State

ಒಂದೇ ದಿನ 3ಲಕ್ಷದ ಗಡಿ ತಲುಪಿದ ಸೋಂಕಿತರ ಸಂಖ್ಯೆ


ಹೊಸದಿಲ್ಲಿ : ದೇಶಾದ್ಯಂತ ಕೂರೋನಾ ಸೊಂಕಿತರ ಸಂಖ್ಯೆ ಅತ್ಯಂತ ವೇಗವಾಗಿ ಹೆಚ್ಚುತ್ತಿದೆ .ಬುಧವಾರ ಒಂದೇ ದಿನ ದೇಶಾದ್ಯಂತ 2.95041ಜನಕ್ಕೆ ಸೋಂಕು ತಗುಲಿರುವ ವಿಚಾರ ತೀವ್ರ ಆತಂಕಕ್ಕೆ ಎಡೆಮಾಡಿದೆ .

ಕೊರೊನಾ 2ನೇ ಅಲೆ ಅಬ್ಬರ ಹೆಚ್ಚುತ್ತಿದ್ದು, ಕಳೆದ 24 ಗಂಟೆಯಲ್ಲಿ ದಾಖಲೆ ಪ್ರಮಾಣದಲ್ಲಿ 2,95,041 ಜನರಲ್ಲಿ ಸೋಂಕು ಪತ್ತೆಯಾಗಿದೆ. ಈ ಮೂಲಕ ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 1,56,16,130ಕ್ಕೆ ಏರಿಕೆಯಾಗಿದೆ.

ಒಂದೇ ದಿನದಲ್ಲಿ ಸಾವಿನ ಸಂಖ್ಯೆಯೂ ಹೆಚ್ಚಿದ್ದು, 24 ಗಂಟೆಯಲ್ಲಿ 2,023 ಜನರು ಬಲಿಯಾಗಿದ್ದಾರೆ. ಈ ಮೂಲಕ ದೇಶದಲ್ಲಿ ಕೊರೊನಾ ಸೋಂಕಿಗೆ ಬಲಿಯಾದವರ ಸಂಖ್ಯೆ 1,82,553ಕ್ಕೆ ಏರಿಕೆಯಾಗಿದೆ.

ಇನ್ನು ದೇಶದಲ್ಲಿ 21,57,538 ಕೋವಿಡ್ ಸಕ್ರಿಯ ಪ್ರಕರಣಗಳಿದ್ದು 1,32,76,039 ಸೋಂಕಿತರು ಗುಣಮುಖರಾಗಿದ್ದಾರೆ. ಕಳೆದ 24 ಗಂಟೆಯಲ್ಲಿ 1,67,457 ಸೋಂಕಿತರು ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.

ಬೆಳಗಾವಿಯಲ್ಲಿ ಒಂದೇ ದಿನ 301 ಜನರಿಗೆ ಸೋಂಕು

ಬೆಳಗಾವಿ ಜಿಲ್ಲೆಯಲ್ಲೂ ಕೊರೋನಾ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಬುಧವಾರ ಒಂದೇ ದಿನ 301 ಜನರಿಗೆ ಸೋಂಕು ಪತ್ತೆಯಾಗಿದೆ.

ಇಂದು ಖಾನಾಪುರದಲ್ಲಿ 144, ಬೆಳಗಾವಿಯಲ್ಲಿ 104. ಅಥಣಿ 2, ಬೈಲಹೊಂಗಲ 5, ಚಿಕ್ಕೋಡಿ 6, ಗೋಕಾಕ 21, ಹುಕ್ಕೇರಿ 3, ರಾಮದುರ್ಗ 2, ಸವದತ್ತಿ 7 ಹಾಗೂ ಇತರೆ 7 ಜನರಿಗೆ ಸೋಂಕು ದೃಢಪಟ್ಟಿದೆ.

 


Leave a Reply