National

ಆಕ್ಸಿಜನ್ ಟ್ಯಾಂಕ್ ಸೋರಿಕೆ: ಒಂದಲ್ಲ,ಎರಡಲ್ಲ ಬರೋಬ್ಬರಿ 35 ಸೋಂಕಿತರ ಬಲಿ..?


ನಾಸಿಕ್: ಮಹಾರಾಷ್ಟ್ರದ ಹಲವಾರು ಜಿಲ್ಲೆಗಳಲ್ಲಿ ಆಮ್ಲಜನಕದ ಕೊರತೆಯ ಮಧ್ಯೆ, ನಾಸಿಕ್ನ ಜಾಕಿರ್ ಹುಸೇನ್ ಆಸ್ಪತ್ರೆಯಿಂದ ಆಮ್ಲಜನಕ ಟ್ಯಾಂಕ್ ಸೋರಿಕೆಯಾಗಿದೆ.ಸೋರಿಕೆಯಿಂದ ಸುಮಾರು 35ಕ್ಕೂ ಹೆಚ್ಚು ರೋಗಿಗಳು ಬಲಿಯಾಗಿದ್ದಾರೆ ಎನ್ನಲಾಗಿದೆ.
ಆಸ್ಪತ್ರೆಯ ಹೊರಗೆ ಆಮ್ಲಜನಕ ಟ್ಯಾಂಕ್ ಸೋರಿಕೆಯಾದ ಕಾರಣ ಆ ಪ್ರದೇಶದಾದ್ಯಂತ ಅನಿಲ ಸ್ಫೋಟಗೊಂಡಿತು. ಸ್ಥಳಕ್ಕೆ ಅಗ್ನಿಶಾಮಕ ದಳದ ತಂಡದವರು ಧಾವಿಸದ್ದಾರೆ.
ಜಾಕೀರ್ ಹುಸೇನ್ ಆಸ್ಪತ್ರೆಯನ್ನು ನಾಸಿಕ್ ಮುನ್ಸಿಪಲ್ ಕಾರ್ಪೋರೇಶನ್ ನಡೆಸುತ್ತಿದೆ. ಸುಮಾರು 171 ಕೋವಿಡ್-19 ರೋಗಿಗಳಲ್ಲಿ 70ಕ್ಕೂ ಹೆಚ್ಚು ಮಂದಿ ಗಂಭೀರವಾಗಿದ್ದಾರೆ ಎನ್ನಲಾಗಿದೆ.


Leave a Reply