Belagavi

ಶ್ರೀನಿವಾಸ ಶಾಲೆಯಲ್ಲಿ ಉಚಿತ ಕಣ್ಣಿನ ತಪಾಸಣೆ ಮತ್ತು ಶಸ್ತçಚಿಕಿತ್ಸಾ ಶಿಬಿರ


ಮೂಡಲಗಿ: ಪಟ್ಟಣದ ಶ್ರೀನಿವಾಸ ಶಾಲೆಯಲ್ಲಿ ದಿ. ನಿಂಗಪ್ಪ ರ.ಸೋನವಾಲಕರ್ ಸ್ಮರಣಾರ್ಥ ಉಚಿತ ಕಣ್ಣಿನ ತಪಾಸಣೆ ಹಾಗೂ ಶಸ್ತçಚಿಕಿತ್ಸಾ ಶಿಬಿರವು ಜಿಲ್ಲಾ ಅಂಧತ್ವ ನಿವಾರಣಾ ಸಂಸ್ಥೆ ಬೆಳಗಾವಿ ಹಾಗೂ ಬಿ.ಎಲ್.ಡಿ.ಯ ಬಿ.ಎಂ.ಪಾಟೀಲ ವೈದ್ಯಕೀಯ ಕಾಲೇಜು, ಆಸ್ಪತ್ರೆ ಹಾಗೂ ಸಂಶೋಧನಾ ಕೇಂದ್ರ ಆಶ್ರಯದಲ್ಲಿ ಇತ್ತಿಚಿಗೆ ಜರುಗಿತು.
ಶಿಬಿರವನ್ನು ಉದ್ಘಾಟಿಸಿ ಮೂಡಲಗಿ ಸಮುದಾಯ ಆರೋಗ್ಯ ಕೇಂದ್ರ ವೈದ್ಯಾಧಿಕಾರಿ ಡಾ. ಭಾರತಿ ಕೋಣಿ ಉದ್ಘಾಟಿಸಿ ಮಾತನಾಡಿ, ಜನಸಾಮಾನ್ಯರು ಉಚಿತ ಶಿಬಿರದ ಸದುಪಯೋಗ ಪಡಿಸಿಕೊಳ್ಳಬೇಕೆಂದರು.
ಡಾ. ಕೀರ್ತಿ ವಾಲಿ ಕಣ್ಣುಗಳ ಮಹತ್ವದ ಕುರಿತು ಮಾತನಾಡಿದರು.
ಸಂಸ್ಥೆಯ ಅಧ್ಯಕ್ಷರಾದ ಡಾ. ರಂಗಣ್ಣ ನಿಂ.ಸೋನವಾಲಕರ ಮಾತನಾಡಿ, ಮೂಡಲಗಿ ಸುತ್ತಮೂತಲಿ ಗ್ರಾಮದಲ್ಲಿನ ಕಣ್ಣಿನ ತೊಂದಿರೆ ಅನುಭವಿಸುತ್ತಿರು ಬಡವರಿಗೆ ಅನೂಕಲವಾಗುವಂತೆ ತಂದೆ ಆಶಯದಂತೆ ಉಚಿತ ಶಿಬಿರವನ್ನು ಏರ್ಪಡಿಲ್ಲಾಗಿದೆ ಎಂದರು.
ಡಾ. ರೇಣುಕಾ ಸೋನವಾಲ್ಕರ್, ಡಾ. ಮರ್ವಿನ್, ಡಾ ವೀಣಾ, ಉದಯ, ಚಂದ್ರಕಾAತ, ಶಾಲೆಯ ಕಾರ್ಯ ದರ್ಶಿ ವೆಂಕಟೇಶ ಪಾಟೀಲ, ಪ್ರಾಚಾರ್ಯ ಮನೋಜ ಭಟ್ ಮತ್ತಿತರು ಇದ್ದರು.
ವಿದ್ಯಾರ್ಥಿನಿಯರಾದ ಶೃಧ್ಧಾ ಹಾಗೂ ಪವಿತ್ರಾ ಪ್ರಾರ್ಥಿಸಿದರು, ಡಾ. ರಂಗಣ್ಣ ಸ್ವಾಗತಿಸಿದರು. ವೆಂಕಟೇಶ ಪಾಟೀಲ ಸ್ವಾಗತಿಸಿ ವಂದಿಸಿದರು, ವಿದ್ಯಾ ಹೆಗಡೆ ನಿರೂಪಿಸಿದರು. ಶಿಬಿರದಲ್ಲಿ ಸೂಮಾರು ೩೦೦ಕ್ಕೂ ಹೆಚ್ಚು ಜನರ ತಪಾಸನೆ ಮಾಡಿಸಿಕೊಂಡವರಲ್ಲಿ ೧೩೯ ಜನರು ಉಚಿತ ಮೋತಿಬಿಂದು ಶಸ್ತçಚಿಕಿತ್ಸೆಗೆ ಆಯ್ಕೆಯಾದ್ದರು.


Leave a Reply