BelagaviState

ಸುಣಧೋಳಿ ಜಡಿಸಿದ್ದೇಶ್ವರ ಜಾತ್ರೆಗೂ ಕೊರೊನಾ ಕಂಟಕ, ಜಾತ್ರೆ ರದ್ದುಗೊಳಿಸಿದ ತಾಲ್ಲೂಕಾಡಳಿತ


ಮೂಡಲಗಿ: ತಾಲ್ಲೂಕಿನ ಸುಣಧೋಳಿ ಗ್ರಾಮದಲ್ಲಿ ಮೇ 1ರಂದು ನಡೆಯಲಿದ್ದ ಪವಾಡ ಪುರುಷ ಜಡಿಸಿದ್ದೇಶ್ವರ ಜಾತ್ರಾ ಮಹೋತ್ಸವವನ್ನು ಕೊರೊನಾ ಹಿನ್ನೆಲೆ ರದ್ದು ಗೊಳಿಸಿ ತಾಲ್ಲೂಕಾಡಳಿತ ಪ್ರಕಟಣೆ ಹೊರಡಿಸಿದೆ.

ಕೊರೊನಾ ಎರಡನೆ ಅಲೆಯು ತೀವೃಗತಿಯಲ್ಲಿ ಹರಡುತ್ತಿರುವ ಹಿನ್ನೆಲೆಯಲ್ಲಿ ಜಾತ್ರಾಮಹೋತ್ಸವವನ್ನು ಸಂಪೂರ್ಣವಾಗಿ ರದ್ದುಗೊಳಿಸಿ ಆದೇಶ ಹೊರಡಿಸಲಾಗಿದ್ದು. ಭಕ್ತರು ದೇವಸ್ಥಾನದತ್ತ ಆಗಮಿಸದಂತೆ ಮತ್ತು ಜಾತ್ರಾ ತಯಾರಿ ಮಾಡಿಕೊಳ್ಳದಂತೆ ಮನವಿ ಮಾಡಲಾಗಿದೆ. ಏಪ್ರೀಲ್ 30 ರಿಂದ ಗ್ರಾಮದಲ್ಲಿ ಸೆ.144 ಜಾರಿಯಾಗಲಿದ್ದು ಮುಂದಿನ ಆದೇಶದವರೆಗೂ ಮುಂದು ವರೆಯಲಿದ್ದು ಉಲ್ಲಂಘನೆ ಮಾಡಿದರೆ, ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಕುಲಗೋಡ ಪೊಲೀಸ್ ಠಾಣೆಯಿಂದ ಪ್ರಕಟಣೆ ಮಾಡಲಾಗಿದೆ.

ಪ್ರತಿ ವರ್ಷ ದವನದ ಹುಣ್ಣಿಮೆಯಾದ ಐದನೇ ದಿನಕ್ಕೆ  ಶ್ರೀಜಡಿಸಿದ್ದೇಶ್ವರ ರಥೋತ್ಸವ ಜರಗುವುದು ರೂಡಿಯಲ್ಲಿದ್ದು, ಹಗ್ಗವಿಲ್ಲದೇ ರಥ ಚಲಿಸುವುದು ಈ ಕ್ಷೇತ್ರದ ವಿಶೇಷತೆಯಾಗಿದೆ. ಹೋದ ವರ್ಷದಲ್ಲಿಯೂ ಕೊರೊನಾ ಮೊದಲ ಅಲೆಯಯ ಮುಂಜಾಗೃತೆಗಾಗಿ ಜಾತ್ರೆಯನ್ನು ರದ್ದುಗೊಳಿಸಲಾಗಿತ್ತು. ಈ ಬಾರಿಯೂ ಕೋವಿಡ್ ಎರಡನೇ ಅಲೆಯ ಕರಾಳ ಛಾಯೆ ಜಾತ್ರೆಯ ಮೇಲೆ ಬಿದ್ದಿದ್ದು ಈ ಬಾರಿಯು ರದ್ದುಗೊಳಿಸಿ ಆದೇಶ ಹೊರಡಿಸಲಾಗಿದೆ.

 

 


Leave a Reply