Belagavi

ಸಂಗ್ರಾಮ ಕಲ್ಲು, ಗುಂಡು ಎತ್ತುವ ಸ್ಫರ್ಧೆಯ ವಿಜೇತರಿಗೆ ಬಹುಮಾನ ವಿತ್ತರಣೆ


ಮೂಡಲಗಿ: ತಾಲೂಕಿನ ಅವರಾದಿ ಗ್ರಾಮದಲ್ಲಿ ಹಾಲಸಿದ್ಧೇಶ್ವರ ಜಾತ್ರಾ ಮಹೋತ್ಸವ ಅಂಗವಾಗಿ ಏರ್ಪಡಿಸಿದ ಸಂಗ್ರಾಮ ಕಲ್ಲು ಮತ್ತು ಗುಂಡು ಎತ್ತುವ ಸ್ಫರ್ಧೆಯ ವಿಜೇತರಿಗೆ ಬಹುಮಾನ ವಿತರಣಾ ಸಮಾರಂಭ ಜರುಗಿತು.
ಸಂಗ್ರಾಮ ಕಲ್ಲು ೯೬ಕೆ.ಜಿ ವಿಜೇತರು: ಆನಂದ ಕಂಬಳಿ(ಪ್ರಥಮ), ಸಿಖಧರ್ ಮುಜಾವರ್(ದ್ವೀತೀಯ), ಭೀಮಶಿ ಮಳ್ಳಗೇರಿ( ತೃತೀಯ), ಉಮೇಶ ಅರಗೆ(ಚತುರ್ಥಿ), ೧೧೦ಕೆ.ಜಿ ಗುಂಡು ಸ್ಪರ್ಧೆಯ ವಿಜೇತರು: ಆನಂದ ಕೆ.ಕಂಬಳಿ(ಪ್ರಥಮ), ಸಂಗಣ್ಣ ಗೌಡಣ್ಣವರ(ದ್ವಿತೀಯ), ಅಮೃತ ಗೌಡಣ್ಣವರ(ತೃತೀಯ), ಉಮೇಶ ಅರಗೆ(ಚತುರ್ಥ) ಬಹುಮಾನ ಪಡೆದುಕೊಂಡರು.
ಈ ಸಮಯದಲ್ಲಿ ಈರಪ್ಪ ಹುಲಗಬಾಳಿ, ಹಣಮಂತ ಪೂಜೇರಿ,ಭೀಮಶಿ ಕುಕ್ಕಡಿ, ಮಾರುತಿ ಪೂಜೇರಿ, ಮಲ್ಲಕಾರ್ಜುನ ದಳವಾಯಿ, ಶಂಕರಗೌಡ ಪಾಟೀಲ, ಹಣಮಂತ ಡೊಂಬರ, ಕೃಷ್ಣಾಪ್ಪಾ ದಾಸರ, ಶ್ರೀಶೈಲ್ ಪೂಜೇರಿ ಇದ್ದರು. ಪ್ರಕಾಶ ಕಾಳಶೆಟ್ಟಿ ನಿರೂಪಿಸಿದರು, ಎಂ.ಬಿ.ಪಾಟೀಲ ಸ್ವಾಗತಿಸಿದರು, ಮುತ್ತು ದಂಡಪ್ಪನ್ನವರ ವಂದಿಸಿದರು.


Leave a Reply