State

ಗುಂಡ್ಲುಪೇಟೆಯಲ್ಲಿ ಕೊರೊನಾ ಹೆಲ್ಪ್ ಲೈನ್ ಆರಂಭಿಸಿದ ತಾಲ್ಲೂಕು ಆಡಳಿತ


ಗುಂಡ್ಲುಪೇಟೆ: ಹೆಚ್ಚುತ್ತಿರುವ ಕೋರೋಣ ಎರಡನೇ ಅಲೆ ಹಿನ್ನಲೆಯಲ್ಲಿ ಗುಂಡ್ಲುಪೇಟೆ ಶಾಸಕ ನಿರಂಜನ್ ಕುಮಾರ್ ಗುರುವಾರ ತಾಲೂಕು ಕಚೇರಿಯಲ್ಲಿ ಅಧಿಕಾರಿಗಳ ಸಭೆ ನಡೆಸಿ ಕೋರೋಣ ತುರ್ತು ಸೇವೆಗಳಿಗಾಗಿ 08229-222225 ಸಂಖ್ಯೆಗೆ ಕರೆಮಾಡಲು ಶಾಸಕರ ಮನವಿ ಮಾಡಿದರು.

ಗುಂಡ್ಲುಪೇಟೆ ತಾಲೂಕಿನಲ್ಲಿ 197 ಪ್ರಕರಣಗಳು ದಾಖಲಾಗಿದ್ದವು. ಸದ್ಯ 160 ಕೋರೋಣ ಪಾಸಿಟಿವ್ ಪ್ರಕರಣಗಳು ಸಕ್ರಿಯವಾಗಿವೆ. ಅವುಗಳಲ್ಲಿ ಕೇವಲ 6 ಪ್ರಕರಣಳಷ್ಟೇ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಬಾಕಿ ಎಲ್ಲವನ್ನೂ ಹೋಮ್ ಐಸೋಲೇಷನ್ ಗೆ ಸೂಚಿಸಲಾಗಿದೆ ಎಂದು ತಾಲೂಕು ಆರೋಗ್ಯಾಧಿಕಾರಿ ರವಿ ಶಾಸಕರಿಗೆ ಮಾಹಿತಿ ನೀಡಿದರು.

ಮೇ ಒಂದನೇ ತಾರೀಕಿನಿಂದ 18ವರ್ಷ ಮೇಲ್ಪಟ್ಟ ಎಲ್ಲರಿಗೂ ಕೋರೋಣ ಲಸಿಕೆ ಹಾಕಿಸಿಕೊಳ್ಳುವಂತೆ ಸರ್ಕಾರ ಈಗಾಗಲೇ ಆದೇಶ ನೀಡಿದ್ದು, ಸದ್ಯ 45ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡುತ್ತಿರುವುದನ್ನು ಆದಷ್ಟೂ ಬೇಗ ತಾಲೂಕಿನ ಎಲ್ಲರಿಗೂ ಲಸಿಕೆ ನೀಡುವಂತೆ ಹಾಗೂ ಹೆಚ್ಚಿನ ಪ್ರಮಾಣದಲ್ಲಿ ಟೆಸ್ಟಿಂಗ್ ಮಾಡಿ ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದರು.

ಇವೆಲ್ಲದರ ಜೊತೆ ಕೋರೋಣ ಹೆಲ್ಪ್ ಲೈನ್ ಸೇವೆಯನ್ನು ತುರ್ತಾಗಿ ಆರಂಭಿಸುವಂತೆ ಶಾಸಕರು ಅಧಿಕಾರಿಗಳಿಗೆ ಆದೇಶ ಮಾಡಿದರು. ದೂರವಾಣಿ ಸಂಖ್ಯೆ: 08229-222225 ಈ ಸಂಖ್ಯೆಗೆ ತಾಲೂಕಿನ ಯಾವುದೇ ಮೂಲೆಯಿಂದ ಕರೆ ಮಾಡಿ ಕೋರೋಣ ರೋಗದ ಬಗ್ಗೆ ಸಂಬಂಧಪಟ್ಟ ಮಾಹಿತಿ ಪಡೆಯಬಹುದು.

ಹಲವಾರು ದಿನಗಳಿಂದ ಗುಂಡ್ಲುಪೇಟೆ ಸರ್ಕಾರಿ ಆಸ್ಪತ್ರೆಯಲ್ಲಿ ಕಾಡುತ್ತಿದ್ದ ನೀರಿನ ಸಮಸ್ಯೆಗೆ ಶಾಸಕರು ಶಾಶ್ವತ ಪರಿಹಾರ ನೀಡಿದರು. ಕೊಳವೆ ಬಾವಿ ನೀರು ಕಡಿಮೆಯಾಗುತ್ತಿದ್ದ ಕಾರಣ ಈ ಕೂಡಲೇ ಪುರಸಭೆಯಿಂದ ಹೊಸ ನೀರಿನ ಸಂಪರ್ಕ ಮಾಡಿಕೊಡುವಂತೆ ಪುರಸಭೆ ಅಧಿಕಾರಿ ರಮೇಶ್ ಅವರಿಗೆ ಸೂಚನೆ ನೀಡಿದರು.

ತಾಲೂಕಿನಲ್ಲೇ ಅತಿ ಹೆಚ್ಚು ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿರುವ ಹಂಗಳ ಗ್ರಾಮಕ್ಕೆ ಅತಿಶೀಘ್ರವಾಗಿ ಹೊಸ ಕೊಳವೆಬಾವಿ ಕೊರೆಸಿ ನೀರಿನ ಅಭಾವ ತಡೆಗಟ್ಟುವಂತೆ ಹಾಗೂ ಜಲಜೀವನ್ ಯೋಜನೆ ಅಡಿಯಲ್ಲಿ ಕೆಲಸ ನಿರ್ವಹಿಸುತ್ತಿರುವ ಗುತ್ತಿಗೆದಾರರಿಂದ ಆದಷ್ಟೂ ಬೇಗ ಕಾಮಗಾರಿ ಮುಗಿಸುವಂತೆ ಕುಡಿಯುವ ನೀರು ಕಾರ್ಯಪಾಲಕ ಅಭಿಯಂತರರು ಪಲ್ಲವಿ ಅವರಿಗೆ ಸೂಚನೆ ನೀಡಿದರು.


Leave a Reply