BelagaviState

ವ್ಯಾಪಾರಿಗಳಿಗೆ ಬಿಗ್ ಶಾಕ್, ಮದ್ಯಾಹ್ನವೇ ಅಂಗಡಿಗಳನ್ನು ಬಂದ ಮಾಡಿಸುತ್ತಿರುವ ಪೊಲೀಸರು


ಬೆಳಗಾವಿ- ಬೆಳಗಾವಿ ಪೊಲೀಸರು ಇಮದು ಮದ್ಯಾಹ್ನವೇ ವ್ಯಾಪಾರಿಗಳಿಗೆ ಬಿಗ್ ಶಾಕ್ ನೀಡಿದ್ದಾರೆ. ಮದ್ಯಾಹ್ನವೇ ಅಂಗಡಿ ಮುಗ್ಗಟ್ಟುಗಳನ್ನು ಬಂದ್ ಮಾಡಿಸಲಾಗುತ್ತಿದ್ದು ಅಗತ್ಯವಸ್ತುಗಳ ಅಂಗಡಿಗಳನ್ನು ಹೊರತುಪಡಿಸಿ ಉಳಿದ ಎಲ್ಲ ಅಂಗಡಿಗಳನ್ನು ಬಂದ್ ಮಾಡಬೇಕೆಂದು ಮೈಕ್ ನಲ್ಲಿ ಅನೌನ್ಸ್ ಮಾಡುತ್ತ ವ್ಯಾಪರಕ್ಕೆ ಬ್ರೆಕ್ ಹಾಕಲಾಗುತ್ತಿದೆ.

ಕರ್ನಾಟಕದಲ್ಲಿ ಕೊರೋನಾ ವ್ಯಾಪಕವಾಗಿ ಹರಡುತ್ತಿರುವ ಹಿನ್ನಲೆಯಲ್ಲಿ ಸರ್ಕಾರ ತುರ್ತು ಆದೇಶ ಹೊರಡಿಸಿದ್ದು ಅಗತ್ಯವಸ್ತುಗಳ ಅಂಗಡಿಗಳನ್ನು ಹೊರತುಪಡಿಸಿ ಉಳಿದ ಎಲ್ಲ ಅಂಗಡಿಗಳನ್ನು ಬಂದ್ ಮಾಡಿಸುವಂತೆ ಸೂಚನೆ ನೀಡಿದ ಹಿನ್ನಲೆಯಲ್ಲಿ ಇಂದು ಮದ್ಯಾಹ್ನವೇ ಬೆಳಗಾವಿ ಮಾರುಕಟ್ಟೆಯು ಸ್ತಭ್ದಗೊಂಡಿದೆ.

ನಗರದ  ಖಡೇಬಝಾರ್,ಮಾರುತಿಗಲ್ಲಿ,ಗಣಪತಿ ಬೀದಿ ಸೇರಿದಂತೆ ಬೆಳಗಾವಿ ಮಾರುಕಟ್ಟೆ ಪ್ರದೇಶದಲ್ಲಿ ಪೋಲೀಸರು ಬಂದ್ ಕಾರ್ಯಾಚರಣೆ ನಡೆಸಿದ್ದು ಬಹುತೇಕ ಅಂಗಡಿಗಳಿಗೆ ಬೀಗ ಜಡಿಸಿದ್ದು ಮತ್ತೆ ವ್ಯಾಪಾರಸ್ಥರಲ್ಲಿ ಆತಂಕ ಶುರುವಾಗಿದೆ.


Leave a Reply