vijayapur

ಯುವ ಸ್ಪಂದನ ಕಾರ್ಯಕ್ರಮವು ಯುವಜನರ ಸಮಸ್ಯೆಗಳಿಗೆ ಆಪ್ತ ಸಮಾಲೋಚನೆಯನ್ನು ಒದಗಿಸುತ್ತz: ಯುವ ಪರಿವರ್ತಕರಾದ ಸಂಜಯ್ ಎಚ್


ವಿಜಯಪುರ ಏ. ೨೧ : ಜೀವನದಲ್ಲಿ ಯಶಸ್ವಿಯಾಗಿ ಬದುಕಲು ಸ್ವ -ಅರಿವು ಒತ್ತಡ ಮಾನಸಿಕ ಅಸ್ವಸ್ಥ ಸಂವಹನ ಸಮಸ್ಯೆಗಳ ಪರಿಹರಿಸುವಿಕೆ ಹೀಗೆ ಹಲವಾರು ಸಮಸ್ಯೆಯನ್ನು ನಾವು ಹೇಗೆ ಬಗೆಹರಿಸಿಕೊಳ್ಳಬಹುದು ಎಂದು ಯುವ ಪರಿವರ್ತಕರಾದ ಸಂಜಯ್ ಎಚ್ ಅವರು ವಿದ್ಯಾರ್ಥಿಗಳಿಗೆ ತಿಳಿಸಿದರು.
ಜಿಲ್ಲೆಯ ಕೋಲಾರದ ಸರ್ಕಾರಿ ಪ್ರೌಢಶಾಲೆಯಲ್ಲಿ ಇತ್ತೀಚೆಗೆ ಏರ್ಪಡಿಸಲಾಗಿದ್ದ ಯುವ ಸ್ಪಂದನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ವಿದ್ಯಾರ್ಥಿಗಳು ಓದಿದ ವಿಷಯವನ್ನು ಹೇಗೆ ನೆನಪಿನಲ್ಲಿ ಇಟ್ಟುಕೊಳ್ಳಬೇಕು. ಶಿಕ್ಷಣ ಮತ್ತು ತಂದೆ ತಾಯಿ ಜೊತೆ ಬಂದುಬಾAಧವರ, ಜೊತೆ ನೆರೆಹೊರೆ ಜೊತೆ ಹೇಗೆ ನಡೆದುಕೊಳ್ಳಬೇಕು ಎಂದು ನೊಂದ ಮನಸ್ಸಿಗೆ ಸ್ಪಂದಿಸುವ ಯುವ ಸ್ಪಂದನ ಉತ್ತಮವಾದ ಕೇಂದ್ರವಾಗಿದೆ. ಎಂದು ಹೇಳಿದರು.
ಯುವ ಸ್ಪಂದನ ಕಾರ್ಯಕ್ರಮವು ಯುವ ಜನರ ಸಮಸ್ಯೆಗಳಿಗೆ ಮಾರ್ಗದರ್ಶನ ಮತ್ತು ಆಪ್ತ ಸಮಾಲೋಚನೆಯನ್ನು ಒದಗಿಸುತ್ತದೆ ಮತ್ತು ಕಲೆ ಸಾಹಿತ್ಯ ಜನಪದ ಸಂಸ್ಕೃತಿ ಐತಿಹಾಸಿಕ ಸ್ಥಳಗಳ ಬಗ್ಗೆ ಮನವರಿಕೆ ಮಾಡಿದರು.
ಜೀವನಶೈಲಿ ಕಾರ್ಯಾಗಾರ ಮತ್ತು ತರಬೇತಿ ಪ್ರಸ್ತುತ ಜೀವನದಲ್ಲಿ ಹಾಗೂ ಭಾವಿ ಜೀವನದಲ್ಲಿ ದೇಶದ ಅಭಿವೃದ್ಧಿಯಲ್ಲಿ ಯುವಕರ ಪಾತ್ರ ಬಹಳ ಅತ್ಯಮೂಲ್ಯವಾದದ್ದು ಎಂದು ವಿದ್ಯಾರ್ಥಿಗಳಿಗೆ ತಿಳಿಸಿದರು.
ಈ ಸಂದರ್ಭದಲ್ಲಿ ಸಂಸ್ಥೆಯ ಮುಖ್ಯಸ್ಥರಾದ ಎಮ್ ಎಮ್ ಗುಡ್ಡೆವಾಡ್ ಸೇರಿದಂತೆ ಇನ್ನೀತರರು ಉಪಸ್ಥಿತರಿದ್ದರು.


Leave a Reply