vijayapur

ಜಾಲತಾಣದಲ್ಲಿ ಮಾನಸಿಕ ಆರೋಗ್ಯ ಸಂಸ್ಥೆಗಳ ನೋಂದಣಿಗೆ ಸೂಚನೆ


ವಿಜಯಪುg ಏ. ೨೧ : ಮಾನಸಿಕ ಆರೋಗ್ಯ ಸಂಸ್ಥೆಗಳು ಮತ್ತು ಮಾನಸಿಕ ಆರೋಗ್ಯ ವೃತ್ತಿಪರರ ನೊಂದಣಿಗೆ ಕರ್ನಾಟಕ ರಾಜ್ಯ ಮಾನಸಿಕ ಆರೋಗ್ಯ ಪ್ರಾಧಿಕಾರದ e-mಚಿಟಿಚಿs ಜಾಲತಾಣದಲ್ಲಿ oಟಿಟiಟಿe ನಲ್ಲಿ ಅರ್ಜಿ ಸಲ್ಲಿಸುತ್ತಿರುವವರ ಪ್ರಮಾಣ ಅತ್ಯಂತ ಕಡಿಮೆ ಇರುತ್ತದೆ. ಆದುದರಿಂದ, ಜಿಲ್ಲಾಧಿಕಾರಿಗಳ ಮುಖಾಂತರ ಲೈಸನ್ಸ ನೀಡುವ ಪ್ರಕ್ರಿಯೆಯನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಿ, ಕರ್ನಾಟಕ ರಾಜ್ಯ ಮಾನಸಿಕ ಆರೋಗ್ಯ ಪ್ರಾಧಿಕಾರದ e-mಚಿಟಿಚಿs ಜಾಲತಾಣದ ಲಿಂಕ್ hಣಣಠಿ://e-mಚಿಚಿs.ಞಚಿಡಿಟಿಚಿಣಚಿಞಚಿ.gov.iಟಿ/mhms _mಜh/#/ ರಲ್ಲಿ ನೊಂದಾಯಿಸಬೇಕು ಎಂದು ವಿಜಯಪುರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳು ತಿಳಿಸಿದ್ದಾರೆ.
ಮಾನಸಿಕ ಆರೋಗ್ಯ ಆರೈಕೆ ಕಾಯಿದೆ ೨೦೧೭ ರಂದು ಜಾರಿಗೆ ಬಂದಿರುತ್ತದೆ. ಸದರಿ ಕಾಯ್ದೆಯನ್ವಯ ಉಲ್ಲೇಖ ೨ ರಲ್ಲಿನ ರಾಜ್ಯ ಸರ್ಕಾರದ ಆದೇಶದಂತೆ ಕರ್ನಾಟಕ ರಾಜ್ಯ ಮಾಮಸಿಕ ಆರೊಗ್ಯ ಪ್ರಾಧಿಕಾರವು ಪೂರ್ಣ ಪ್ರಮಾಣದಲ್ಲಿ ಸ್ಥಾಪನೆಯಾಗಿರುತ್ತದೆ.
ಈ ಹಿಂದೆ ಮಾನಸಿಕ ಆರೋಗ್ಯ ಕಾಯಿದೆ ೧೯೮೭ ರ ಸಕ್ಷನ್ ೭ ರ ಪ್ರಕಾರ ಪ್ರತಿ ಜಿಲ್ಲೆಯ ಜಿಲ್ಲಾಧಿಕಾರಿಗಳನ್ನು ಮಾನಸಿಕ ಆಸ್ಪತ್ರೆ ಅಥವಾ ಸೈಕಿಯಾಟ್ರಿಕ್ ನರ್ಸಿಂಗ್ ಹೋಮ್‌ಗಳ ಲೈಸೆನ್ಸ್ ನೀಡುವ ಪ್ರಧಿಕಾರವಾಗಿ ನಾಮನಿರ್ದೇಶನ ಮಾಡಲಾಗಿತ್ತು.
ಮಾನಸಿಕ ಆರೋಗ್ಯ ಆರೈಕೆ ಕಾಯಿದೆ ೨೦೧೭ ರ ಸೆಕ್ಷನ್ ೫೫ (೧) (ಎ) ಮತ್ತು ಡಿ ಪ್ರಕಾರ ರಾಜ್ಯದ ಎಲ್ಲಾ ಸರ್ಕಾರಿ ಮತ್ತು ಖಾಸಗಿ ಮಾನಸಿಕ ಆರೋಗ್ಯ ಸಂಸ್ಥೆಗಳು ಮತ್ತು ಮಾನಸಿಕ ಆರೋಗ್ಯ ವೃತ್ತಿಪರರ ನೊಂದಣಿಯನ್ನು ಕರ್ನಾಟಕ ರಾಜ್ಯ ಮಾನಸಿಕ ಆರೋಗ್ಯ ಪ್ರಾಧಿಕಾರವೇ ಮಾಡಬೇಕಾಗಿರುತ್ತದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Leave a Reply