vijayapur

ಮೇ ೧೧ ರವರೆಗೆ ಸೆಮಿಸ್ಟರ್ ಥಿಯರಿ ಪರೀಕ್ಷೆ : ಪರೀಕ್ಷೆ ಕೇಂದ್ರದ ಸುತ್ತ ನಿಷೇಧಾಜ್ಞೆ


ವಿಜಯಪುರ ಏ. ೨೧ : ೨೦೨೧ ನೇ ಸಾಲಿನ ಏಪ್ರಿಲ್-ಮೇ ಸೆಮಿಸ್ಟರ್ ಥಿಯರಿ ಪರೀಕ್ಷೆಗಳು ಮೇ ೧೧ ರ ವರೆಗೆ ವಿಜಯಪುರ ನಗರದಲ್ಲಿ ಪರೀಕ್ಷೆಗಳ ಜರುಗಲಿದ್ದು, ಈ ಪರೀಕ್ಷಾ ಕಾರ್ಯದಲ್ಲಿ ತೊಡಗಿರುವ ಯಾವುದೇ ಅಧಿಕಾರಿ ಹಾಗೂ ಸಿಬ್ಬಂದಿಗಳು ಮತ್ತು ಇತರರು ಮೊಬೈಲ್ ಫೋನನ್ನು ತರುವುದನ್ನು ಹಾಗೂ ಬಳಸುವುದನ್ನು ನಿಷೇಧಿಸಿ ಜಿಲ್ಲಾಧಿಕಾರಿ ಪಿ.ಸುನೀಲಕುಮಾರ್ ಅವರು ಆದೇಶ ಹೊರಡಿಸಿದ್ದಾರೆ.
ಕೇವಲ ಪರೀಕ್ಷೆಯ ಮುಖ್ಯ ಅಧೀಕ್ಷಕರು ಮಾತ್ರ ಮೊಬೈಲ್ ಬಳಸಬಹುದಾಗಿದೆ. ಈ ಪರೀಕ್ಷಾ ಕೇಂದ್ರಗಳಲ್ಲಿ ಅಭ್ಯರ್ಥಿಗಳನ್ನು ಥರ್ಮಲ್ ಸ್ಕ್ಯಾನಿಂಗ್‌ಗೆ ಒಳಪಡಿಸಬೇಕು. ಕೈಗಳನ್ನು ಸ್ಯಾನಿಟೈಸರ್‌ನಿಂದ ಶುದ್ಧೀಕರಿಸಬೇಕು. ಮಾಸ್ಕ್ಧಾರಣೆ ಕಡ್ಡಾಯಗೊಳಿಸಿ ಪ್ರವೇಶ ನೀಡಬೇಕು ಹಾಗೂ ಪರೀಕ್ಷಾ ಕೇಂದ್ರದ ಸುತ್ತಲಿನ ೨೦೦ ಮೀ. ಪ್ರದೇಶವನ್ನು ಬೆಳಿಗ್ಗೆ ೯:೦೦ ಗಂಟೆಯಿAದ ಪರೀಕ್ಷೆ ಮುಗಿಯುವವರೆಗೂ ನಿಷೇಧಿತ ಪ್ರದೇಶವೆಂದು ಘೋಷಿಸಿದ್ದು, ಈ ಪರೀಕ್ಷೆಯ ಕೇಂದ್ರದ ಸಮೀಪದಲ್ಲಿರುವ ಜರಾಕ್ಸ್ ಅಂಗಡಿಗಳು, ಕಂಪ್ಯೂಟರ ಸೆಂಟರ್‌ಗಳು, ಸೈಬರ್ ಕೆಫೆಗಳು, ಕೋಚಿಂಗ್ ಕೇಂದ್ರಗಳು ಪರೀಕ್ಷೆ ನಡೆಯುವ ಅವಧಿಯಲ್ಲಿ ತೆರೆಯದಂತೆ ಅವರು ಆದೇಶಿಸಿದ್ದಾರೆ.


Leave a Reply