BelagaviState

ನರೆಗಾ ಯೋಜನೆಯಡಿ ಕೋಟಿ ವೃಕ್ಷ ಅಭಿಯಾನಕ್ಕೆ ಚಾಲನೆ


ಚಿಕ್ಕೋಡಿ  (ಕಾಗವಾಡ): ಬೀರು ಬಿಸಿಲು ತಾಪಮಾನ ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಪರಿಸರದಲ್ಲಿ ತಾಪಮಾನವನ್ನು ಹತೋತಟಿಗೆ ತರುವುದೋಸ್ಕರ ಪ್ರತಿಯೋಬ್ಬರು ತಮ್ಮ ತಮ್ಮ ಜಮೀನು ಜಾಗಗಳಲ್ಲಿ ವೃಕ್ಷ ಬೇಳೆಸುವದರಿಂದ ತಾಪಮಾನವನ್ನ ಹತೋಟಿಗೆ ತರಲು ಮಾತ್ರ ಸಾದ್ಯ ಎಂದು ಕಾಗವಾಡ ತಾಲೂಕ ಕಾರ್ಯನಿರ್ವಾಹಕ ಅಧಿಕಾರಿ ವೀರಣಗೌಡ ಏಗಣಗೌಡರ ಹೇಳಿದರು.

ಕುಸನಾಳ, ಮಡವಾಳ ಗ್ರಾಮದ ಕನ್ನಡ ಶಾಲೆ ಆವರಣದಲ್ಲಿ ಇಂದು ಕೋಟಿ ವೃಕ್ಷ ಅಭಿಯಾನದ ಚಾಲನೆಯನ್ನು ತಾಲೂಕಿನ ಕಾರ್ಯನಿರ್ವಾಕ ಏಗಣಗೌಡ ನೆತೃತ್ವದಲ್ಲಿ ಗ್ರಾಮದ ಅಧ್ಯಕ್ಷ ವಿಜಯಕನ್ನಿಕವಾಡೆ ವಾಡೆ ಹಾಗೂ ಚಿದಾನಂಧ ಅಥಣಿ, ಅಮೀತ ಬಸಗೌಡ ಪಾಟೀಲ್ ಇವರು ಗೂದಲಿ ಪೂಜೆ ಮಾಡುವ ಮೂಲಕ ಈ ಅಭಿಯಾನಕ್ಕೆ ಚಾಲನೆ ನೀಡಲಾಯಿತು.

ಬಳಿಕ ಮಾತನಾಡಿದ ವೀರಣಗೌಡ ಏಗಣಗೌಡರ ಅವರು ನಮ್ಮ ಜಿಲ್ಲಾದಂತ್ಯ ಬರುವ ಎಲ್ಲಾ ತಾಲೂಕುಗಳಲ್ಲಿ ಬರುವಂತ್ತಹ ಎಲ್ಲಾ ಗ್ರಾಮಗಳಲ್ಲಿ ನರೆಗಾ ಯೋಜನೆಯಡಿ ಕೋಟಿ ವೃಕ್ಷ ಗೀಡಗಳನ್ನು ಸರಕಾರದ ಜಾಗಗಳಲ್ಲಿ ಶಾಲಾ ಆವರಣಗಳಲ್ಲಿ ಅಥವಾ ಗ್ರಾಮಪಂಚಾಯಲ್ಲಿ ಹಾಗೂ ಸರಕಾರಿ ಆಸ್ಪತ್ರೆ ಗಳಲ್ಲಿ ಮತ್ತು ರೈತರ ತಮ್ಮ ತಮ್ಮ ಹೋಲಗಳಲ್ಲಿ ಕೂಡಾ ಈ ಕೋಟಿ ವೃಕ್ಷ ಗೀಡ ನೆಟ್ಟಲೂ ಮಾಡಿ ಕೋಡಲಾಗುತ್ತದೆ.

ಅದಕ್ಕಾಗಿ ಪ್ರತಿಯೊಬ್ಬರು ಸಾಧ್ಯವಾದಷ್ಟು ವೃಕ್ಷಗಳನ್ನು ನೆಡಬೇಕು ಹೆಚ್ಚಿಗೆ ಬೇಳಸಲು ಸಾಧ್ಯವಾಗದಿದ್ದರೆ ಒಂದನ್ನಾದರು ಗಿಡವನ್ನು ನೆಡಬೇಕು. ಏಕೆಂದರೆ ಇದರಿಂದ ಪರಿಸದಲ್ಲಿನ ತಾಪಮಾನ ಹಾಗೂ ವಾಯು ಮಾಲಿನ್ಯವನ್ನ ಒಂದು ರೀತಿಯಲ್ಲಿ ತಡೆಗಟ್ಟಲು ಹತೋಟಿಗೆ ಸಾಧ್ಯವಾಗುತ್ತದೆ, ಜೋತೆಗೆ ಗ್ರಾಮಗಳಲ್ಲಿ ಅತಿ ಹೇಚ್ಚು ಗಿಡಗಳನ್ನು ನೆಟ್ಟರೆ ಮನುಷ್ಯನಿಗೆ ಬೇಕಾಗದ ಉತ್ತಮ ಶುದ್ಧ ಆಮ್ಲಜನಕ ಪಡೆಯಲು ಸಹಾಯಕವಾಗುತ್ತದೆ, ಇದರಿಂದ ಒಂದು ಉತ್ತಮ ಜೀವನ ಆರೋಗ್ಯಕರವಾಗಿರುದಕ್ಕೆ ಸಾಧ್ಯ ಆದರಿಂದ ಎಲ್ಲರೂ ಸ್ವ ಇಚ್ಛೆಯಿಂದ ವೃಕ್ಷಗಳು ನಡೆಲಿ ಮುಂದಾಗಬೇಕು, ವೃಕ್ಷಗಳನ್ನು ಬೇಳಸಿ ಪರಿಸರವನ್ನು ಊಳಿಸಲು ಗ್ರಾಮಸ್ಥರು ಸಹಕರಿಸಬೇಕು ಎಂದರು.

ಅಲ್ಲದೆ ಯೋಜನೆಯು ನರೆಗಾಯೋಜನೆಯಡಲ್ಲಿ ಕೇಲಸಮಾಡುತ್ತಿರು ಪ್ರತಿ ಯೋಬ್ಬರಿಗೂ ಗೀಡ ನೆಟ್ಟುದರ ಜೋತೆಗೆ ಒಂದೊಂದು ಗುಡ್ಡಿಗೂ 289ರೂ ಹಣವನ್ನು ನೇರಾವಾಗಿ ಅವರ ಖಾತೆಗೆ ಜಮಾಮಾಡಲಾಗುತ್ತದೆ ಮತ್ತು ಈ ಅವಕಾಶವನ್ನು ನರೆಗಾ ಜಾಬ್ ಕಾರ್ಡ ಹೊಂದಿರುವ ಎಲ್ಲರಿಗೂ ಅವಕಾಶ ಕಲ್ಪಿಸಿ ಕೋಡಲಾಗುತ್ತದೆ ಎಂದುರು.

ಈ ವೇಳೆ ಈ ಕಾರ್ಯಕ್ರಮದಲ್ಲಿ ಕುಸನಾಳ ಗ್ರಾಮ ಪಂಚಾಯತಿ ಅಧಿಕಾರಿ, ಸಿಬ್ಬಂದಿಗಳು, ತಾಲುಕು ಪಂ ಕಾರ್ಯನಿರ್ವಾಹಕ ವೀರಣಗೌಡ ಏಗಣಗೌಡರ, ಗ್ರಾಮದ ಅಧ್ಯಕ್ಷ ವೀಜಯ ಕನ್ನಿಕವಾಡೆ, ಚಿದಾನಂದ ಅಥಣಿ, ಅಮೀತ ಬಸಗೌಡ ಪಾಟೀಲ್, ಹಾಗೂ ಊರಿನ ಗ್ರಾಮಸ್ಥರು ಉಪಸ್ಥಿತರಿದ್ದರು.


Leave a Reply