BengaluruState

ಹಳೆ ದಾಖಲೆಗಳನ್ನು ಹಿಂದಿಕ್ಕಿದ ಕೊರೊನಾ, ರಾಜ್ಯದಲ್ಲಿ ಮುಂದುವರೆದ ಅಟ್ಟಹಾಸ


ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಮರಣ ಮೃದಂಗ ಮುಂದುವರೆದಿದ್ದು ಕರುನಾಡೇ ತತ್ತರಿಸಿದೆ. ಇವತ್ತು ಹೊಸದಾಗಿ 25,795 ಜನರಿಗೆ ಕೊರೋನಾ ಪಾಸಿಟಿವ್ ವರದಿ ಬಂದಿದ್ದು ಒಂದೇ ದಿನ 123 ಸೋಂಕಿತರು ಮೃತಪಟ್ಟಿದ್ದಾರೆ. ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 12,47,997 ಕ್ಕೆ ಏರಿಕೆಯಾಗಿದೆ.

243 ಜನ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇವತ್ತು ರಾಜ್ಯದಲ್ಲಿ 5624 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಇದುವರೆಗೆ 10,37,857 ಜನ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. ರಾಜ್ಯದಲ್ಲಿ 1,96,236 ಸಕ್ರಿಯ ಪ್ರಕರಣಗಳು ಇವೆ. ಬೆಂಗಳೂರಿನಲ್ಲಿ ಕೊರೋನಾ ಸುನಾಮಿಯೇ ಎದ್ದಿದ್ದು, ಬರೋಬ್ಬರಿ 15,244 ಜನರಿಗೆ ಸೋಂಕು ತಗುಲಿದೆ. 68 ಸೋಂಕಿತರು ಸಾವನ್ನಪ್ಪಿದ್ದಾರೆ. 1,37,813 ಸಕ್ರಿಯ ಪ್ರಕರಣಗಳು ಇವೆ.


Leave a Reply