Belagavi

“ಮಹತ್ವ ಜ್ಯೋತಿಬಾ ಫುಲೆ ಇವರ ಕರ‍್ಯ ಅವಿಸ್ಮರಣೀಯ” ಡಾ|| ಪ್ರಾ.ವಿ.ಎಸ್.ಮಾಳಿ


ಸಂಕೇಶ್ವರ ಏ. ಶಿಕ್ಷಣಕ್ಕೆ ಹೆಚ್ಚು ಮಹತ್ವ ಕೊಟ್ಟವರು ಮಹಾತ್ಮಾ ಜ್ಯೋತಿಬಾ ಫುಲೆ ಇವರು ಮಾಡಿರುವ ಕರ‍್ಯ ಇವತ್ತಿನ ಸಮಾಜದಲ್ಲಿ ಮಾದರಿ ಆಗಿರುತ್ತದೆ . ಎಂದು ಡಾ|| ಪ್ರಾ.ವಿ.ಎಸ್.ಮಾಳಿ. ಹಾರುಗೇರಿ ಇವರು ಮರ‍್ಕೆಟ್ ಅಂಡ್ ನಲ್ಲಿ ಹಿಂದೂ ಮಾಳಿ(ಮಾಲಗಾರ ) ಸಮಾಜದ ಮಹಾತ್ಮ ಜ್ಯೋತಿಬಾ ಫುಲೆ ಇವರ ೧೯೪ ನೇ ಜಯಂತಿ ಉತ್ಸವದಲ್ಲಿ ಮಾತನಾಡುತ್ತಾ ಜ್ಯೋತಿಬಾ ಫುಲೆ ಇವರು ಸಮಾಜನಲ್ಲಿ ಅನ್ಯಾಯವಿರುದ್ದ ಹೋರಾಟ ಮಾಡಿ ಸಾಮಾನ್ಯ ಜನರ ಅಭಿವೃದ್ದಿ ಸಲುವಾಗಿ ಶಿಕ್ಷಣದ ಮಹತ್ವವನ್ನು ತಿಳಿಸಿದರು .ಕರ‍್ಯಕ್ರಮದಲ್ಲಿ ಶ್ರೀ.ದೂರದುಂಡೇಶ್ವರ ಮಠದ ಪಂಚಮ ಶ್ರೀ.ಶಿವಲಿಂಗೇಶ್ವರ ಮಹಾಸ್ವಾಮಿಜಿ ಇವರು ತಮ್ಮ ಅಶರ‍್ವಚನದಲ್ಲಿ ಜ್ಯೋತಿಬಾ ಫುಲೆ ಇವರ ಆತ್ಮ ಚರಿತ್ರ ಪ್ರತಿಯೊಬ್ಬರು ತಿಳಿದು ಕೊಳ್ಳಬೇಕು ,ಅವರು ಮಾಡಿರುವ ಸಾಧನೆಗಳು ಇವತ್ತಿನ ವಿದ್ಯರ‍್ಥಿ ಮತ್ತು ವಿದ್ಯರ‍್ಥಿನಿಯರಿಗೆ ದಾರಿದೀಪ ವಾಗಿದೆ . ಎಂದು ಹೇಳಿದರು . ಕರ‍್ಯಕ್ರಮಕ್ಕೆ ಶ್ರೀ.ಶಂಕರಲಿಂಗದ ಮಠಾಧಿಪತಿ ಸಚ್ಚಿದಾನಂದ ಅಭಿನವ ವಿದ್ಯಾನರಸಿಂಹ ಭಾರತಿ ಮಹಾಸ್ವಾಮಿಜಿ ಕೋಟಬಾಗಿ ಸಿದ್ದರೂಢ ಮಠದ ತಾಯಿಯಾದ ಶ್ರೀಮತಿ ರೇಖಾದೇವಿ ಹಾಗೂ ಹುಕ್ಕೇರಿ ತಾಲೂಕಿನ ಮಾಳಿ ಸಮಾಜ ಬಾಂಧವರು ಉಪಸ್ಥಿತರಿದ್ದರು.ಕರ‍್ಯಕ್ರಮದಲ್ಲಿ ಮಾಳಿ ಸಮಾಜದ ಪ್ರತಿಭಾವಂತ ವಿದ್ಯರ‍್ಥಿಗಳಿಗೆ ಹಾಗೂ ಕ್ರೀಡಾ ಪಟುಗಳಿಗೆ ಸತ್ಕಾರ ಮಾಡಲಾಯಿತು. ಕರ‍್ಯಕ್ರಮದ ಸೂತ್ರ ಸಂಚಾಲಕ ಶಂಕರ ಚುರಮುರೆ ಇವರು ಮಾಡಿದರು ,ವಂದನರ‍್ಪಣೆ ಮಾಳಿ ಸಮಾಜದ ಆದ್ಯಕ್ಷ ಮಹಾಂತೇಶ ಮಂಗಸುಳಿ ಇವರು ಮಾಡಿದರು


Leave a Reply