Gadag

ಎಸ್.ಜಿ. ಸಲಗರೆ ಅವರಿಂದ ಕೋವಿಡ್ ಲಸಿಕಾ ಕೇಂದ್ರಕ್ಕೆ ಭೇಟಿ ಹಾಗೂ ಕಾರ್ಯ ಪರಿಶೀಲನೆ


ಗದಗ  ಎಪ್ರಿಲ್ 21: ನಗರದ ಹಳೇ ಜಿಲ್ಲಾ ಆಸ್ಪತ್ರೆಯ ಆವರಣದಲ್ಲಿನ ಕೋವಿಡ್ ಲಸಿಕಾ  ಕೇಂದ್ರಕ್ಕೆ ಹಿರಿಯ ದಿವಾಣಿ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾgದÀ ಸದಸ್ಯ ಕಾರ್ಯದರ್ಶಿ ಎಸ್.ಜಿ. ಸಲಗರೆ ಅವರು ಭೇಟಿ ನೀಡಿ ಕಾರ್ಯ ಪರಿಶೀಲನೆ ನಡೆಸಿದರು.
ಕೋರೊನಾ ಸೋಂಕು ಹರಡದಂತೆ ಪ್ರತಿಯೊಬ್ಬರೂ ತಪ್ಪದೇ ಮಾಸ್ಕ ಧರಿಸಬೇಕು. ಪದೇ ಪದೇ ಕೈಗಳನ್ನು ಸ್ಯಾನಿಟೈಜರ್ ಹಾಗೂ ಸೋಪಿನ ಮೂಲಕ ತೊಳೆಯಬೇಕು. ಸಾಮಾಜಿಕ ಅಂತರ ಕಾಯ್ದುಕೊಳ್ಳುವುದಲ್ಲದೇ ಸೋಂಕು ಪೀಡಿತರ ಸಂಪರ್ಕದಿAದ ದೂರವಿರಬೇಕು. ಸಾರ್ವಜನಿಕ ಸ್ಥಳಗಳಲ್ಲಿ ಉಗಳಬಾರದು, ಉಸಿರಾಟದ ತೊಂದರೆಯಾದಲ್ಲಿ ವೈದ್ಯರ ಸಲಹೆ ಪಡೆಯಬೇಕು. ಕೋವಿಡ್ ಲಸಿಕೆ ವಿಶ್ವಾಸಾರ್ಹವಾಗಿದ್ದು ಇದರಿಂದ ಯಾವುದೇ ಅಡ್ಡಪರಿಣಾಮ ಇರುವುದಿಲ್ಲ ಎಂದು ಎಸ್.ಜಿ. ಸಲಗರೆ ಅವರು ತಿಳಿಸಿ ಸಾರ್ವಜನಿಕರಿಗೆ ಜಾಗೃತಿ ಮೂಡಿಸಿದರು. ಅದೇ ರೀತಿ ಹೊಸ ಬಸ್ ನಿಲ್ದಾಣದಲ್ಲಿ ಸಾರ್ವಜನಿಕರಿಗೆ ಮಾಸ್ಕ ವಿತರಣೆ ಮಾಡಿ ಲಸಿಕೆ ಹಾಕಿಸಿಕೊಳ್ಳವಂತೆ ಮನವರಿಕೆ ಮಾಡಿದರು.
ಕಾರ್ಯಕ್ರಮದಲ್ಲಿ ಡಾ|| ಹರಿದಾಸ ವೈದ್ಯಾಧಿಕಾರಿಗಳು,ಉಮೇಶ ಕರಮುಡಿ, ಶ್ರೀಮತಿ ಪುಪ್ಪಾ ಓ ಪಾಟೀಲ, ಶ್ರೀಮತಿ ಗೀತಾ ಕಾಂಬಳೆ ಉಪ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿಗಳು, ಕಾನೂನುವಿದ್ಯಾರ್ಥಿಗಳು ಹಾಗೂ ಆರೋಗ್ಯ ಇಲಾಖೆಯ ಸಿಬ್ಬಂದಿಗಳು, ಆಶಾ ಕಾರ್ಯಕರ್ತೆಯರು ಭಾಗವಹಿಸಿದ್ದರು.


Leave a Reply