vijayapur

“ಜನವಸತಿಗಳಿಗೆ ಬಹುಹಳ್ಳಿ ಕುಡಿಯುವ ನೀರು ಸರಬರಾಜು ಯೋಜನೆಯಿಂದ ನೀರು ಪೂರೈಕೆ”: ಗೋವಿಂದ.ರೆಡ್ಡಿ


ವಿಜಯಪುg ಏ. ೨೧ : ೨೦೨೧-೨೨ ನೇ ಸಾಲಿನ ಜಲ ಜೀವನ ಮಿಷನ್ ಯೋಜನೆಯಡಿ ನೀರು ಪೂರೈಕೆಯಾಗುವಂತಹ ಜನವಸತಿಗಳಲ್ಲಿ ಮೂಲಸೌಕರ್ಯ ಹಾಗೂ ಕಾರ್ಯಾತ್ಮಕ ನಳ ಸಂಪರ್ಕ ಕಲ್ಪಿಸುವ ೩೩೫ ಕಾಮಗಾರಿಗಳನ್ನು ತೆಗೆದುಕೊಳ್ಳಲಾಗುತ್ತಿದೆ. ಈ ಎಲ್ಲ ೩೩೫ ಜನವಸತಿಗಳಲ್ಲಿ ಬಹುಹಳ್ಳಿ ಕುಡಿಯುವ ನೀರು ಸರಬರಾಜು ಯೋಜನೆ ಯಿಂದ ನೀರನ್ನು ಪಡೆದುಕೊಳ್ಳಲಾಗುತ್ತಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗೋವಿಂದ.ರೆಡ್ಡಿ ಅವರು ತಿಳಿಸಿದರು.

 

ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿAದು ನಡೆದ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಸಮಿತಿ (ಆWSಒ) ಸಭೆಯಲ್ಲಿ ಮಾತನಾಡಿದ ಅವರು ೨೦೨೦-೨೧ ನೇ ಸಾಲಿನಲ್ಲಿ ೨೯೮ ಜನವಸತಿಗಳಲ್ಲಿ ೧೧೫೫೬೯ ಮನೆಗಳಿಗೆ ಕಾರ್ಯತ್ಮಕ ನಳ ಸಂಪರ್ಕ ಹಾಗೂ ಪೈಪ್ ಲೈನ್ ಕಾಮಗಾರಿಗಳನ್ನು ತೆಗೆದುಕೊಳ್ಳಲಾಗುತ್ತಿದ್ದು ಈ ಕಾಮಗಾರಿಗಳು ಕನಿಷ್ಠ ೫೫ ಎಲ್ .ಪಿ. ಸಿ.ಡಿ ನೀರು ಸರಬರಾಜು ಇರುವ ಬಹುಹಳ್ಳಿ ಕುಡಿಯುವ ನೀರಿನ ಯೋಜನೆಗಳಿಂದ ನೀರನ್ನು ಪಡೆದುಕೊಂಡು ಗ್ರಾಮಗಳಲ್ಲಿ ಮನೆ ಮನೆಗಳ ನಳ ಸಂಪರ್ಕವನ್ನು ನೀಡುವ ಕಾಮಗಾರಿಗಳು ಚಾಲ್ತಿಯಲ್ಲಿವೆ ಎಂದು ತಿಳಿಸಿದರು.

ವಿಜಯಪುರ ಜಿಲ್ಲೆಯಲ್ಲಿರುವ ೩೩೫ ಜನವಸತಿಗಳಡಿ ಬರುವ ೧೬೫೨೭೦ ಮನೆಗಳಿಗೆ ನಳಗಳ ಸಂಪರ್ಕ ಕಲ್ಪಿಸಲು ಜೆ.ಜೆ.ಎಂ ೨೨೧೫ ಲೆಕ್ಕ ಶಿರ್ಷಿಕೆಯಡಿ ರೂ. ೩೦೯.೪೩ ಕೋಟಿಗಳ ಮೋತ್ತದ ಕ್ರಿಯಾಯೋಜನೆಗೆ ಸಭೆಯಲ್ಲಿ ಸರ್ವಾನುಮತದಿಂದ ಒಪ್ಪಿಗೆ ನೀಡಿತು.

 

ಈ ಸಂದರ್ಭದಲ್ಲಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಸಮಿತಿ ಹಾಗೂ ವಿಭಾಗಿಯ ಅರಣ್ಯ ಅಧಿಕಾರಿಗಳಾದ ಗಿರೀಶ್.ಹಾಲಕುಡೆ, ಕೃಷಿ ಜಂಟಿ ನಿರ್ದೇಶಕರಾದ ಡಿ.ಡಬ್ಲ್ಯೂ.ರಾಜಶೇಖರ್, , ಆರಿಫ್. ಬಿರಾದರ್, ಪಿ. ಎಸ್. ನಾಯಕ್, ದಿವಾಕ್ಷಿ. ಜಾನಕಿ, ಎಸ್. ಆರ್. ರುದ್ರವಾಡಿ, ಜೆ. ಪಿ. ಶೆಟ್ಟಿ, ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.


Leave a Reply