BelagaviState

ಕೋವಿಡ್ ಟಫ್ ರೂಲ್ಸ್ ಜಾರಿ: ವಾಣಿಜ್ಯನಗರಿಯಲ್ಲಿ ಅಂಗಡಿ ಮುಂಗಟ್ಟು ಬಂದ್…!


ಹುಬ್ಬಳ್ಳಿ: ಇಂದಿನಿಂದ ರಾಜ್ಯದಲ್ಲಿ ಕೊರೋನಾ ಟಫ್ ರೂಲ್ಸ್ ಜಾರಿಯಾಗಿರುವ ಹಿನ್ನಲೆಯಲ್ಲಿ ಜಿಲ್ಲಾಡಳಿತದ ನೇತೃತ್ವದಲ್ಲಿ ಪೊಲೀಸ್ ಅಧಿಕಾರಿಗಳು ಹಾಗೂ ಪಾಲಿಕೆ ಅಧಿಕಾರಿಗಳು ವಾಣಿಜ್ಯನಗರಿ ಹುಬ್ಬಳ್ಳಿಯಲ್ಲಿ ಅಗತ್ಯ ಸೇವೆ ಹೊರತು ಪಡಿಸಿ ಎಲ್ಲಾ ಅಂಗಡಿ ಮುಂಗಟ್ಟಗಳನ್ನು ಬಂದ್ ಮಾಡಿಸಿದ್ದಾರೆ.

ಹುಬ್ಬಳ್ಳಿಯ ಕೊಪ್ಪಿಕರ್ ರಸ್ತೆ, ಕೋಯಿನ್ ರೋಡ್, ಜವಳಿಸಾಲು, ದುರ್ಗದ ಬೈಲ್ ಮಾರ್ಕೆಟ್ ಪ್ರದೇಶದಲ್ಲಿ ಅಂಗಡಿ ಮುಂಗಟ್ಟು ಬಂದ್ ಮಾಡಿಸಿದ್ದಾರೆ. ಇನ್ನೂ
ಬೆಳ್ಳಂಬೆಳ್ಳಿಗೆ ಅಂಗಡಿ ಮಾಲೀಕರಿಗೆ ಶಾಕ್ ನೀಡಿದಂತಾಗಿದ್ದು, ಕಿರಾಣಿ, ಮೆಡಿಕಲ್ ಶಾಪ್ ಹಾಗೂ ಅಗತ್ಯ ಸೇವೆ ಒದಗಿಸುವ ಅಂಗಡಿಯನ್ನು ಹೊರತುಪಡಿಸಿ ಎಲ್ಲ ರೀತಿಯ ಮುಂಗಟ್ಟು ಹಾಗೂ ಅಂಗಡಿಗಳನ್ನು ಬಂದ್‌ ಮಾಡಿಸಿದ್ದಾರೆ.

ಇನ್ನೂ ಈ ಬಗ್ಗೆ ಯಾವುದೇ ಮಾಹಿತಿ ಇಲ್ಲದೇ ಏಕಾಏಕಿ ಬಂದ್ ಮಾಡಿಸಿದ್ದಾರೆ. ನಾವು ಶನಿವಾರ, ರವಿವಾರ ಮಾತ್ರ ಕರ್ಫ್ಯೂ ಎಂದುಕೊಂಡು ವ್ಯಾಪಾರ ವಹಿವಾಟು ನಡೆಸಲು ಸಾಕಷ್ಟು ಸರಕು ಸಾಮಾನುಗಳನ್ನು ಅಂಗಡಿಗೆ ಹಾಕಿಸಿದ್ದೇವೆ. ಆದರೆ ಏಕಾಏಕಿ ಬಂದ್ ಮಾಡಿಸಿದ್ದಾರೆ ಎಂದು ಅಂಗಡಿ ವರ್ತಕರು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ


Leave a Reply