BengaluruState

ಸರಕಾರದ ವಿರುದ್ಧ ಟ್ವಿಟರ್ ನಲ್ಲಿ ಗುಟುರು ಹಾಕಿದ ಟಗರು


ಬೆಂಗಳೂರು: ರಾಜ್ಯದಲ್ಲಿ ಸರಕಾರದ ವಿರುದ್ಧ ವಿರೊಧ ಪಕ್ಷದ ನಾಯಕ ಸಿದ್ದರಾಮಯ್ಯ ಟ್ವಿಟರ್ ನಲ್ಲಿ ಮತ್ತೆ ಗುಟುರು ಹಾಕಿದ್ದಾರೆ.  ಇದೇನು ಚುನಾಯಿತ ಸರ್ಕಾರವಿದೇಯೋ ಇಲ್ಲ, ಹುಚ್ಚರ ಸಂತೆ ಇದೆಯೋ ಎಂದು ಗುಡುಗಿದ್ದಾರೆ.

ಕ್ಷಣಕ್ಕೊಂದು ನಿಯಮ, ಕ್ಷಣಕ್ಕೊಂದು ಮಾರ್ಗಸೂಚಿ ಹೊರಡಿಸಿ ಅಮಾಯಕ ಜನರ ಮೇಲೆ ದೌರ್ಜನ್ಯ ಮಾಡುತ್ತಿದ್ದೀರಾ ಎಂದು ಪ್ರಶ್ನಿಸಿದ್ದಾರೆ. ಈ ಸಂಬಂಧ ಟ್ವೀಟ್ ಮಾಡಿರುವ ಅವರು, ಆಡಳಿತ ನಡೆಸಲು ಆಗದಿದ್ದರೆ ಕುರ್ಚಿ ಬಿಟ್ಟು ತೊಲಗಿ, ಜನರನ್ನೇಕೆ ಗೋಳಾಡಿಸುತ್ತೀರಾ ಎಂದು ಪ್ರಶ್ನಿಸಿದ್ದಾರೆ.

ಲಾಕ್​​ಡೌನ್​ ಇರಲಿ, ಕರ್ಫ್ಯೂ ಇರಲಿ ಜನರಿಗೆ ಮೊದಲು ಮನವರಿಕೆ ಮಾಡಿಕೊಡಿ. ಜನರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಪೂರ್ವಸಿದ್ಧತೆಯೊಂದಿಗೆ ಮಾಡಿ. ಬಿಜೆಪಿ ಸರ್ಕಾರದ ನಿಷ್ಕ್ರಿಯತೆ, ದುರಾಳಿತದಿಂದಲೇ ಕೊರೋನಾ ತೀವ್ರವಾಗಿ ಉಲ್ಬಣಿಸಿದೆ. ತಮ್ಮ ವೈಫಲ್ಯ ಮುಚ್ಚಿಕೊಳ್ಳಲು ಪೊಲೀಸರ ಕೈಗೆ ಲಾಠಿ ಕೊಟ್ಟು ಬೀದಿಗಿಳಿಸಿದರೆ ಕೊರೋನಾ ಓಡಿ ಹೋಗುತ್ತಾ ಎಂದು ಸಿದ್ದರಾಮಯ್ಯ ಕಿಡಿಕಾರಿದ್ದಾರೆ.

 


Leave a Reply