Gadag

ಹಾಲುಮತ ಮಹಾಸಭಾದಿಂದ ವಿಜಯನಗರ ಸಂಸ್ಥಾಪನಾ ದಿನಾಚರಣೆ


ಗದಗ: ನಗರದ ವಿದ್ಯಾನಿಧಿ ಪ್ರಕಾಶನದಲ್ಲಿ ಹಾಲುಮತ ಮಹಾಸಭಾದ ವತಿಯಿಂದ ಭಾನುವಾರ ವಿಜಯನಗರ ಸಾಮ್ರಾಜ್ಯ ಸಂಸ್ಥಾಪನಾ ದಿನಾಚರಣೆ ಹಾಗೂ ಹಾಲುಮತ (ಕುರುಬ) ಜಯಂತಿಯನ್ನು ರೇವಣಸಿದ್ದೇಶ್ವರ ಹಾಗೂ ಹಕ್ಕಬುಕ್ಕರ ಬಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಹಾಲುಮತ ಮಹಾಸಭಾದ ರಾಜ್ಯಾಧ್ಯಕ್ಷ ರುದ್ರಣ್ಣ ಗುಳಗುಳಿ, ಜಿಲ್ಲಾಧ್ಯಕ್ಷ ಪ್ರಹ್ಲಾದ ಹೊಸಳ್ಳಿ, ಉಪಾಧ್ಯಕ್ಷ ಸೋಮನಗೌಡ ಪಾಟೀಲ, ಪ್ರಧಾನ ಕಾರ್ಯದರ್ಶಿ ಮುತ್ತು ಜಡಿ, ಶಿವು ಮೆಣಸಗಿ, ಸತೀಶ ಗಿಡ್ಡಹನುಮಣ್ಣವರ, ಆನಂದ ಹಂಡಿ, ಹನುಮಂತ ಗಿಡ್ಡಹನುಮಣ್ಣವರ, ಸೋಮು ಮೇಟಿ, ಚಂದ್ರಹಾಸ ಕಟ್ಟಿಗ್ಗಾರ, ಸತ್ಯಪ್ಪ ಗುರಿಕಾರ, ವಿನಯ ಮಾಯಣ್ಣವರ, ಮಲ್ಲಪ್ಪ ಅಸುಂಡಿ, ಶಿವಪ್ಪ ನಾಯ್ಕರ, ಅಂಬರೀಶ ಪುರದ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.


Leave a Reply