BelagaviState

ಕೋವಿಡ್ ನಿಯಮ ಉಲ್ಲಂಘನೆ 14 ಪ್ರಕರಣ ದಾಖಲು,  4 ವಾಹನಗಳ ವಶ


ಹುಬ್ಬಳ್ಳಿ:- ಸರ್ಕಾರದ ಕೋವಿಡ್ ಮಾರ್ಗಸೂಚಿಯನ್ನು ಉಲ್ಲಂಘಿಸಿ ಶೇ 50 ಕ್ಕಿಂತ ಹೆಚ್ಚಿನ ಪ್ರಯಾಣಿಕರನ್ನು ಕರೆದೊಯ್ಯುತ್ತಿದ್ದ ವಾಹನಗಳ ವಿರುದ್ಧ  ಧಾರವಾಡ ( ಪೂರ್ವ ) ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಛೇರಿಯ ಮೋಟಾರು ವಾಹನ ನಿರೀಕ್ಷಕರುಗಳು ಕಾರ್ಯಾಚರಣೆ ಕ್ರಮ ಜರುಗಿಸಿದ್ದಾರೆ. ನಿಗದಿಪಡಿಸಿದಕ್ಕಿಂತ ಅಧಿಕ ಪ್ರಯಾಣಿಕರನ್ನು ಹೊತ್ತು ಸಾಗುತ್ತಿದ್ದ 14 ವಾಹನಗಳ ಮೇಲೆ ಪ್ರಕರಣ ದಾಖಲಿಸಿ‌ 4 ವಾಹನಗಳನ್ನು ವಶಪಡಿಸಕೊಳ್ಳಲಾಗಿದೆ.

ಕೋವಿಡ್ -19 ರ ಮಾರ್ಗಸೂಚಿಯನ್ವಯ ಬಸ್ . ಮ್ಯಾಕ್ಸಿಕ್ಯಾಬ್ , ಮೋಟಾರು ಕ್ಯಾಬ್ , ಟೆಂಪೋ ಟ್ರಾವೆಲರ್ ಇತ್ಯಾದಿ ವಾಹನಗಳಿಗೆ ಅನುಮತಿಸಿರುವ ಆಸನ ಮಿತಿಗೆ ಅನುಗುಣವಾಗಿ ಶೇ .50 ರಷ್ಟು ಪ್ರಯಾಣಿಕರನ್ನು ಮಾತ್ರ ಕರೆದೊಯ್ಯಬೇಕಿದೆ.

ಕಾರ್ಯಾಚರಣೆಯಲ್ಲಿ ವಾ.ಕ.ರ.ಸಾ.ಸಂಸ್ಥೆಯ -02 ಬಸ್, ಬೇಂದ್ರೆ ನಗರ ಸಾರಿಗೆಯ -03 ಬಸ್ , ಬಿ.ಆರ್.ಟಿ.ಎಸ್.ಕಂಪನಿಯ -02 ಚಿಗರಿ ಬಸ್, ಪಿ.ಎಸ್.ವಿ -01 ಬಸ್ ಹಾಗೂ 03 ಮೋಟಾರು ಕ್ಯಾಬ್‍ಗಳು ಹಾಗೂ 03 ಮ್ಯಾಕ್ಸಿಕ್ಯಾಬ್‍ಗಳ ಮೇಲೆ ನಿಯಮ ಉಲ್ಲಂಘನೆಗಾಗಿ ಕೇಸು ದಾಖಲಿಸಲಾಗಿದೆ. 01 ಬೇಂದ್ರೆ ನಗರ ಸಾರಿಗೆಯ ಬಸ್ಸು ಹಾಗೂ 03 ಮ್ಯಾಕ್ಸಿಕ್ಯಾಬ್ ಸೇರಿದಂತೆ ಒಟ್ಟಾರೆ 04 ವಾಹನಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಪ್ರಾದೇಶಿಕ ಸಾರಿಗೆ ಅಧಿಕಾರಿ ಅಪ್ಪಯ್ಯ ನಾಲ್ವತ್ವಾಡಮಠ ತಿಳಿಸಿದರು.


Leave a Reply