vijayapur

ನೊಂದ ಮನಸ್ಸಿಗೆ ಯುವಸ್ಪಂದನವು ಉತ್ತಮ ಕಾರ್ಯಕ್ರಮ: ಯುವ ಪರಿವರ್ತಕ ಬಸವರಾಜ್ ನಿಂಬರಗಿ


ವಿಜಯಪುರ ಏ. ೨೧ : ತಂದೆ-ತಾಯಿ ಸೇರಿದಂತೆ ಕುಟುಂಬದ ಜೊತೆ ಬಂಧುಬಾAಧವರ ಜೊತೆ ನೆರೆಹೊರೆಯವರ ಜೊತೆ ಹೇಗೆ ನಡೆದುಕೊಳ್ಳಬೇಕು ಎಂದು ತಿಳಿಸುವ ಹಾಗೂ ನೊಂದ ಮನಸ್ಸಿಗೆ ಸ್ಪಂದಿಸುವ ಯುವಸ್ಪಂದನವು ಉತ್ತಮವಾದ ಕಾರ್ಯಕ್ರಮವಾಗಿದೆ ಎಂದು ಜಿಲ್ಲೆಯ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಯುವ ಪರಿವರ್ತಕರಾದ ಬಸವರಾಜ್ ನಿಂಬರಗಿ ಅವರು ಹೇಳಿದರು.
ಜಿಲ್ಲೆಯ ಸಿಂದಗಿ ತಾಲೂಕಿನ ಆರ್ ಡಿ ಪಾಟೀಲ್ ಪಿಯು ಕಾಲೇಜ್‌ನಲ್ಲಿ ಇತ್ತೀಚೆಗೆ ಏರ್ಪಡಿಸಲಾದ ಯುವ ಸ್ಪಂದನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಯುವಕರ, ವಿದ್ಯಾರ್ಥಿಗಳ ಸಮಸ್ಯೆಗಳಾದ ಸುರಕ್ಷತೆ ಆರೋಗ್ಯ ಮತ್ತು ಜೀವನಶೈಲಿ ಬೆಳವಣಿಗೆ ಲೈಂಗಿಕತೆ ಭಾವನೆಗಳ ಬಗ್ಗೆ ಕುರಿತು ಮಾಹಿತಿ ನೀಡಿದರು
ಜೀವನದಲ್ಲಿ ಯಶಸ್ವಿಯಾಗಲು ಒತ್ತಡ ಮಾನಸಿಕ ಅಸ್ವಸ್ಥ ಸಂಹನ ಸಮಸ್ಯೆಗಳು ಪರಿಹರಿಸುವಿಕೆ ಹೀಗೆ ಹಲವಾರು ಸಮಸ್ಯೆಗಳನ್ನು ನಾವು ಹೇಗೆ ಬಗೆಹರಿಸಿಕೊಳ್ಳಬಹುದು ಎಂದು ವಿದ್ಯಾರ್ಥಿಗಳಿಗೆ ತಿಳಿಸಿದರು.
ಯುವ ಸ್ಪಂದನ ಕಾರ್ಯಕ್ರಮವು ಜನರ ಸಮಸ್ಯೆಗಳಿಗೆ ಮಾರ್ಗದರ್ಶನ ಮತ್ತು ಆಪ್ತ ಸಮಾಲೋಚನೆಯನ್ನು ಒದಗಿಸುತ್ತದೆ. ಅಲ್ಲದೇ ಕಲೆ ಸಾಹಿತ್ಯ ಜನಪದ ಸಂಸ್ಕೃತಿ ಐತಿಹಾಸಿಕ ಸ್ಥಳಗಳ ಬಗ್ಗೆ ಹಾಗೂ ಜೀವನಶೈಲಿ ಕಾರ್ಯಾಗಾರ ಮತ್ತು ತರಬೇತಿ ಇವುಗಳ ಕುರಿತು ಯುವಕರಿಗೆ ಪ್ರಸ್ತುತ ಜೀವನದಲ್ಲಿ ಹಾಗೂ ಮುಂದಿನ ಜೀವನದಲ್ಲಿ ದೇಶದ ಅಭಿವೃದ್ಧಿಯಲ್ಲಿ ಯುವಕರ ಪಾತ್ರ ಬಹಳ ಅತ್ಯಮೂಲ್ಯವಾದದ್ದು ಎಂದು ಅವರು ಹೇಳಿದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಮುಖ್ಯಸ್ಥ ಎಸ್. ಚ ಸನ್ನಹಳ್ಳಿ ಸೇರಿದಂತೆ ಇನ್ನೀತರರು ಉಪಸ್ಥಿತರಿದ್ದರು.


Leave a Reply