Gadag

ಉತ್ತಮ ಗುಣಮಟ್ಟದ ಅಂಗಾ0ಶ ಕೃಷಿ ಬಾಳೆ ಸಸಿಗಳ ಮಾರಾಟ


ಗದಗ  21:  ಜೈವಿಕ ಕೇಂದ್ರ, ಹುಳಿ ಮಾವು ತೋಟಗಾರಿಕೆ ಇಲಾಖೆ ಬೆಂಗಳೂರು ವತಿಯಿಂದ ಉತ್ತಮ ಗುಣಮಟ್ಟದ ಅಂಗಾAಶ ಕೃಷಿ ಬಾಳೆ ಸಸಿಗಳನ್ನು  ಮಾರಾಟ ಮಾಡಲಾಗುತ್ತಿದೆ.  ಇದರ ಉಪಯೋಗವನ್ನು ಬಾಳೆ ಬೆಳೆಯಲು ಇಚ್ಛಿಸುವ ತೋಟಗಾರಿಕೆ ರೈತರು ಪಡೆದುಕೊಳ್ಳಬಹುದಾಗಿದೆ. ಜೈವಿಕ ಕೇಂದ್ರ, ಹುಳಿ ಮಾವು ಅಂಗಾAಶ ಕೃಷಿ ಪ್ರಯೋಗ ಶಾಲೆಯ ರಾಷ್ಟಿçÃಯ ಜೈವಿಕ ತಂತ್ರಜ್ಞಾನ, ನವದೆಹಲಿ ಅವರ ಮಾನ್ಯತೆ ಪಡೆದ ಪ್ರಯೋಗ ಶಾಲೆಯಾಗಿದ್ದು, ಇಲ್ಲಿ ಉತ್ಪಾದಿಸಲಾಗುವ ಅಂಗಾAಶ ಕೃಷಿ ಬಾಳೆ ಸಸಿಗಳು ಉತ್ಕೃಷ್ಟ ಗುಣಮಟ್ಟ ಹೊಂದಿದ್ದು ಅಧಿಕ ಇಳುವರಿ ನೀಡುತ್ತಿರುವುದು ದಾಖಲೆಯಾಗಿರುತ್ತದೆ.  ಇದೇ ರೀತಿಯ ಬೇಡಿಕೆಯನುಸಾರ ವಿವಿಧ ಅಲಂಕಾರಿಕ ಮತ್ತು ಔಷಧೀಯ ಸಸ್ಯಗಳ ಅಂಗಾAಶ ಕೃಷಿಯನ್ನು ಸಹ ಕೈಗೊಳ್ಳಲಾಗುತ್ತಿದೆ. ಸರಕಾರ ನಿಗದಿಪಡಿಸಿದ ರಿಯಾಯತಿ ದರಗಳಲ್ಲಿ ಅಂಗಾAಶ ಕೃಷಿ ಬಾಳೆ ಸಸಿಗಳನ್ನು ಹಾಗೂ ಅಲಂಕಾರಿಕ ಔಷಧೀಯ ಸಸಿಗಳನ್ನು ಮಾರಾಟ ಮಾಡಲಾಗುತ್ತಿದೆ.  ಹೆಚ್ಚಿನ  ವಿವರಗಳಿಗಾಗಿ ತೋಟಗಾರಿಕೆ ಉಪನಿರ್ದೇಶಕರು ( ಅಂಗಾAಶ ಕೃಷಿ) ಮೊಬೈಲ್ ಸಂಖ್ಯೆ 7975736459, ಸಹಾಯಕ ತೋಟಗಾರಿಕೆ ಅಧಿಕಾರಿ ಮೊ.  ಸಂಖ್ಯೆ 8792292095, ತೋಟಗಾರಿಕೆ ಸಹಾಯಕರು ಮೊ.ಸಂ. 9964941890  ಇವರನ್ನು ಸಂಪರ್ಕಿಸಲು ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ ಸುರೇಶ ವಿ ಕುಂಬಾರ ಮೊ.ಸಂ.9480957203 ಸಂಪರ್ಕಿಸಬಹುದಾಗಿದೆ.


Leave a Reply