BelagaviState

ಸರಕಾರ ತಮ್ಮದಾದರೂ ತಪ್ಪು ತಪ್ಪೆ… ಸರಕಾರದ ವಿರುದ್ದ ಶಾಸಕ ಅನೀಲ್ ಬೆನಕೆ..?!


ಬೆಳಗಾವಿ: ರಾಜ್ಯ ಸರ್ಕಾರಪರಿಷ್ಕೃತ ಮಾರ್ಗಸೂಚಿಯಿಂದ  ಬೀದಿ ವ್ಯಾಪಾರಿಗಳ ಬದುಕು ಅದೋಗತಿಯಾಗುತ್ತದೆ. ಅನಾವಶ್ಯಕವಾಗಿ ಸುತ್ತಾಡುವ ಜನರ ಮೇಲೆ ಕ್ರಮ ಜರುಗಿಸಿ ಅದನ್ನು ಬಿಟ್ಟು ಮದ್ಯಮ ವರ್ಗದವರ ಮೇಲೆ ಪರಿಣಾಮ ಬೀರುವ ನಿಯಮಗಳನ್ನು ಹೇರಬೇಡಿ ಎಂದು ಎಂದು ತಮ್ಮದೇ ಸರ್ಕಾರಕ್ಕೆ ಶಾಸಕ ಅನಿಲ ಬೆನಕೆ ಆಗ್ರಹಿಸಿದ್ದಾರೆ.

ಇಂದು ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ಮಾದ್ಯಮಗಳ ಜೊತೆ ಮಾತನಾಡಿದ ಅವರು  ಸರ್ಕಾರ ಜಾರಿಗೊಳಿಸಿರುವ ಪರಿಷ್ಕೃತ ಮಾರ್ಗಸೂಚಿಯಿಂದ ಜನ ಸಾಮಾನ್ಯರಿಗೆ ತೊಂದರೆಯಾಗುತ್ತಿದ್ದು ಅದನ್ನು ಸಡಲಿಕೆ ಗೊಳಿಸಬೇಕೆಂದು ಜಿಲ್ಲಾಧಿಕಾರಿಗಳ ಜೊತೆ ಮಾತನಾಡಲಿದ್ದೇವೆ ಅವರು ಒಪ್ಪದೇ ಹೋದಲ್ಲಿ ಸರಕಾರಕ್ಕೆ ಆಗ್ರಹಿಸುವ ಕೆಲಸ ಮಾಡುತ್ತೆವೆ . ಶನಿವಾರ, ರವಿವಾರ ಲಾಕ್ ಡೌನ್ ಮಾಡಲು ಜನರಿಗೂ ಸಮ್ಮತಿ ಇತ್ತು ಆದರೆ ಈಗ ತಂದಿರುವ ಹೊಸ ರೂಲ್ಸ್ ಎಲ್ಲರಿಗೂ ಹೆರೆಯಾಗಲಿದೆ ಅದ್ದರಿಂದ ಸರಕಾರ ಇದರತ್ತ ಗಮನ ಹರಿಸಬೇಕೆಂದರು.

ಮಾಸ್ಕ್,  ಸಾಮಾಜಿಕ ಅಂತರ, ಸಾನಿಟೈಸರ್ ಕಡ್ಡಾಯಗೋಳಿಸಬೇಕು.‌ ಬೇಕಾಬಿಟ್ಟಿಯಾಗಿ ತಿರುಗಾಡುವರ ವಿರುದ್ಧ ಕ್ರಕೈಗೊಳ್ಳಬೇಕು.  ಮದುವೇ ಸೇರಿದಂತೆ ಇತರೆ ಸಮಾರಂಭಗಳಿಗೆ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಬೇಕು ಆದರೆ ಸಾಮನ್ಯ ಜನರಗೆ ತೊಂದರೆ ಆಗದಂತೆ ನೋಡಿಕೊಳ್ಳಬೇಕು ಎಂದು ಅವರು ಹೇಳಿದರು.‌

ಲಾಕ್ ಡೌನ್ ಮಾಡುವುದದರೆ ಜನರಿಗೆ ಮುಂಚೆಯೇ ತಿಳಿಸಬೇಕು.‌ ಮದುವೆಗಳಿಗೆ ಹೋಗುವ ಬ್ಯಾಂಡ್ ಗಳಿಗೆ ಸಂಪೂರ್ಣ  ನಿರ್ಭಂದನೆ ಹೇರದೇ ನಿಯಮಗಳಿಗೆ ಅನುಸಾರ ಅನುಮತಿ ಕೊಡಬೇಕು, ಅದನ್ನು ಬಿಟ್ಟು ಸರ್ಕಾರ ಮನಸ್ಸಿಗೆ ಬಂತಂತೆ ಮಾಡಬಾರದು ಎಂದು ತಮ್ಮದೇ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.


Leave a Reply