Koppal

ಕಿಷ್ಕಿಂದೆಯ ಅಂಜನಾದ್ರಿ ಪರ್ವತ ಹನುಮನ ಜನ್ಮಸ್ಥಳ : ಕೇಂದ್ರ ಸರ್ಕಾರ ಉಲ್ಲೇಖ-ಶಾಸಕ ಪರಣ್ಣ ಮುನವಳ್ಳಿ


ಗಂಗಾವತಿ ತಾಲೂಕಿನ ವಿಜಯನಗರ ಸಾಮ್ರಾಜ್ಯದ ರಾಜಧಾನಿ ಆನೆಗೊಂದಿಯ ಕಿಷ್ಕಿಂದೆಯ ಅಂಜನಾದ್ರಿ ಪರ್ವತವನ್ನು ಹನುಮನ ಜನ್ಮಸ್ಥಳ ಎಂದು ಈಗಾಗಲೇ ಕೇಂದ್ರ ಸರ್ಕಾರ ಉಲ್ಲೇಖಿಸಿದೆ ಎಂದು ಗಂಗಾವತಿ ಸ್ಥಳೀಯ ಶಾಸಕ ಪರಣ್ಣ ಮುನವಳ್ಳಿ ಅವರು ತಮ್ಮ ಮನೆಯಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು.

ಆಂದ್ರಪ್ರದೇಶದ ತಿರುಪತಿ ಯಲ್ಲಿ ಆಂಜನೇಯ ಹುಟ್ಟಿದ್ದಾನೆ ಎಂದು ಅಲ್ಲಿಯ ಟಿಟಿಡಿ ಹೊಸ ವಿವಾದವನ್ನು ಹುಟ್ಟು ಹಾಕಿದೆ, ಟಿಟಿಡಿಯ ಹೊಸ ವಿವಾದಕ್ಕೆ ಗಂಗಾವತಿ ತಾಲೂಕಿನ ಶಾಸಕರಾದ ಪರಣ್ಣ ಮುನವಳ್ಳಿ ಅವರು ಮತ್ತು ಇತಿಹಾಸ ಸಂಶೋಧಕರಾದ ಶರಣ ಬಸಪ್ಪ ಕೋಲ್ಕರ್ ಹಾಗೂ ಕನ್ನಡ ಉಪನ್ಯಾಸಕರಾದ ಪವನ್ ಕುಮಾರ್ ಗುಂಡೂರು, ಇನ್ನೊಬ್ಬ ಧಾರ್ಮಿಕ ಮುಖಂಡ ರಾದ ಸಂತೋಷ್ ಕೆಲೋಜಿ ಪತ್ರಿಕಾಗೋಷ್ಠಿ ಕರೆದು ಟಿಟಿಡಿ ಆರೋಪಕ್ಕೆ ಬಹಳಷ್ಟು ಸೂಕ್ತ ದಾಖಲೆಗಳನ್ನು ನೀಡಿ ಮಾತನಾಡಿದರು.

ಹನುಮಂತ ನಿಜವಾಗಿ ಹುಟ್ಟಿರುವುದು ಗಂಗಾವತಿ ಕಿಷ್ಕಿಂದೆಯ ನಾಡಿನಲ್ಲಿ ಎಂದು ಶ್ರೀ ಮಹರ್ಷಿ ವಾಲ್ಮೀಕಿ ಬರೆದ ರಾಮಾಯಣದಲ್ಲಿ ಬಹಳ ಸ್ಪಷ್ಟವಾಗಿ ಉಲ್ಲೇಖವಿದೆ, ಆದರೆ ವಾಲ್ಮೀಕಿ ಬರೆದಾಗ ತ್ರೇತಾಯುಗ ಇದ್ದು, ನಂತರ ದ್ವಾಪರ ಯುಗ ಹುಟ್ಟಿ, ಅಲ್ಲಿಂದ ಕಥೆ ಪುರಾಣಗಳು ಆರಂಭಗೊಂಡು ಈಗ ಕಲಿಯುಗ ಸೃಷ್ಟಿ ಆಗಿದೆ, ಸಾವಿರಾರು ವರ್ಷಗಳ ಇತಿಹಾಸದ ಪುಸ್ತಕದಲ್ಲಿ ಹನುಮ ಜನಿಸಿದ ನಾಡು ಪಂಪಾನದಿ, ಪಂಪಾ ಸರೋವರ, ಹತ್ತಿರ ಕಿಸ್ಕಿಂದೆ ಎಂದು ಬಹಳ ಸ್ಪಷ್ಟವಾಗಿ ಬರೆಯಲಾಗಿದೆ ಆದರೂ ಟಿಟಿಡಿ ಅವರು ಸುಖಾ ಸುಮ್ಮನೆ ಇತಿಹಾಸವನ್ನು ತಿರುಚಲು ಹೊರಟಿದೆ ಎಂದು ಖ್ಯಾತ ಸಂಶೋಧಕರಾದ ಇತಿಹಾಸ ತಜ್ಞ ಡಾ!! ಶರಣಬಸಪ್ಪ ಕೋಲ್ಕಾರ್ ಹೇಳಿದರು.

ತಿರುಪತಿಯಲ್ಲಿ ಹನುಮ ಚಲಿಸಿದ ಬಗ್ಗೆ ಟಿಟಿಡಿ ಅವರ ಹತ್ತಿರ ಯಾವುದೇ ಮೂಲ ದಾಖಲೆಗಳಿಲ್ಲ ಇತಿಹಾಸವನ್ನು ಮರೆ ಮಾಚಲು ಸುದ್ದಿಯನ್ನು ಹುಟ್ಟು ಹಾಕಿದ್ದಾರೆ, ಅಂಜನಾದ್ರಿ ಬೆಟ್ಟದ ಕೆಳಗೆ ಹನುಮನಹಳ್ಳಿ, ಅಂಜನಾದ್ರಿ, ಅಂಜನಹಳ್ಳಿ ಹೀಗೆ ಹನುಮನ ಹೆಸರುಗಳುಳ್ಳ ಹಳ್ಳಿಗಳು ಸಹ ರಾಮಾಯಣದಲ್ಲಿ ಉಲ್ಲೇಖಗೊಂಡಿದೆ, ವಾಲಿ-ಸುಗ್ರೀವ ರಾಜ್ಯಭಾರ ಮಾಡಿದ್ದು, ಶ್ರೀರಾಮ ಇಲ್ಲಿಗೆ ಬಂದಿದ್ದು, ಇಲ್ಲಿನ ಶಿಲಾಶಾಸನಗಳ ಮೂಲಕ ತಿಳಿದುಕೊಳ್ಳಬಹುದಾಗಿದೆ ಎಂದು ಪವನ ಕುಮಾರ್ ಗುಂಡೂರು ಹೇಳಿದರು.ಈ ಸಂದರ್ಭದಲ್ಲಿ ಕಾಡಾ.ಅಧ್ಯಕ್ಷರಾದ ತಿಪ್ಪೇರುದ್ರಸ್ವಾಮಿ ಸಿದ್ದರಾಮಸ್ವಾಮಿ ಬಿಜೆಪಿ ಗ್ರಾಮೀಣ ಮಂಡಲ ಅಧ್ಯಕ್ಷರಾದ ಚನ್ನಪ್ಪ ಮಳಿಗಿ ಅಪರ ಸರ್ಕಾರಿ ವಕೀಲರಾದ ಹೆಚ್.ಸಿ.ಯಾದವ್ ಬಿಜೆಪಿ ಮುಖಂಡರಾದ ಹನಮಂತಪ್ಪ ನಾಯಕ್ ಗೌರೀಶ ಬಾಗೋಡಿ ನಗರಸಭೆ ಸದಸ್ಯರಾದ ಪರಶುರಾಮ ಮಡ್ಡೇರ್ ಬಿಜೆಪಿ ನಗರ ಮಂಡಲ ಅಧ್ಯಕ್ಷರಾದ ಕಾಶೀನಾಥ್ ಚಿತ್ರಗಾರ್

ಹನುಮೇಶ್ ಬಟಾರಿ


Leave a Reply