Uncategorized

ವಾದ ವಿವಾದಗಳಲ್ಲೆ ಮುಗಿದ ವ್ಯಾಪಾರಸ್ಥರ ಸಭೆ


ಗೋಕಾಕ: ತಾಲೂಕಾ ಪಂಚಾಯತ ಸಭಾ ಭವನದಲ್ಲಿ ಕೊರಾನಾ ಮಾರ್ಗಸೂಚಿಗೆ ಸಂಬಂದಿಸಿದಂತೆ ತಾಲ್ಲೂಕು ಆಡಳಿತದಿಂದ ಕರೆದ ವ್ಯಾಪಾರಸ್ಥರ ಸಭೆಯಲ್ಲಿ ಕೊರೊನಾ ಮಾರ್ಗಸೂಚಿಯನ್ನು ಪಾಲಿಸಲು ಸಹಕಾರ ನೀಡಲು ಗೋಕಾಕ ಸರ್ವ ವ್ಯಾಪಾರಸ್ಥರ ಸಭೆ ಕರೆಯಲಾಗಿತ್ತು.

ಈ ಸಭೆಯಲ್ಲಿ ತಾಲೂಕಾ ಮಟ್ಟದ ಅಧಿಕಾರಿಗಳು ಸಾರ್ವಜನಿಕರಿಗೆ ಅನೂಕೂಲವಾಗಲೆಂದು ಸಮಯ ಬದಲಾವಣೆಗೆ ವ್ಯಾಪಾರಸ್ಥರ ಬಳಿ ಕೇಳಿಕೊಂಡಾಗ ವ್ಯಾಪಾರಸ್ಥರು

ಮದ್ಯದ ಅಂಗಡಿಗೆ ಸಮಯ ನೀಡಿದಂತೆ ನಮಗೂ ಸಮಯ ನೀಡಬೇಕೆಂದು ಕೇಳಿಕೊಂಡಾಗ ಸ್ಥಳದಲ್ಲಿದ್ದ ಮದ್ಯದ ಅಂಗಡಿಯವರು ನಾವು ಕೂಡ ಸರಕಾರಕ್ಕೆ ಟ್ಯಾಕ್ಸ್ ತುಂಬುತ್ತೇವೆ ,ನೀವು ಮದ್ಯದ ಅಂಗಡಿಗಳನ್ನೆ ಟಾರ್ಗೆಟ್ ಎಕೆ ಮಾಡುತಿದ್ದಿರಿ ಎಂದು ಕೇಳಿದರು,

ಇತ್ತ ಅಧಿಕಾರಿಗಳು ವಿಕೆಂಡ್ ಕರ್ಪ್ಯೂ ದಿನ ಅಗತ್ಯ ವಸ್ತುಗಳಿಗೆ ಮುಂಜಾನೆ 10 ಗಂಟೆಯ ವರೆಗೆ ಸಮಯ ನೀಡುತ್ತೇವೆಂದು ಹೇಳುತ್ತಿರುವಾಗಲೆ ಈಗ ಮದುವೆಗಳು ನಡೆಯುವ ಸಮಯವಾಗಿದ್ದರಿಂದ ಬಟ್ಟೆ ಅಂಗಡಿಗಳಿಗೆ ಮದ್ಯಾನ್ಹ 2 ವರೆಗೆ ಸಮಯ ನೀಡಬೇಕೆಂದು ಕೇಳಿದರು,

ಇದರಿಂದ ಗೊಂದಲಕ್ಕಿಡಾದ ಅಧಿಕಾರಿಗಳು ಕೊನೆಗೆ ಸರಕಾರದ ನಿಯಮದಂತೆ ನಡೆದುಕೊಳ್ಳಲು ಸೂಚಿಸಿದಾಗ ಸ್ವಲ್ಪ ಸಮಯ ಗೊಂದಲ ಉಂಟಾಯಿತು,

ಈ ಸಭೆಯಲ್ಲಿ ತಹಶಿಲ್ದಾರ ನವೀನ ಹಲ್ಲೂರ, ಡಿವೈಎಸ್ ಪಿ ಜಾವೇದ ಇನಾಮದಾರ, ಪೌರಾಯುಕ್ತ ಶಿವಾನಂದ ಹಿರೇಮಠ ಸೇರಿದಂತೆ ಅನೇಕರು ಇದ್ದರು.


Leave a Reply