State

ರೈಲ್ವೆ ಬೋಗಿಗಳೀಗ ಐಸೊಲೇಶನ್ ವಾರ್ಡ್ಗಳು, ಕೊರೊನಾ ಕಟ್ಟಿಹಾಕಲು ಕೈ ಜೋಡಿಸಿದ ರೈಲ್ವೆ ಇಲಾಖೆ..!


ಹುಬ್ಬಳ್ಳಿ: ಕೊರೋನಾ ವೈರಸ್ ಎರಡನೇ ಅಲೆಯು ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಅಲ್ಲದೆ, ಮಹಾಮಾರಿ ನಿಯಂತ್ರಣಕ್ಕೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಹರಸಾಹಸ ಪಡುತ್ತಿವೆ. ಇದಕ್ಕೆ ಬೆಂಬಲವಾಗಿ ರೈಲ್ವೆ ಇಲಾಖೆಯೂ ಸಹ ಕೈ ಜೋಡಿಸಿದ್ದು, ರೈಲ್ವೆ ಬೋಗಿಗಳನ್ನು ಇದೀಗ ಮತ್ತೇ ಐಸೊಲೇಶನ್ ವಾರ್ಡ್ ಗಳಾಗಿ ಪರಿವರ್ತಿಸಲಾಗುತ್ತಿದೆ.

ಸಾಕಷ್ಟು ಆತಂಕವನ್ನು ಸೃಷ್ಠಿ ಮಾಡುತ್ತಿರುವಂತಹ ಮಹಾಮಾರಿ ಕೊರೋನಾ ಎರಡನೇ ಅಲೆಯ ನಿಯಂತ್ರಣಕ್ಕೆ ಈಗಾಗಲೇ ಕೇಂದ್ರ ಸರ್ಕಾರ ಅನೇಕ ರೀತಿಯ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಂಡಿದೆ. ದೇಶದ ಎಲ್ಲೆಡೆ ಯಾವುದೇ ರೀತಿಯಲ್ಲಿ ಕೊರೋನಾ ಕಾರ್ಮೋಡ ಪಸರಿಸಬಾರದು ಎಂಬ ಕಠಿಣ ಕ್ರಮಗಳನ್ನೂ ಸಹ ತೆಗೆದುಕೊಂಡಿದೆ. ಈ ಒಂದು ಮಹತ್ವದ ಕಾರ್ಯಕ್ಕೆ ರೈಲ್ವೇ ಇಲಾಖೆಯೂ ಹೊರತಾಗಿಲ್ಲ. ಕೊರೋನಾ ಎರಡನೇ ಅಲೆಯಿಂದಾಗಿ ದೇಶದೆಲ್ಲೆಡೆ ಹೆಚ್ಚಾಗುತ್ತಿರುವ ಕರೋನ ಸೊಂಕಿತರ ಚಿಕಿತ್ಸೆ ದೃಷ್ಟಿಯಿಂದ ಸೌಥ್ ವೆಸ್ಟರ್ನ್‌  ರೈಲ್ವೆ ಸನ್ನದ್ಧವಾಗುತ್ತಿದೆ. ರಾಜ್ಯ ಹಾಗೂ ದೇಶದಲ್ಲಿನ ಆಸ್ಪತ್ರೆಗಳಲ್ಲಿ ಐಸೊಲೇಶನ್ ವಾರ್ಡ್ ಗಳ ಕೊರತೆ ನೀಗಿಸುವುದಕ್ಕೆ ರೈಲ್ವೆ ಕೋಚ್ ಗಳನ್ನು ಮತ್ತೇ ಐಸೊಲೇಶನ್ ವಾರ್ಡ್ ಗಳನ್ನಾಗಿ ಪರಿವರ್ತನೆ ಮಾಡುವ ಮೂಲಕ ರೈಲ್ವೇ ಇಲಾಖೆ ಮಹತ್ವದ ಕಾರ್ಯಕ್ಕೆ ಮುಂದಾಗಿದೆ. ಈ ಹಿಂದೆ ಕೊರೋನಾ ಮೊದಲ‌ ಅಲೆಯ ಹಿನ್ನೆಲೆಯಲ್ಲಿ ಹುಬ್ಬಳ್ಳಿಯ ರೈಲ್ವೆ ವರ್ಕ್ ಶಾಪ್ ನಲ್ಲಿ 96 ಕೋಚ್ ಗಳು ಸೇರಿದಂತೆ ಇಲಾಖೆಯ ವ್ಯಾಪ್ತಿಯಲ್ಲಿ 312 ಕೋಚ್ ಗಳನ್ನು ಐಸೋಲೇಶನ್ ವಾರ್ಡ್ ಗಳನ್ನಾಗಿ ಪರಿವರ್ತನೆ ಮಾಡಲಾಗಿತ್ತು. ಅದೇ ರೀತಿ ಇದೀಗ ಮತ್ತೆ 280 ಕೋಚ್ ಗಳನ್ನು ಐಸೋಲೇಶನ್ ವಾರ್ಡ್ ಗಳನ್ನಾಗಿ ಪರಿವರ್ತನೆ ಮಾಡಿದೆ.

ಇನ್ನೂ ಪ್ರಮುಖವಾಗಿ ಸೌಥ್ ವೆಸ್ಟರ್ನ್‌ ರೈಲ್ವೆ ಇಲಾಖೆಯ ವ್ಯಾಪ್ತಿಯಲ್ಲಿ ಈ ಮೊದಲು 312 ರೈಲ್ವೇ ಕೋಚ್ ಗಳನ್ನು ಪರಿವರ್ತನೆ ಮಾಡಲಾಗಿತ್ತು. ಅಲ್ಲದೆ ಹುಬ್ಬಳ್ಳಿಯಲ್ಲಿ 96 ಕೋಚ್ ಗಳನ್ನ ಐಸೋಲೇಶನ್ ಗಳಾಗಿ ಮಾರ್ಪಾಡು ಮಾಡಲಾಗಿತ್ತು. ಆದರೆ, ಆಸ್ಪತ್ರೆಗಳಲ್ಲಿ ಬೆಡ್ ಕೊರತೆ ಕಾಣದ ಹಿನ್ನೆಲೆಯಲ್ಲಿ ಯಾವುದೇ ಐಸೊಲೇಶನ್‌ ಕೋಚ್ ಚಿಕಿತ್ಸೆಗೆ ಬಳಕೆಯಾಗಿರಲಿಲ್ಲ. ಆದರೆ ಇದೀಗ ಕೊರೋನಾ ಎರಡನೇ ಅಲೆಯು ಮತ್ತೇ ಅಪ್ಪಳಿಸಿದ್ದು, ರೈಲ್ವೇ ಇಲಾಖೆ ತನ್ನ ವ್ಯಾಪ್ತಿಯಲ್ಲಿ ಮತ್ತೇ 280 ಕೋಚ್ ಗಳನ್ನು ಐಸೋಲೇಶನ್‌ ವಾರ್ಡ್ ಗಳನ್ನಾಗಿ ತಯಾರುಮಾಡಿದೆ. ಒಂದು ಕೋಚ್ ನಲ್ಲಿ16 ಜನರಿಗೆ ಎಂಬಂತೆ ಇಲ್ಲಿ ಐಸೊಲೇಶನ್ ನೀಡುವ ವ್ಯವಸ್ಥೆ ಮಾಡಲಾಗಿದೆ.

ಒಟ್ಟಾರೆ ದೇಶಾದ್ಯಂತ ತನ್ನ ರೌದ್ರ ನರ್ತನ ನಡೆಸಿರುವ ಮಹಾಮಾರಿ ಕೊರೋನಾ ಎರಡನೇ ಅಲೆಯ ನಿಯಂತ್ರಣಕ್ಕೆ ಕೇಂದ್ರ ಸರ್ಕಾರ ಈಗಾಗಲೇ ಅನೇಕ ರೀತಿಯ ಮುಂಜಾಗ್ರತ ಕ್ರಮಗಳನ್ನು ಕೈಗೊಂಡಿರುವ ಬೆನ್ನಲ್ಲೆ ಸೌಥ್ ವೆಸ್ಟರ್ನ್ ರೈಲ್ವೆ ಇಲಾಖೆಯೂ ಸಹ ಈ ಮಹಾಮಾರಿಯ ನಿಯಂತ್ರಣಕ್ಕೆ ರೈಲ್ವೆ ಕೋಚ್ ಗಳನ್ನು ಮತ್ತೆ ಐಸೊಲೇಶನ್ ವಾರ್ಡ್ ಗಳನ್ನಾಗಿ ಪರಿವರ್ತಿಸುವ ಮೂಲಕ ಮಹಾಮಾರಿಯ ನಿಯಂತ್ರಣಕ್ಕೆ ಪಣ ತೊಟ್ಟಿರುವುದು ನಿಜಕ್ಕೂ ಶ್ಲಾಘನೀಯ.


Leave a Reply