BengaluruState

ಲಾಕ್ ಡೌನ್ ಅಲ್ಲ ಆದರೆ ಏನೂ ಸಿಗಲ್ಲ, ಹೊಸಮಾರ್ಗ ಸೂಚಿ ಪ್ರಕಟಿಸಿದ ಸರಕಾರ


ಬೆಂಗಳೂರು:  ರಾಜ್ಯದಲ್ಲಿ ಕೊರೊನಾ ಕಟ್ಟಿಹಾಕಲು ರಾಜ್ಯ ಸರಕಾರ ಮತ್ತೊಂದು ಹೆಜ್ಜ ಮುಂದಿಟ್ಟಿದ್ದು ಇಂದು ಪರಿಶ್ಕೃತ ಮಾರ್ಗಸೂಚಿಯನ್ನು  ಬಿಡುಗಡೆ ಮಾಡಿದೆ.  ಹೊಸಮಾರ್ಗ ಸೂಚಿ ಅನ್ವ ಅಗತ್ಯ ಸೇವೆ ಹೊರತುಪಡಿಸಿ ಉಳಿದೆಲ್ಲ ಸೇವೆಯನ್ನು ಬಂದ್ ಮಾಡುವಂತೆ ಆದೇಶಿಸಲಾಗಿದೆ.

ಮೊಬೈಲ್ ಶಾಪ್, ಟಿವಿ, ಎಲೆಕ್ಟ್ರಾನಿಕ್ ಶೋ ರೂಮ್, ಬ್ಯಾಂಗಲ್ಸ್ ಸ್ಟೋರ್, ಚಿನ್ನದ ಅಂಗಡಿ ಬುಕ್ ಶಾಪ್, ಚಪ್ಪಲಿ ಅಂಗಡಿಗಳು, ಫ್ಯಾನ್ಸಿ ಸ್ಟೋರ್, ಬಟ್ಟೆ ಅಂಗಡಿಗಳು ಸೇರಿ ಎಲ್ಲವನ್ನೂ ಬಂದ್ ಮಾಡಬೇಕಿದೆ.

ಹೋಟೆಲ್ , ರೆಸ್ಟೋರೆಂಟ್, ಬಾರ್ ಗಳಲ್ಲಿ ಪಾರ್ಸಲ್ ತರಲು ಅವಕಾಶವಿದೆ. ಆಟೋ, ಬಸ್, ಮೆಟ್ರೋ ಸೇವೆಗಳು ಲಭ್ಯವಾಗಲಿದೆ.

ಬ್ಯಾಂಕ್, ಎಟಿಎಂ, ಇನ್ಶ್ಯೂರೆನ್ಸ್ ಕಂಪನಿ, ಪೇಪರ್, ಟಿವಿ ಸೇರಿದಂತೆ ವಿವಿಧ ಮೀಡಿಯಾ ಸಂಸ್ಥೆಗಳು, ಇ-ಕಾಮರ್ಸ್ ಸೇವೆ, ಕಾಸಗಿ ಸೆಕ್ಯೂರಿಟಿ, ಕಟಿಂಗ್ ಶಾಪ್, ಬ್ಯೂಟಿ ಪಾರ್ಲರ್ ಗಳಿಗೆ ಅನುಮತಿಸಲಾಗಿದೆ.

 


Leave a Reply