಇಲ್ಲದೇ ತೀರ್ಮಾನಗಳನ್ನು ಸರ್ಕಾರ ಈ ಕೂಡಲೇ ತೆಗೆದುಕೊಂಡರೇ ಉತ್ತಮ ಅಂತ ಇದೇ ವೇಳೆ ಹೆಚ್‌ಡಿಕೆ ಹೇಳಿದ್ದಾರೆ.

 


Leave a Reply