BelagaviState

ಬೆಳಗಾವಿಯಲ್ಲಿ ರಸ್ತೆಗಿಳಿದ ಬಸ್ ಗಳು…


ಬೆಳಗಾವಿ: ಸಾರಿಗೆ ನೌಕರರ ಮುಷ್ಟಕರದಿಂದ ಪರದಾಡುತ್ತಿದ್ದ ಪ್ರಯಾಣಿಕರಿಗೆ ಇಮದು ಕೊಂಚ ರಲೀಪ್ ಸಿಕ್ಕಂತಾಗಿದೆ. ಸಾರಿಗೆ ನೌಕರರು ಮುಷ್ಕರ ಬಿಟ್ಟು ಕರ್ತವ್ಯಕ್ಕೆ ಹಾಜರಾಗುತ್ತಿದ್ದು ಬೆಳಗಾವಿ ಕೇಂದ್ರ ನಿಲ್ದಾಣ ಹಾಗೂ ಸಿಟಿ ನಿಲ್ದಾಣದಿಂದ ಬಸ್ ಸಂಚಾರ ಸೇವೆ ಪ್ರಾರಂಬವಾಗುತ್ತಿದೆ.

ಎಲ್ಲ ಬಸ್ ಗಳು ರಸ್ತೆಗೆ ಇಳಿದಿಲ್ಲವಾದರೂ ಇಂದು ಶೇ.40 ಪ್ರತಿಶತದಷ್ಟು ಬಸ್ ಗಳು ಸಂಚಾರವನ್ನು ಆರಂಭಿಸಿವೆ.  ಬೆಳಗಾವಿಯಿಂದ  ಪ್ರಮುಖ ಸ್ಥಳಗಳಿಗೆ 90 ಬಸ್‍ಗಳ ಸಂಚಾರ ಆರಂಭಿಸಲಾಗಿದೆ. ವಿಜಯಪುರ, ಬಾಗಲಕೋಟೆ ಸೇರಿ ಪ್ರಮುಖ ಸ್ಥಳಗಳಿಗೆ ಬಸ್ ಸಂಚಾರ ಪ್ರಾರಂಭವಾಗಿದೆ.

ಬಸ್ ಸಂಚಾರ ಸ್ಥಗಿತಗೊಳಿಸಿದ್ದರಿಂದ ಸಾರ್ವಜನೀಕರಿಗೆ ತೊಂದರೆಯಾಗುತ್ತಿದ್ದು ನೌಕರರು ಕೆಲಸಕ್ಕೆ ಹಾಜರಾಗಬೇಕೆಂದು ಹೈಕೋರ್ಟ್ ನೋಟಿಸ್ ಜಾರಿಗೊಳಿಸಿತ್ತು. ನ್ಯಾಯಾಲಯದ ಆದೇಶಕ್ಕೆ ತಲೆ ಭಾಗಿದ ನೌಕರರು ಒಬ್ಬಬ್ಬರಾಗಿ ಕೆಲಸಕ್ಕೆ ಹಾಜರಾಗುತ್ತಿದ್ದು ನಾಳೆಯ ವೇಳೆಗೆ ಎಲ್ಲ ಬಸ್ ಗಳು ರಸ್ತೆಗಿಳಿಯುವ ಸಾಧ್ಯತೆಗಳಿವೆ.


Leave a Reply