BengaluruState

ಹೊಸ ಮಾರ್ಗಸೂಚಿಯನ್ನು ಜಾರಿಗೊಳಿಸುವುದು ಪೊಲೀಸ್ ಇಲಾಖೆಯ ಜವಾಬ್ದಾರಿ


ಬೆಂಗಳೂರು: ಕೋವಿಡ್ ಎರಡನೇ ಅಲೆ ನಯಂತ್ರಿಸಲು ತಜ್ಞರ ಸಲಹೇ ಮೇರೆಗೆ ಮತ್ತು ಸರ್ವಪಕ್ಷ ಸಭೆಯಲ್ಲಿ ಚರ್ಚಿಸಿ ಸರಕಾರವು ಹೊಸ ಮಾರ್ಗಸೂಚಿಯನ್ನು ಜಾರಿಗೊಳಿಸಿದ್ದು ಅದನ್ನು ರಾಜ್ಯವ್ಯಾಪಿಯಾಗಿ ಕಟ್ಟುನಿಟ್ಟಾಗಿ ಜಾರಿಗೊಳ್ಳುವಂತೆ ಹಿರಿಯ ಪೊಲೀಸ್ ಅಕಾರಿಗಳಿಗೆ ಜವಾಬ್ದಾರಿ ಹೊತ್ತು ಕೆಲಸ ಮಾಡಬೇಕೆಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದರು.

ಮಾದ್ಯಮಗಳೊಂದಿಗೆ ಮಾತನಾಡಿದ ಅವರು  ಬೆಂಗಳೂರು, ಇತರೆ ಜಿಲ್ಲೆಗಳಲ್ಲಿ ಕೋವಿಡ್ ನಿಯಮವನ್ನು ಪರಿಪಾಲನೆ ಮಾಡುವ ಸಂಬಂಧ ಸಭೆ ನಡೆಸಿ ಅಕಾರಿಗಳಿಗೆ ಜವಾಬ್ದಾರಿ ಹಂಚಿಕೆ ಮಾಡಲಾಗುವುದು ರಾಜ್ಯ ಸರ್ಕಾರ ಪ್ರಕಟ ಮಾಡಿರುವ ಮಾರ್ಗಸೂಚಿ ಪಾಲನೆಗೆ ಜನರ ಸಹಕಾರ ಅತ್ಯಗತ್ಯ. ಜನರು ನಿಯಮಗಳನ್ನು ಪಾಲನೆ ಮಾಡುವ ಮೂಲಕ ನಿಮ್ಮ, ಸಮಾಜದ ಹಾಗೂ ರಾಜ್ಯದ ಆರೋಗ್ಯವನ್ನು ಕಾಪಾಡಬೇಕು. ನಿಯಮಗಳ ಪರಿಪಾಲನೆಯಲ್ಲೇ ಜನರ ಆರೋಗ್ಯವೂ ಅಡಗಿದೆ ಎಂಬುದನ್ನು ತಿಳಿಯಬೇಕು ಎಂದು ತಿಳಿಸಿದರು.

ಈಗಾಗಲೇ ಜಾರಿಗೆ ತಂದಿರುವ ರಾತ್ರಿ ಕಫ್ರ್ಯೂವನ್ನು ಕಟ್ಟುನಿಟ್ಟಾಗಿ ಪಾಲಿಸಬೇಕಾಗಿದೆ. ಅನಗತ್ಯವಾಗಿ ಓಡಾಟ ಮಾಡುವುದನ್ನು ನಿಲ್ಲಿಸಬೇಕು, ಮಾರುಕಟ್ಟೆ ಪ್ರದೇಶಗಳಲ್ಲಿ ಜನ ಸಂದಣಿ ಹೆಚ್ಚಾಗದಂತೆ ಪ್ರತಿಯೊಬ್ಬರೂ ಮುನ್ನೆಚ್ಚರಿಕೆ ವಹಿಸಬೇಕೆಂದು ಹೇಳಿದರು.

ಅಲ್ಲದೆ, ಸಾರ್ವಜನಿಕರು ವೈಯಕ್ತಿಕ ಸ್ವಚ್ಛತೆ, ಸಾಮಾಜಿಕ ಅಂತರ ಹಾಗೂ ಮಾಸ್ಕ್ ಧರಿಸುವುದನ್ನು ಕಡ್ಡಾಯವಾಗಿ ಪಾಲನೆ ಮಾಡುವ ಮೂಲಕ ಸರ್ಕಾರರೊಂದಿಗೆ ಸಹಕರಿಸಬೇಕೆಂದು ತಿಳಿಸಿದರು.


Leave a Reply