NationalNew Delhi

ದೇಶದ ಜನತೆಗೆ ಮೋದಿ ಕೊಟ್ಟ ಸಂದೇಶವೇನು, ಲಾಕ್ ಡೌನ್ ಬಗ್ಗೆ ಏನಂದ್ರು ಪ್ರಧಾನಿ..?


ನವದೆಹಲಿ : ಕೊರೊನಾ ನಿಯಂತ್ರಣ ಮಾಡಲು ಲಾಕ್ ಡೌನ್ ಒಂದೇ ಕೊನೆಯ ಪಾಯವಲ್ಲ ಻ದನ್ನು ಕೊನೆಯ ಅಸ್ತ್ರವನ್ನಾಗಿ ಬಳಸಿ, ಮೈಕ್ರೋಜೋನ್ ಗಳನ್ನು ನಿರ್ಮಿಸುವುದರ ಮೂಲಕ ಕೊರೊನಾ ನಿಯಂತ್ರಣಕ್ಕೆ ಪ್ರಯತ್ನಿಸಿ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಮಂಗಳವಾರ ರಾತ್ರಿ ದೇಶವನ್ನು ಉದ್ದೇಶಿಸಿ ಅವರು ಮಾತನಾಡಿದರು. ಕೋವಿಡ್ ಎರಡನೇ ಅಲೆ ದೇಶದಲ್ಲಿ ತೀವೃಗತಿಯಲ್ಲಿ ಹರಡುತ್ತಿದೆ. ಆದ್ದರಿಂದ ದೇಶದ ಜನತೆ ಜಾಗೃತರಾಗಿರಿ ಅನಗತ್ಯವಾಗಿ ಹೊರಗಡೆ ಬರಬೇಡಿ ಎಂದು ಜನತೆಗೆ ಮನವಿ ಮಾಡಿದ್ದಾರೆ.

ಜನರ ರಕ್ಷಣೆಗಾಗಿ ಸರ್ಕಾರ ಆಕ್ಸಿಜನ್ ಉತ್ಪಾದನೆ ಮತ್ತು ಪೂರೈಕೆಗೆ ಕ್ರಮ ಕೈಗೊಂಡಿದೆ. ಜನವರಿ ಮತ್ತು ಫೆಬ್ರವರಿ ತಿಂಗಳುಗಳಲ್ಲಿ ಲಸಿಕೆಯ ಉತ್ಪಾದನೆ ಹೆಚ್ಛಾಗಿದೆ. ಇನ್ನು ಕೋವಿಡ್ ಹೆಚ್ಚಳವಾಗುತ್ತಿದ್ದು, ಆಸ್ಪತ್ರೆಯಲ್ಲಿ ಬೆಡ್ ಗಳ ಹೆಚ್ಚಳದ ಬಗ್ಗೆಯೂ ಕ್ರಮ ಕೈಗೊಳ್ಳಲಾಗಿದೆ. ನಮ್ಮ ದೇಶದಲ್ಲಿ ವಿಶ್ವದ ಮಟ್ಟದಲ್ಲಿ ಅತಿ ಹೆಚ್ಚು ಲಸಿಕಾ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ ಎಂದರು.

ವಿಜ್ಞಾನಿಗಳು ಅತೀ ಕಡಿಮೆ ಸಮಯದಲ್ಲಿ ಲಸಿಕೆಯನ್ನು ಕಂಡು ಹಿಡಿದಿದ್ದಾರೆ. ಈ ಮೂಲಕ ಲಸಿಕೆ ಅಭಿಯಾನದ ಮೂಲಕ ವೇಗವಾಗಿ ವ್ಯಾಕ್ಸಿನ್ ವಿತರಣೆ ಮಾಡಲಾಗುತ್ತಿದೆ ಎಂದು ಮೋದಿ ತಿಳಿಸಿದರು.

 


Leave a Reply