BelagaviState

ಅಂತರಾಜ್ಯ ಪ್ರಯಾಣಿಕರ ಮೇಲೆ ಹದ್ದಿನ ಕಣ್ಣು, ಚೆಕ್‌ ಪೋಸ್ಟ ಪರಿಶೀಲಿಸಿದ ಜಿಲ್ಲಾಧಿಕಾರಿ


ಮಹಾರಾಷ್ಟ್ರ- ಬೆಳಗಾವಿ ಜಿಲ್ಲೆಯ ನಿಪ್ಪಾಣಿ ಹತ್ತಿರ ಇರುವ ಕೊಗನೋಳಿ ಚೆಕ್‌ ಪೋಸ್ಟಗೆ ಬೆಳಗಾವಿ ಜಿಲ್ಲಾಧಿಕಾರಿ ಡಾ ಕೆ ಹರಿಶಕುಮಾರ್  ಭೇಟಿ ನೀಡಿ, ಪರಿಶಿಲನೆ ನಡೆಸಿದರು.

ಜಿಲ್ಲೆಯಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆ ಜಿಲ್ಲಾಡಳಿತ ಭಿಗಿ ಭದ್ರತಾ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದು ಹೊರ ರಾಜ್ಯದಿಂದ ಗಮಿಸುವ ಪ್ರಯಾಣಿಕರ ಮೇಲೆ ಹದ್ದಿನ ಕಣ್ಣು ಇಟ್ಟಿದ್ದು ಪರಿಶೀಲನೆ ಮಾಡಲು  ಕರ್ನಾಟಕ ಗಡಿಯಲ್ಲಿರುವ ಕೊಗನೋಳಿ  ಬಳಿ ಚೆಕ್‌ ಪೋಸ್ಟ ನಿರ್ಮಿಸಲಾಗಿದ್ದು ಇಂದು ಜಿಲ್ಲಾಧಿಕಾರಿ ಡಾ.ಕೆ ಹರೀಶಕುಮಾರ ಅವರು ಭೇಟಿ‌ ನೀಡಿ ಪರಿಶೀಲನೆ ಮಾಡಿದರು.

ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಅವರು,ಮಹಾರಾಷ್ಟ್ರದಿಂದ ಕರ್ನಾಟಕಕ್ಕೆ ಬರುವವರು  ಖಡ್ಡಾಯವಾಗಿ ಕೋವಿಡ್ ನೆಗೆಟಿವ್ ರಿಪೋರ್ಟ್ ತರಬೇಕು  ಮತ್ತು ಪ್ರಯಾಣದ ಬಗ್ಗೆ ಮಾಹಿತಿ‌ ನೀಡಬೇಕು  ಎಂದರು.

ಜಿಲ್ಲೆಯಲ್ಲಿ  ಆಮ್ಲಜನಕ ಕೊರತೆ ವಿಚಾರವಾಗಿ ಮಾತನಾಡಿ ಅವರು, ರೋಗಿಗಳಿಗೆ ಔಷಧಿ ಹಾಗೂ ಆಮ್ಲಜನಕ ವ್ಯವಸ್ಥೆ ಮಾಡಿದ್ದೇವೆ. ನಮ್ಮ ಜಿಲ್ಲೆಯಲ್ಲಿ ಆಮ್ಲಜನಕ ಕೊರತೆ ಇಲ್ಲ.‌ ಬೆರೆ ರಾಜ್ಯಕ್ಕೂ ನಾವು ಆಮ್ಲಜನಕ ಕಳುಹಿಸುತ್ತಿದೇವೆ. ನಮ್ಮ ಎಲ್ಲ ಅಧಿಕಾರಿಗಳು ಸರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದು ಹೇಳಿದರು.

ಜಿಲ್ಲೆಯಲ್ಲಿ ನಕಲಿ ಕೊರೊನಾ ಔಷಧಿ ಮಾರಾಟ ವಿಚಾರವಾಗಿ ಮಾತನಾಡಿದ ಅವರು, ನಾವು ನಮ್ಮ ಜಿಲ್ಲೆಯಾದ್ಯಂತ ತನಿಖೆ ನಡೆಸುತ್ತಿದ್ದು,  ಐಜಿ ಬೆಳಗಾವಿ ಅವರ ನೇತೃತ್ವದಲ್ಲಿ ತನಿಖೆ ನಡೆಸುತ್ತಿದೇವೆ. ಎಲ್ಲ ಆಸ್ಪತ್ರೆಗಳಲ್ಲಿ ವೈದ್ಯರಿಗೆ ತೊಂದರೆ ಕೊಡದೆ ತನಿಖೆ ನಡೆಯುತ್ತಿದೆ.‌ ಮಾರುಕಟ್ಟೆಯಲ್ಲಿ ಕೂಡ ತನಿಖೆ ನಡೆಯುತ್ತಿದೆ ಎಂದು ಸ್ಪಷ್ಟ ಪಡಿಸಿದರು.‌

 


Leave a Reply