Gadag

ಕರಡು ಮತದಾರರ ಪಟ್ಟಿ ಪ್ರಕಟ


ಗದಗ  ಎಪ್ರಿಲ್ 20: ಜಿಲ್ಲಾ ಪಂಚಾಯತ್ ಹಾಗೂ ತಾಲೂಕು ಪಂಚಾಯತಿಗಳಿಗೆ ಸಾರ್ವತ್ರಿಕ ಚುನಾವಣೆ 2021 ನೇದ್ದಕ್ಕೆ ಸಂಬAಧಿಸಿದAತೆ ಮತದಾರರ  ಪಟ್ಟಿ ತಯಾರಿಸುವ ನಿಟ್ಟಿನಲ್ಲಿ ರಾಜ್ಯ ಚುನಾವಣಾ ಆಯೋಗವು ನೀಡಿರುವ ಮಾರ್ಗದರ್ಶನ ಹಾಗೂ ವೇಳಾ ಪಟ್ಟಿಯಂತೆ  ಎಪ್ರಿಲ್ 17 ರಂದು  ಜಿಲ್ಲೆಯ ವ್ಯಾಪ್ತಿಯಲ್ಲಿ ಬರುವ ಜಿಲ್ಲಾ ಪಂಚಾಯತ್ ಹಾಗೂ ತಾಲೂಕು ಪಂಚಾಯತಿಗಳ ಕರಡು ಮತದಾರರಪಟ್ಟಿ ಪ್ರಕಟಿಸಿದೆ. ಸದರಿ ಕರಡು ಮತದಾರ ಪಟ್ಟಿಗಳನ್ನು ಜಿಲ್ಲಾಧಿಕಾರಿಗಳ, ಉಪವಿಭಾಗಾಧಿಕಾರಿಗಳ, ತಹಶೀಲ್ದಾರರ  ಕಾರ್ಯಾಲಯ ಹಾಗೂ ತಾ.ಪಂ. ಗ್ರಾಮ ಪಂಚಾಯತ್  ಕಾರ್ಯಾಲಯ ಮತ್ತು ಸಂಬAಧಿತ ಮತಗಟ್ಟೆಗಳಲ್ಲಿ ಮತದಾರರ ವೀಕ್ಷಣೆಗೆ ಇಡಲಾಗಿದೆ.
ಮತದಾರರು ತಮ್ಮ ಹೆಸರು  ಕ್ಷೇತ್ರದ ವ್ಯಾಪ್ತಿಯಲ್ಲಿ  ಇರದೆ ಬೇರೆ ಕ್ಷೇತ್ರದ  ಮತದಾರರ ಪಟ್ಟಿಯಲ್ಲಿ ಸೇರ್ಪಡೆಯಾಗಿದ್ದಲ್ಲಿ  ಸಂಬAಧಪಟ್ಟ ತಹಶೀಲ್ದಾರರಿಗೆ ಮತದಾರರ ಪಟ್ಟಿ ಕುರಿತು ಆಕ್ಷೇಪಣೆಗಳನ್ನು  ಎಪ್ರಿಲ್ 22 ರೊಳಗೆ ಸಲ್ಲಿಸಬಹುದಾಗಿದೆ. ನಗರ ಪ್ರದೇಶದ ಮತದಾರರ ಹೆಸರನ್ನು ಅಥವಾ ವಿಧಾನಸಭಾ ಮತದಾರರ ಪಟ್ಟಿಯಲ್ಲಿ ಸೇರ್ಪಡೆಯಾಗದೇ ಇರುವ ಹೆಸರುಗಳನ್ನು ಜಿಲ್ಲಾ ಪಂಚಾಯತ್/ತಾಲೂಕು ಪಂಚಾಯತಿಗಳಿಗೆ ತಯಾರಿಸಲಾಗಿರುವ ಮತದಾರರ  ಪಟ್ಟಿಯಲ್ಲಿ ಸೇರ್ಪಡೆಯಾಗಿದ್ದಲ್ಲಿ ಮಾತ್ರ ಆಕ್ಷೇಪಣೆ ಸಲ್ಲಿಸಲು ಅವಕಾಶವಿರುತ್ತದೆ. ಸ್ವೀಕೃತವಾಗುವ ಆಕ್ಷೇಪಣೆಗಳನ್ನು ಇತ್ಯರ್ಥಪಡಿಸಿ ಅಂತಿಮ ಮತದಾರ ಪಟ್ಟಿಗಳನ್ನು ಎಪ್ರಿಲ್ 30ರಂದು ಪ್ರಕಟಿಸಲಾಗುವುದು ಎಂದು ಗದಗ ಜಿಲ್ಲಾಧಿಕಾರಿಗಳ ಚುನಾವಣಾ ವಿಭಾಗದ ಪ್ರಕಟಣೆ ತಿಳಿಸಿದೆ.


Leave a Reply