Gadag

ಮೇ 4 ರ ವರೆಗೆ ಜಿಲ್ಲಾದ್ಯಂತ ಪ್ರತಿ ದಿನ ರಾತ್ರಿ ಹಾಗೂ ವಾರಾಂತ್ಯ ಪೂರ್ಣ ಕಫ್ರ್ಯೂ


ಗದಗ  21: ಕೊರೋನಾ ಸೋಂಕು ಅಧಿಕಗೊಳ್ಳುತ್ತಿದ್ದು ಸೋಂಕಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ  ಮೇ 4 ರ ವರೆಗೆ ಸರ್ಕಾರ  ಕಠಿಣ ಕ್ರಮಗಳ  ಕುರಿತು ನೂತನ ಮಾರ್ಗಸೂಚಿ ಹೊರಡಿಸಿದೆ,  ಗದಗ ಜಿಲ್ಲೆಯಲ್ಲಿ ನೂತನ  ಮಾರ್ಗಸೂಚಿಗಳ ಪಾಲನೆಗೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ  ಎಂ.ಸುಂದರೇಶ್ ಬಾಬು ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು ಗದಗ ಜಿಲ್ಲೆಯಾದ್ಯಂತ  ಮೇ 4 ರವರೆಗೆ ರಾತ್ರಿ 9 ರಿಂದ ಬೆಳಿಗ್ಗೆ 6 ವರೆಗೆ ರಾತ್ರಿ ಕರ್ಫ್ಯೂ ಜಾರಿಯಲ್ಲಿರುತ್ತದೆ. ಮತ್ತು ಶುಕ್ರವಾರ ರಾತ್ರಿ 9 ರಿಂದ ಸೋಮವಾರ ಬೆಳಿಗ್ಗೆ 6 ವರೆಗೆ ಪೂರ್ತಿಯಾಗಿ ಕರ್ಫ್ಯೂವಿಧಿಸಲಾಗಿದೆ..ಈ ನಿಯಮಗಳನ್ನು ಸಾರ್ವಜನಿಕರು ಪಾಲಿಸುವ ಮೂಲಕ ಸೋಂಕು ನಿಯಂತ್ರಣಕ್ಕೆ ಮುಂದಾಗಬೇಕೆಂದು ಹೇಳಿದ್ದಾರೆ.
ರಾತ್ರಿ ಕಪ್ರ್ಯೂ ವೇಳೆಯಲ್ಲಿ ತುರ್ತು ಸಂಚಾರ ಹೊರತುಪಡಿಸಿ ಉಳಿದ ಎಲ್ಲ ವಾಹನ ಸಂಚಾರ ಬಂದ್ ಮಾಡಲಾಗಿದೆ.  ವಾರಾಂತ್ಯದ ಶನಿವಾರ ಮತ್ತು ಭಾನುವಾರದಂದು ಪೂರ್ತಿ ಕಪ್ರ್ಯೂ ಇರಲಿದೆ. ಹಗಲು ವೇಳೆಯಲ್ಲಿ ಮಾತ್ರ ಮದುವೆ, ಉಳಿದ ಕಾರ್ಯಕ್ರಮ ಆಚರಿಸಲು ಅವಕಾಶ ನೀಡಲಾಗಿದೆ. ರಾತ್ರಿ ವೇಳೆಯಲ್ಲಿ ಯಾವುದೇ ರೀತಿಯಲ್ಲಿ ಕಾರ್ಯಕ್ರಮ ನಡೆಸುವಂತಿಲ್ಲ.  ನ್ಯಾಯಬೆಲೆ ಅಂಗಡಿ, ಆಹಾರ, ಧವಸಧಾನ್ಯ, ಹಣ್ಣು ತರಕಾರಿ, ಹಾಲು ಉತ್ಪನ್ನಗಳ ಮಾರಾಟಕ್ಕೆ ಅವಕಾಶ ನೀಡಲಾಗಿದೆ. ತೆರೆದ ಪ್ರದೇಶಗಳಲ್ಲಿ ಸಗಟು, ತರಕಾರಿ, ಹಣ್ಣು, ಹೂವು ಮಾರಾಟಕ್ಕೆ ಮಾತ್ರ ಅವಕಾಶವಿದೆ
ಮೇ 20 ರಂದು ಸರಕಾರ ಹೊರಡಿಸಿದ  ನೂತನ ಮಾರ್ಗಸೂಚಿಯನ್ವಯ ಮದುವೆಗೆ  50 ಜನರಿಗೆ  ಮಾತ್ರ ಅವಕಾಶ ಕಲ್ಪಿಸಲಾಗಿದೆ. ಅಂತ್ಯಕ್ರಿಯೆಗೆ 20 ಜನರು ಮಾತ್ರ ಪಾಲ್ಗೊಳ್ಳಬಹುದಾಗಿದ್ದು, ಮೇ 21 ರ ರಾತ್ರಿ 9 ಗಂಟೆಯಿಂದ  ನೂತನ ಮಾರ್ಗಸೂಚಿಗಳು ಅನ್ವಯವಾಗಲಿವೆ. ಸಾರ್ವಜನಿಕರು ನೂತನ ಮಾರ್ಗಸೂಚಿಗಳನ್ವಯ ಪಾಲನೆ ಮಾಡುವಂತೆ ತಿಳಿಸಿದ್ದಾರೆ.
ಸಿನಿಮಾ ಹಾಲ್, ಶಾಪಿಂಗ್‍ಮಾಲ್, ಜಿಮ್, ಯೋಗಾ ಕೇಂದ್ರ, ಈಜುಗೊಳ, ಸ್ಪೊಟ್ರ್ಸ್ ಕಾಂಪ್ಲೆಕ್ಸ್, ಬಾರ್, ಆಡಿಟೋರಿಯಂನಂತಹ ಸ್ಥಳಗಳನ್ನು ತೆರೆಯುವದನ್ನು ನಿಷೇಧಿಸಲಾಗಿದೆ. ಅಲ್ಲದೇ ಜಿಲ್ಲೆಯಲ್ಲಿರುವ ಹೋಟಲ್ ಮತ್ತು ರೆಸ್ಟೋರೆಂಟ್ ಹಾಗೂ ಬಾರ್, ಎಂಆರ್‍ಪಿಗಳಲ್ಲಿ ಪಾರ್ಸಲ್ ತೆಗೆದುಕೊಳ್ಳಲು  ಅವಕಾಶ ಒದಗಿಸಲಾಗಿದೆ. ಲಾಡ್ಜ ತೆರೆಯಲು ಅವಕಾಶ ನೀಡಲಾಗಿದೆ .
ನೂತನ ಕಠಿಣ ಮಾರ್ಗಸೂಚಿಗಳನ್ವಯ ರಾಜಕೀಯ, ಧಾರ್ಮಿಕ ಹಾಗೂ ಸಾಮಾಜಿಕ ಸಭೆ ಸಮಾರಂಭ ನಡೆಸುವದನ್ನು ನಿರ್ಬಂದಿಸಿದೆ.  ಜಿಲ್ಲೆಯಲ್ಲಿರುವ ಎಲ್ಲ ಶಾಲಾ ಕಾಲೇಜುಗಳನ್ನು ಬಂದ ಮಾಡಲು ತಿಳಿಸಿದ್ದು, ಆನ್‍ಲೈನ್ ಕ್ಲಾಸ್‍ಗೆ ಮಾತ್ರ ಅವಕಾಶ ನೀಡಲಾಗಿದೆ. ಕಟ್ಟಡ ನಿರ್ಮಾಣ ಕಾಮಗಾರಿ, ಕಾರ್ಖಾನೆಗಳಲ್ಲಿ ಕೆಲಸ ನಡೆಸಲು ಅನುಮತಿ ನೀಡಲಾಗಿದೆ. ಜಿಲ್ಲೆ ಮತ್ತು ರಾಜ್ಯಗಳ ನಡುವೆ ಸಂಚಾರಕ್ಕೆ ಯಾವುದೇ ರೀತಿಯ ನಿರ್ಬಂಧ ಹೇರಿರುವದಿಲ್ಲ ಎಂದು ಜಿಲ್ಲಾಧಿಕಾರಿ ಎಂ.ಸುಂದರೇಶ್ ಬಾಬು ತಿಳಿಸಿದ್ದಾರೆ.


Leave a Reply