BelagaviState

ಭೂಸ್ವಾಧೀನ ಪರಿಹಾರ ಬಾಕಿ: ಬೆಳಗಾವಿ ಎಸಿ ಕಚೇರಿ ಜಪ್ತಿ


ಸಾಂಬ್ರಾದ ಏರ್‍ಫೋರ್ಸ್ ಅಧಿಕಾರಿಗಳ ಕ್ವಾರ್ಟಸ್ ನಿರ್ಮಾಣಕ್ಕಾಗಿ ರಾಜ್ಯ ಮತ್ತು ಕೇಂದ್ರ ಸರಕಾರ 1942ರಲ್ಲಿ ವಶಪಡಿಸಿಕೊಂಡಿದ್ದ 35 ಎಕರೆ ಜಮೀನಿಗೆ ಸಂಬಂಧಿಸಿ ಇದುವರೆಗೂ ಸಂತ್ರಸ್ತರಿಗೆ ಪೂರ್ಣ ಪರಿಹಾರ ಸಂದಾಯವಾಗಿಲ್ಲ.

ಹಾಗಾಗಿ ಕೋರ್ಟ್ ಉಪವಿಭಾಗಾಧಿಕಾರಿ ಕಚೇರಿ ಜಫ್ತಿಗೆ ಆದೇಶ ಹೊರಡಿಸಿದೆ. ಸಂತ್ರಸ್ತರೊಂದಿಗೆ ಎಸಿ ಕಚೇರಿಗೆ ಆಗಮಿಸಿದ ವಕೀಲರು ಕೋರ್ಟ್ ಆದೇಶ ಪತ್ರ ನೀಡಿ ಕಚೇರಿ ಪೀಠೋಪಕರಣನ್ನು ಜಪ್ತಿ ಮಾಡಿದರು.

ಈ ವೇಳೆ ಸಂತ್ರಸ್ತರ ಪರ ವಕಾಲತ್ತು ವಹಿಸಿರುವ ವಕೀಲರಾದ ಅಪ್ಪಾಸಾಹೇಬ ಸದರಜೋಶಿ ಮಾತನಾಡಿ, ಸಾಂಬ್ರಾದ ಏರ್‍ಫೋರ್ಸ್ ಅಧಿಕಾರಿಗಳ ಕ್ವಾರ್ಟಸ್ ನಿರ್ಮಾಣಕ್ಕಾಗಿ ರಾಜ್ಯ ಮತ್ತು ಕೇಂದ್ರ ಸರಕಾರ 1942ರಲ್ಲಿ ವಶಪಡಿಸಿಕೊಂಡಿದ್ದ 35 ಎಕರೆ ಜಮೀನಿಗೆ ಸಂಬಂಧಿಸಿ ಸರಕಾರದಿಂದ ರೈತರಿಗೆ ಇನ್ನೂ 5 ಕೋಟಿ ರೂ.ಗೂ ಹೆಚ್ಚು ಹಣ ಬರಬೇಕಿದೆ. ಈ ಹಿನ್ನೆಲೆಯಲ್ಲಿ ಕೋರ್ಟ್ ಜಪ್ತಿ ವಾರಂಟ್ ಹೊರಡಿಸಿದೆ. ಇದಕ್ಕಾಗಿ ಉಪವಿಭಾಗಾಧಿಕಾರಿ ಕಚೇರಿಗೆ ಆಗಮಿಸಿ ಪೀಠೋಪಕರಣಗಳನ್ನು ಜಫ್ತಿ ಮಾಡುತ್ತಿದ್ದೇವೆ ಎಂದರು.


Leave a Reply