Uncategorized

ಜನರನ್ನು ರಂಜಿಸಿದ ಕಾರ್ಯಕ್ರಮ ಅರವತ್ತರ ದಶಕದ ಹರೆಯದ ಹಾಡುಗಳು


ಬೆಳಗಾವಿ ೧೨- ನಗರದ ಫ್ಯಾನ್ ಕ್ಲಬ್ ಆಫ್ ಓಲ್ಡ್ ಸಾಂಗ್ಸದವರು ಇದೇ ದಿನಾಂಕ ೧೮ ರವಿವಾರದಂದು ಸಾಯಂಕಾಲ ೫-೩೦ ಕ್ಕೆ ಹಿಂದವಾಡಿಯ ಗೋಮಟೆಶ ವಿದ್ಯಾಪೀಠ ಹತ್ತಿರವಿರುವ ಐಎಂಇಆರ್ ಸಭಾಭವನದಲ್ಲಿ “ಅರವತ್ತರ ದಶಕದ ಹರೆಯದ ಹಾಡುಗಳು” ಎಂಬ ಚಿತ್ರಗೀತೆಗಳ ಕರ‍್ಯಕ್ರಮವನ್ನು ಹಮ್ಮಿಕೊಂಡಿದ್ದರು.
ಕೊರೊನಾ ಕುರಿತಂತೆ ಭಗವಂತನ ಮೊರೆಯನ್ನಿಡುತ್ತ್ತ ‘ಏ ಮಾಲಿಕ ತೇರೇ ಬಂಧೆ ಹಮ್..’ ಗುಂಪು ಹಾಡಿನೊಂದಿಗೆ ಕರ‍್ಯಕ್ರಮ ಪ್ರಾರಂಭವಾಯಿತು. ಅರವತ್ತರ ದಶಕದಲ್ಲಿ ತೆರೆಕಂಡ ಕನ್ನಡ ಮತ್ತು ಹಿಂದಿ ಚಲನಚಿತ್ರಗಳ ಸುಮಧುರ ಗೀತೆಗಳನ್ನು ಪ್ರಸ್ತುತ ಪಡಿಸಿದರು.
‘ಬಿಂಕದ ಸಿಂಗಾರಿ…; ‘ನೀರಿನಲ್ಲಿ ಅಲೆವ ಉಂಗರ…’ ‘ನೀ ಬಂದು ನಿಂತಾಗ…’ ‘ದೂರದಿಂದ ಬಂದAಥ ಅಂತರAಗ ಜಾಣ…’ ಮುಂತಾದ ಸುಮಧುರ ಕನ್ನಡ ಗೀತೆಗಳಾದರೆ ‘ಆಜ ಫಿರ್ ಜೀನೆಕಿ ತಮನ್ನಾ ಹೈ..’ ‘ಚೌದವಿ ಕಾ ಚಾಂದ ಹೋ..’ ‘ಆಜ್ ಕಲ್ ತೇರೆ ಮೇರೆ ಪ್ಯಾರ…’ ‘ಜೋ ವಾದಾ ಕಿಯಾ ಹೊ..’ ‘ಆಜಾ ಆಜಾ ಮೈ ಹೂ ಪ್ಯಾರ ತೇರಾ…’ ಮುಂತಾದ ಹಿಂದಿ ಹಾಡುಗಳಿಂದ ಜನರನ್ನು ರಂಜಿಸಿದರು.
ಬೇAದ್ರೆರವರ ‘ಕುಣಿಯೋನ ಬಾರಾ ಕುಣಿಯೋನ ಬಾ.. ಅಲ್ಲದೇ ಕುವೆಂಪುರವರ ‘ನಾನೇ ವೀಣೆ ನೀನೇ ತಂತಿ…’ ಮುಂತಾದ ಜನಪ್ರಿಯ ಕವಿಗಳು ರಚಿಸಿದ ಗೀತೆಗಳನ್ನು ಈ ಕಾರ್ಯಕ್ರಮ ಒಳಗೊಂಡಿತ್ತು. ಚೆಪ್ಪಾಳೆ, ಜನರ ಬಾಯಲ್ಲಿ ಹಾಡುಗಳನ್ನು ಗುನಗುಣಿಸುತ್ತ ಮೆಲಕು ಹಾಕುತ್ತಿದ್ದುದೇ ಕಾರ್ಯಕ್ರಮ ಯಶಸ್ಸಿಗೆ ಸಾಕ್ಷಿಯಾಗಿತ್ತು.
ಡಾ. ಅರವಿಂದ ಕುಲಕರ್ಣಿ, ಪದ್ಮಾ ಕುಲಕರ್ಣಿ, ಶ್ರೇಯಾ ದೇಶಪಾಂಡೆ, ದೀಪಾ ಪದಕಿ, ದೇವ, ವಿಶ್ವನಾಥ ದೇಸಾಯಿ, ಶುಭಾಂಗಿ, ಗಿರೀಶ, ದರ್ಶನ, ಮೇಘನಾ ರಾವ್, ಡಾ. ಸ್ವಪ್ನಾ ಕುಲಕರ್ಣಿ, ಕೃಷ್ಣಾ ಮರಡೂರ, ಪೂರ್ಣಿಮಾ, ಸೋಮನಾಥ ಜಾಧವ, ಸ್ವಾತಿ, ಸಿದ್ಧಾರ್ಥ, ಅಶೋಕ ಕುಲಕರ್ಣಿ, ಸೃಷ್ಠಿ ಬಾಗೇವಾಡಿ, ಪಾವನಿ ಐರಸಂಗ, ಪೂರ್ವಿ ಮುಂತಾದ ಕಲಾವಿದರು ತಮ್ಮ ಸುಮಧುರ ಕಂಠದಿAದ ಹಾಡಿದರು.
ಕರ‍್ಯಕ್ರಮ ಆರಂಭದಲ್ಲಿ ಇತ್ತೀಚೆಗೆ ನಿಧನರಾದ ಶ್ರೇಷ್ಠ ಕನ್ನಡಿಗ ಶತಾಯುಷಿ ಪ್ರೊ. ಜಿ. ವೆಂಕಟಸುಬ್ಬಯ್ಯನವರಿಗೆ ಎರಡು ನಿಮಿಷ ಮೌನದೊಂದಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಡಾ. ಅರವಿಂದ ಕುಲಕರ್ಣಿ ಹಾಗೂ ಶ್ರೀಮತಿ ಪದ್ಮಾ ಕುಲಕರ್ಣಿ ಕರ‍್ಯಕ್ರಮ ನಿರೂಪಿಸಿದರು.


Leave a Reply