Statevijayapur

ಆಕಸ್ಮಿಕ ಬೆಂಕಿ, ಕೊಂಡಗೂಳಿ ಗ್ರಾಮದಲ್ಲಿ ಜೋಳದ ಬಣಿವೆ ಭಸ್ಮ


ದೇವರಹಿಪ್ಪರಗಿ: ಪಟ್ಟಣದ ಸಮೀಪವಿರುವ ಕೊಂಡಗೂಳಿ ಗ್ರಾಮದಲ್ಲಿ ಗುರುವಾರದಂದು ಕಣಕಿ ಸಂಗ್ರಹಿಸಿದ ಬಣವೆಗೆ ಆಕಸ್ಮಿಕವಾಗಿ ಬೆಂಕಿ ಹತ್ತಿ ಅಪಾರ ಪ್ರಮಾಣದ ಮೇವು ಸುಟ್ಟು ಭಸ್ಮವಾದ ಘಟನೆ ನಡೆದಿದೆ.
ಕೊಂಡಗೂಳಿ ಗ್ರಾಮದ ಶಿವಾನಂದ ಸೋಮಲಿಂಗಪ್ಪ ಕೆಂಭಾವಿ ಎಂಬುವರಿಗೆ ಸೇರಿದ ನಾಲ್ಕು ಟ್ರ್ಯಾಕ್ಟರ್ ಜೋಳದ ಕಣಕಿಯ ಬಣಿಮೆಗೆ  ಬೆಂಕಿ ಹೊತ್ತಿ ಉರಿದು ಹೋಗಿದೆ. ಇದರಿಂದಾಗಿ ಸಾವಿರಾರು ರೂಪಾಯಿ ಮೌಲ್ಯದ ಮೇವು ಸುಟ್ಟಿದೆ.
ಬೆಂಕಿ ಹೊತ್ತಿದ ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಗ್ರಾಮದ ಯುವಕರು ಎಲ್ಲರೂ ಸೇರಿ ಬೆಂಕಿ ನಂದಿಸಿದರು. ಅಷ್ಟೊತ್ತಿಗಾಗಲೇ ಅಪಾರ ಪ್ರಮಾಣದ ಜೋಳದ ಕಣಕಿ ಸುಟ್ಟು ಬೂದಿಯಾಗಿತ್ತು.
ಆಕಸ್ಮಿಕ ಬೆಂಕಿಯ ಅನಾಹುತಕ್ಕೆ ಸಿಲುಕಿದ ರೈತ ಕುಟುಂಬ ಕಣ್ಣೀರು ಹಾಕಿದೆ. ಬರಗಾಲದ ಹಿನ್ನಲೆಯಲ್ಲಿ ಜಾನುವಾರುಗಳಿಗೆ ಮೇವಿಲ್ಲದ್ದು ಒಂದಡೆಯಾದರಡೆಯಾದರೆ, ಇರುವ ಬಣವೆ ಸುಟ್ಟ ಪರಿಣಾಮ ಮುಂದಿನ ದಿನಗಳಲ್ಲಿ ಜಾನುವಾರುಗಳಿಗೆ ಮೇವು ಒದಗಿಸುವುದು ಹೇಗೆ ಎಂಬ ಕೊರಗು ರೈತಾಪಿ ವರ್ಗ ಸಂಕಷ್ಟಕ್ಕೆ ಸಿಲುಕಿವೆ.

Leave a Reply