Belagavi

ಭೂಮಿಯ ಉಳಿವಿಗೆ ಪ್ರಾಮಾಣಿಕ ಚಿಂತನೆ ಅತ್ಯವಶ್ಯ. : ಬಸವರಾಜ ಪಾಟೀಲ


ಅಂಕಲಗಿ ೨೨- ಭೂಮಂಡಲ ಸಕಲ ಜೀವಾತ್ಮಗಳ ರಕ್ಷಣಾ ಮನೆ. ಅನ್ನ,£Ãರು, ಪ್ರಾಣವಾಯು ಕೊಟ್ಟು ಸಲುಹುವ ದೇವತೆ ಈ ಭೂಮಿ. ಇದರ ಉಳಿವಿನ ಚಿಂತನೆ ಪ್ರತಿಯೊಬ್ಬರ ಆದ್ಯ ಕರ್ತವ್ಯವಾಗಿದೆ ಎಂದು ಬೆಳಗಾವಿ ವೃತ್ತ ಮುಖ್ಯ ಅರಣ್ಯಾಧಿಕಾರಿ ಬಸವರಾಜ ಪಾಟೀಲ ಹೇಳಿದರು. ಅವರು ಗುರುವಾರ ವಿಶ್ವ ಭೂಮಿ ದಿನಾಚರಣೆ £ಮಿತ್ತ ಬೆಳಗಾವಿಯ ಅವರ ಕಚೇರಿಯಲ್ಲಿ ಸೇರಿದ ಭೂಮಿ ಚಿಂತಕ ರ ಕೂಟದಲ್ಲಿ ಪಾಲ್ಗೊಂಡು ಮಾತನಾಡಿದರು. ಪರಿಸರ, ಅರಣ್ಯ, ಪ್ರಾಣಿಗಳ ಪ್ರಾಮಾಣಿಕ ಬದುಕು ಇವೆಲ್ಲ ನಮ್ಮ ಹೊಣೆಗಾರಿಕೆ ಯಾಗಿದೆ. ಅದರಿಂದ ದೂರ ಸರಿಯುವದು ಸಲ್ಲ. ಭೂಮಿಯಮೇಲೆ ನಮ್ಮ ಕ್ರೂರ ನರ್ತನ ಸರಿಯಲ್ಲ. ಪ್ರಾಕೃತಿಕ ವಿಕೋಪಗಳು ಭೂಮಿಯ ಮೇಲಿನ ದುಷ್ಕöÈತ್ಯಗಳ ಪ್ರತೀಕಗಳು ಎಂಬುದನ್ನು ಮರೆಯಬಾರದು.ಎಂದರು. ಪ್ರತಿಯೊಬ್ಬರೂ ಪರಿಸರ ಶುಚಿತ್ವಕ್ಕೆ ಒತ್ತು £Ãಡುವಂತೆ ಕೋರಿದರು
ಬೆಳಗಾವಿ ವನ್ಯಜೀವಿ ,ಪರಿಸರ ಅಭಿವೃದ್ಧಿ ವೇದಿಕೆಯ ಕಾರ್ಯದರ್ಶಿ ಡಾ ಡಿ.ಎನ್.ಮಿಸಾಳೆ ಭೂಮಿ ಕುರಿತ ಚಿಂತನ , ಮಂಥನ ಕೂಟಕ್ಕೆಉಪಸ್ತಿತರನ್ನು ಸ್ವಾಗತಿಸಿದರಲ್ಲದೆ, ಮಾತನಾಡಿ ಪರಿಸರ ಭೂಮಿಯ ಮುಖ್ಯವಾದ ಭಾಗ. ಪರಿಸರ ಮತ್ತು ಭೂಮಿ ಒಂದಕ್ಕೊAದು ಪೂರಕವಾಗಿದೆ. ಭೂಮಿ ನಮ್ಮ ಮುಂದಿನ ಜನಾಂಗದ ಆಸ್ತಿಯಾಗಿದ್ದು , £Ãರು , ಪರಿಸರ, ಭೂಮಿಗಳ ಮೇಲೆ ಮಾನವ ಸವಾರಿ ಸರಿಯಲ್ಲ ಎಂದರು. ವೇದಿಕೆಯ ಅಧ್ಯಕ್ಷ ಸುರೇಶ ಉರಬಿನಹಟ್ಟಿ, ಸಂಘಟನಾ ಕಾರ್ಯದರ್ಶಿ ಜಗದೀಶ ಮಠದ ಮತ್ತು ಪರಿಸರ ಪ್ರೇಮಿ ಗಿರಿಧರ ಕುಲಕರ್ಣಿ ಮುಂತಾದವರಿದ್ದರು.


Leave a Reply