bagalkotState

ಮಾಸ್ಕ ಇಲ್ಲದವರಿಗೆ ತಾಲ್ಲೂಕಾಡಳಿತದಿಂದ ದಂಡದ ಜೊತೆಗೆ ಹೂವಿನ ಹಾರ


ಬೆಳಗಾವಿ: ಜಿಲ್ಲೆಯಲ್ಲಿ ಕೊರೊನಾ ಹೆಚ್ಚುತ್ತಿರುವ ಹಿನ್ನೆ ಅಥಣಿ ಪಟ್ಟಣದಲ್ಲಿ ಕೋವಿಡ್ ರೂಲ್ಸ್ ಪಾಲಿಸದ ಸಾರ್ವಜನೀಕರಿಗೆ ಹೂವಿನ ಹಾರ ಕಾಕುವುದರ ಮೂಲಕ ಕೋವಿಡ್ ಪರೀಕ್ಷೆಗೆ ಒಳಪಡಿಸಿ ತಾಲ್ಲೂಕಾಡಳಿತ ಶಾಕ್ ನೀಡಿದೆ.

ಕೋವಿಡ್ ಎರಡನೇ ಅಲೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಸರಕಾರ ಮತ್ತು ಜಿಲ್ಲಾಡಳಿತ ನಿಯಮ ಪಾಲಿಸುವಂತೆ ಜನರಲ್ಲಿ ಎಷ್ಟೇ ಮನವಿ ಮಾಡಿದರು ಅತ್ತಕಡೆ ಗಮನ ಹರಿಸುತ್ತಿಲ್ಲ. ಇದರಿಂದ ಬೇಸತ್ತ ಅಥಣಿ ತಾಲ್ಲೂಕಾಡಳಿತ ಹೊಸ ಪ್ರಯೋಗ ನಡೆಸಿದ್ದು ಮಾಸ್ಕ ಇಲ್ಲದೇ ಹೊರಗೆ ಬಂದವರಿಗೆ ದಂಡವಿಧಿಸುವುದರ ಜೊತೆಗೆ ಹೂವಿನ ಹಾರ ಹಾಕಿ, ಸ್ಥಳದಲ್ಲಿ ಕೋವಿಡ್ ಪರೀಕ್ಷೆ ಮಾಡುತ್ತಿದ್ದಾರೆ.

ಅಥಣಿ ತಹಶೀಲ್ದಾರ ದುಂಡಪ್ಪಾ ಕೋಮಾರ ನೇತೃತ್ವದಲ್ಲಿ ಕಾರ್ಯಾಚರಣೆ ಪ್ರಾರಂಭವಾಗಿದ್ದು, ಮಾಸ್ಕ ಇಲ್ಲದೆ ಓಡಾಡುವರು ಬೇಡ ಬೇಡ ಎಂದರೂ ಬಿಡದೇ ಸ್ಥಳದಲ್ಲೆ ಕೊವಿಡ್ ಪರೀಕ್ಷೇಗೆ ಒಳಪಡಿಸಲಾಗುತ್ತಿದೆ.‌ ಮಾಸ್ಕ್ ಇಲ್ಲದೆ ಬೈಕ್ ಸವಾರರಿಗೆ ಸರಿಯಾದ ಪಾಠ ಕಲಿಸಿದ ತಾಲೂಕಾಡಳಿತದ ಕಾರ್ಯಾಚರಣೆಗೆ ಪುರಸಭೆ, ಆರೋಗ್ಯ ಇಲಾಖೆ ಸಿಬ್ಬಂದಿ ಹಾಗೂ  ಪೊಲೀಸರ ಸಾಥ್ ನೀಡಿದ್ದಾರೆ.

 


Leave a Reply