State

ಬಂಡೀಪುರ ಅರಣ್ಯಕ್ಕೆ ಬೆಂಕಿಯಿಟ್ಟಿದ್ದ ಆರೋಪಿಗಳ ಬಂಧನ


ಗುಂಡ್ಲುಪೇಟೆ: ಬಂಡೀಪುರ ಹುಲಿಯೋಜನೆಯ ಮದ್ದೂರು ವಲಯದ ವ್ಯಾಪ್ತಿಯಲ್ಲಿರುವ ಕರಡಿಕಲ್ಲು ಬೆಟ್ಟದಲ್ಲಿ ಇದೇ ಏಪ್ರಿಲ್ ತಿಂಗಳ ಒಂದನೇ ತಾರೀಕಿನಿಂದ ಬೆಂಕಿ ಹಚ್ಚಿದ್ದ ಆರೋಪಿಗಳನ್ನು ಬಂಧಿಸುವಲ್ಲಿ ಬಂಡೀಪುರ ಅರಣ್ಯ ಇಲಾಖಾ ಸಿಬ್ಬಂಧಿಗಳು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬೆಂಕಿ ಹಚ್ಚಿದ್ದ ಪ್ರಕರಣದಲ್ಲಿ ಒಟ್ಟು 9ಜನ ಆರೋಪಿಗಳು ಭಾಗಿಯಾಗಿದ್ದು ಸದ್ಯ 3ಜನರನ್ನು ಬಂಧಿಸಲಾಗಿದೆ, ಉಳಿದ ಆರೋಪಿಗಳ ಪತ್ತೆಗೆ ಬಲೆ ಬೀಸಲಾಗಿದೆ. ಮಾರ್ಚ್ ತಿಂಗಳ 31ನೇ ತಾರೀಕು ಗುಂಡ್ಲುಪೇಟೆ ತಾಲೂಕಿನ ಲಕ್ಕೀಪುರ ಗ್ರಾಮದ ಐದು ಜನ ಹಾಗೂ ಕೇರಳದ ಕೊಂಕಳಿ ಗ್ರಾಮದ ನಾಲ್ಕು ಜನ ಅಕ್ರಮವಾಗಿ ಅರಣ್ಯ ಪ್ರವೇಶ ಮಾಡಿದ್ದು ಮಾರ್ಚ್ 31ರ ರಾತ್ರಿ ಕಾಡಿನಲ್ಲೇ ಉಳಿದುಕೊಂಡಿದ್ದು ಏಪ್ರಿಲ್ 1ನೇ ತಾರೀಕು ಬೆಳಿಗ್ಗೆ 8 ರಿಂದ 9ರ ಸಮಯದಲ್ಲಿ ಕರಡಿಕಲ್ಲು ಬೆಟ್ಟದ ನಾಲ್ಕೈದು ಕಡೆ ಬೆಂಕಿ ಹಚ್ಚಿ ಪರಾರಿಯಾಗಿದ್ದರು. ನಂತರ ಅರಣ್ಯ ಇಲಾಖಾ ಸಿಬ್ಬಂದಿಗಳ ಹರಸಾಹಸದಿಂದ ಬೆಂಕಿನಂದಿಸುವಲ್ಲಿ ಯಶಸ್ವಿಯಾಗಿದ್ದರು ಸಹ ಸುಮಾರು ಎಂಟು ಎಕರೆ ಅರಣ್ಯ ಪ್ರದೇಶ ಬೆಂಕಿಗೆ ಅಹುತಿಯಾಗಿತ್ತು.
ಸಧ್ಯ ಪ್ರಕರಣ ಬೇಧಿಸಿರುವ ಅರಣ್ಯ ಇಲಾಖಾ ಸಿಬ್ಬಂದಿಗಳು ಲಕ್ಕೀಪುರ ಗ್ರಾಮದ ಮಣಿ ಹಾಗೂ ಚೆಲುವ ಎಂಬುವವರನ್ನು ಮತ್ತು ಕೇರಳದ ಕೊಂಕಳಿ ಗ್ರಾಮದ ಗಣೇಶ್ ಎಂಬಾತನನ್ನು ಸೇರಿ ಮೂವರನ್ನು ಬಂಧಿಸಿದ್ದಾರೆ ಇನ್ನುಳಿದ ಆರು ಜನರಿಗಾಗಿ ಶೋದ ಕಾರ್ಯ ನಡೆದಿದೆ.
ಆರೋಪಿಗಳನ್ನು ಬಂದಿಸುವ ಕಾರ್ಯಾಚರಣೆಯಲ್ಲಿ ವಲಯ ಅರಣ್ಯಾಧಿಕಾರಿ ಬಿ.ಸುಧಾಕರ್, ಎಲ್.ನಾಗರಾಜು, ಸ್ವಾಮಿ, ರಾಮಲಿಂಗಪ್ಪ ಇತರರು ಪಾಲ್ಗೊಂಡಿದ್ದರು.

Leave a Reply