National

ಆಟೋ ರೀಕ್ಷಾ ಮೇಲೆ ಶವಯಾತ್ರೆ, ಶವ ಸಾಗಿಸಲು ಸಿಗುತ್ತಿಲ್ಲ ಅಂಬ್ಯೂಲೆನ್ಸ್


ವಾರಾಣಾಸಿ: ಕೋವಿಡ್ ನಿಂದ ಮೃತಪಟ್ಟ ಶವ ಸಾಗಿಸಲು ಅಂಬ್ಯೂಲೆನ್ಸ್ ಸಿಗದೇ ಅಟೋ ರೀಕ್ಷಾ ಮೇಲೆ ಶವ ಸಾಗಿಸಿರುವ ಘಟನೆ ವಾರಣಾಸಿಯಲ್ಲಿ ನಡೆದಿದ್ದು ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.

ಕೊರೊನಾದಂತಹ  ಹೆಮ್ಮಾರಿ ದೇಶವನ್ನೇ  ಅಲ್ಲಾಡಿಸಿ ಬಿಟ್ಟಿದೆ. ಆಸ್ಪತ್ರೆಗಳಲ್ಲಿ ಬೆಡ್ ಇಲ್ಲದೇ, ಬೆಡ್ ಸಿಕ್ಕರೂ ವೆಂಟಿಲೇಟರ್ ಇಲ್ಲದೇ ಸೋಂಕಿತರು ಪರದಾಡುವಂತಾದರೇ, ಸೋಂಕಿನಿಂದ ಸತ್ತವರಿಗೆ ಅಂತ್ಯಸಂಸ್ಕಾರ ಮಾಡಲು ಚಿತಾಗಾರವಿಲ್ಲದೇ ಕಾಯುವಂತಹ ಪರಿಸ್ಥಿತಿಗಳು ಅಲ್ಲಲ್ಲಿ ಕಂಡು ಬರುತ್ತಿದ್ದವು. ಆದರೆ ಇದೀಗ ಶವಗಳನ್ನು ಸಾಗಿಸಲು ಅಂಭ್ಯೂಲೆನ್ಸ ಕೂಡ ಸಿಗದಂತಹ ಪರಿಸ್ಥಿತಿ ದೇಶದಲ್ಲಿ ನಿರ್ಮಾಣವಾಗಿದೆ.

ಹೆಮ್ಮಾರಿಯಿಂದ ಮೃತಪಟ್ಟ ವ್ಯಕ್ತಿಯೊಬ್ಬನ ಶವ ಸಾಗಿಸಲು ಆಂಬುಲೇನ್ಸ್ ಸಿಗದೇ ಆಟೋ ರೀಕ್ಷಾ ಮೇಲೆ ಸಾಗಿಸಿದಂತಹ ಘಟನೆ ವಾರಣಾಸಿಯಲ್ಲಿ ನಡೆದಿದೆ. BHUನ ಸುಂದರ್ ಲಾಲಾ ಆಸ್ಪತ್ರೆಯಲ್ಲಿ ಕೊರೊನಾದಿಂದ ಮೃತಪಟ್ಟ ವ್ಯಕ್ತಿಗೆ  ಆಂಬುಲೇನ್ಸ್ ನೀಡದಿದ್ದಾಗ ಕುಟುಂಬಸ್ಥರು ಆಟೋ ರೀಕ್ಷಾ ಮೂಲಕ ಶವ ಸಾಗಿಸಿದ್ದಾರೆ.


Leave a Reply