BengaluruState

ವಿಕೇಂಡ್ ಬಸ್ ಸಂಚಾರ ಇರುತ್ತಾ..? ಇಲ್ಲಿದೆ ನೋಡಿ ಮಾಹಿತಿ


ಬೆಂಗಳೂರು : ನಾಳೆ ರಾಜ್ಯಾಧ್ಯಂಕ ವೀಕ್ ಎಂಡ್ ಕರ್ಪ್ಯೂ ಜಾರಿಯಲ್ಲಿರಲಿದ್ದು ಈ ಸಂದರ್ಭದಲ್ಲಿ ಏನೇನು ಸಿಗುತ್ತೆ, ಏನೇನು ಸಿಗಲ್ಲಾ ಎಂಬ ಗೊಂದಲದಲ್ಲಿಯೆ ರಾಜ್ಯದ ಜನತೆ ಇದ್ದು ಅದರಲ್ಲಿಯೂ ಬಸ್ ಸಂಜಾರ ಸೇವೆ ಇರುತ್ತೋ ಇಲ್ಲವೋ ಎಂಬ ಗೊಂದಲಕ್ಕೆ ಸರಕಾರ ತೆರೆ ಎಳೆದಿದ್ದು ಕೆ ಎಸ್ ಆರ್ ಟಿ ಸಿ ಹಾಗೂ ಬಿಎಂಟಿಸಿ ಬಸ್ ಸಂಚಾರಕ್ಕೆ ಅನುಮತಿ ನೀಡಿದೆ.

ನಾಳೆಯ ವೀಕೇಂಡ್ ಕರ್ಪ್ಯೂ ನಡುವೆಯೂ ಕೆ ಎಸ್ ಆರ್ ಟಿ ಸಿ ಹಾಗೂ ಬಿಎಂಟಿಸಿ ಬಸ್ ಸಂಚಾರ್ ಅಗತ್ಯತೆಗೆ ಅನುಗುಣವಾಗಿ ಇರಲಿದೆ ಎಂಬುದಾಗಿ ಪ್ರಕಟಣೆಯಲ್ಲಿ ತೀಳಿಸಿದ್ದು, ಈ ಕುರಿತಂತೆ ಕೆ ಎಸ್ ಆರ್ ಟಿ ಸಿಯ ವ್ಯವಸ್ಥಾಪಕ ನಿರ್ದೇಶಕರು ಪತ್ರಿಕಾ ಪ್ರಕಟಣೆ ಹೊರಡಿಸಿದ್ದಾರೆ.

ಕೋವಿಡ್-19 ಹರಡುವಿಕೆಯನ್ನು ತಡೆಗಟ್ಟಲು ಕರ್ನಾಟಕ ಸರ್ಕಾರವು ವಾರಾಂತ್ಯದಲ್ಲಿ ಅಂದರೆ ಶುಕ್ರವಾರ ರಾತ್ರಿ 9 ಗಂಟೆಯಿಂದ ಸೋಮವಾರ ಬೆಳಿಗ್ಗೆ 6 ಗಂಟೆಯವರೆಗೆ ಕರ್ಪ್ಯೂ ಜಾರಿಗೊಳಿಸಿರುತ್ತದೆ. ಈ ಅವಧಿಯಲ್ಲಿ ಕೆ ಎಸ್ ಆರ್ ಟಿ ಸಿ ನಿಗಮದ ಬಸ್ಸುಗಳ ಕಾರ್ಯಾಚರಣೆ ಇದ್ದು, ಪ್ರಯಾಣಿಕರ ದಟ್ಟಣೆ ಮತ್ತು ಅವಶ್ಯಕತೆ ಅನುಗುಣವಾಗಿ ಮಾತ್ರ ಸಾರಿಗೆಗಳನ್ನು ಕಾರ್ಯಾಚರರಿಸಲಾಗುವುದು.

 


Leave a Reply