vijayapur

ಏ.೨೬ ರಂದು ನವರಸಪುರ ವ್ಯಾಪ್ತಿಯಲ್ಲಿ ವಿದ್ಯುತ್ ವ್ಯತ್ಯಯ


ವಿಜಯಪುರ ಏ. ೨೧ : ವಿಜಯಪುರ ಕಾರ್ಯ ಮತ್ತು ಪಾಲನೆ ನಗರ ಉಪ ವಿಭಾಗ-೨, ಹು. ವಿ. ಸ. ಕಂ. ನಿ, ವಿಜಯಪುರದ ನವರಸಪುರ ವ್ಯಾಪ್ತಿಯಲ್ಲಿ ವಾಟರ್ ಟ್ಯಾಂಕ್ ಫೀಡರ್‌ನ ಮೇಲೆ ಲೋಕೋಪಯೋಗಿ ಇಲಾಖೆಯಿಂದ ಮಾರ್ಗ ಬದಲಾವಣೆ ಮತ್ತು ಕಂಬಗಳನ್ನು ಸ್ಥಳಾಂತರಿಸಲು ನಿರ್ಧರಿಸಲಾಗಿರುವ ಹಿನ್ನೆಲೆಯಲ್ಲಿ ದಿನಾಂಕ ೨೬- ೪- ೨೦೨೧ ರಂದು ಬೆಳಗ್ಗೆ ೯: ೦೦ ರಿಂದ ಸಂಜೆ ೬:೦೦ ರವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ವಿಜಯಪುರ. ಹು. ವಿ. ಸ. ಕಂ. ನಿ, ಕಾರ್ಯ ಮತ್ತು ಪಾಲನೆ ನಗರ ಉಪ ವಿಭಾಗ-೨ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು(ವಿ ) ತಿಳಿಸಿದ್ದಾರೆ.
ಅದರಂತೆ ರಾಜಾಜಿ ನಗರ, ಬಗ್ವಾನ್ ಕಾಲೋನಿ, ಎಸ್. ಪಿ ಆಫೀಸ್, ಅಡಕಿ ಗಲ್ಲಿ, ಶಾಪುರ್ ಅಗಸಿ ಮಠಪತಿ ಗಲ್ಲಿ, ಕುಂಬಾರ್ ಗಲ್ಲಿ, ಕಲಾಲ್ ಗಲ್ಲಿ, ಹತ್ತಿರದ ಪ್ರದೇಶಗಳಲ್ಲಿ ವಿದ್ಯುತ್ ಅಡಚಣೆ ಉಂಟಾಗುತ್ತದೆ. ಕಾರಣ ಗ್ರಾಹಕರು ಸಹಕರಿಬೇಕೆಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Leave a Reply