Koppal

: ಶಾಸಕ ಅಮರೇಗೌಡ ಪಾಟೀಲ್ ಬಯ್ಯಾಪುರ ರವರು ಶಾಸಕರ ಭವನದಲ್ಲಿ ಪತ್ರಿಕಾಗೋಷ್ಠಿ


ಕುಷ್ಠಗಿ:ಎರಡನೆ ಹಂತದ ಕರೋನಾ ವೈರಸ್ ಬಗ್ಗೆ ಮಾಧ್ಯಮದವರ ಮೂಲಕ ಕುಷ್ಟಗಿ ತಾಲೂಕಿನ ಎಲ್ಲಾ ಮತದಾರ ಬಾಂಧವರಿಗೆ ಜಾಗೃತಿಯಿಂದ ಇರಿ ಎಂದು ತಿಳಿಸಿದರು.ಇದೇ ಸಮಯದಲ್ಲಿ ನಮ್ಮ ಎಲ್ಲ ವರದಿಗಾರರ ಪ್ರಶ್ನೆಗಳನ್ನು ಆಲಿಸಿದ ಮಾನ್ಯ ಶಾಸಕರು ಪ್ರತಿ ಪ್ರಶ್ನೆಗೂ ಸೂಕ್ತವಾಗಿ ಉತ್ತರವನ್ನು ನೀಡಿದರು .ಹಾಗೆ ಯಾವ ಅಂಗಡಿಗಳು ತೆಗೆಯಬೇಕು ಯಾವ ಅಂಗಡಿಗಳು ಮುಚ್ಚಬೇಕು ಎಂಬುದನ್ನು ಸ್ಪಷ್ಟವಾಗಿ ತಿಳಿಸಿಕೊಟ್ಟರು.ದಿನೇ ದಿನೇ ಹೆಚ್ಚಾಗುತ್ತಿರುವ ಸೋಂಕಿತರ ಸಂಖ್ಯೆ ಇಂದು ಒಂದು ದಿನಕ್ಕೆ 26ಕ್ಕೂ ಹೆಚ್ಚಾಗಿದ್ದು ಮಾನ್ಯ ಶಾಸಕರು ತಾಲೂಕಿನ ವೈದ್ಯಾಧಿಕಾರಿಗಳಿಗೆ ಕರೆಮಾಡಿ ಇಂದಿನಿಂದ ಇನ್ನಷ್ಟು ಬಿಗಿ ಬಂದೋಬಸ್ತ್ ನೊಂದಿಗೆ ಎಲ್ಲರನ್ನೂ ತಪಾಸಣೆ ಮಾಡಬೇಕೆಂದು ಹೇಳಿದರು.ಮಾನ್ಯ ಜಿಲ್ಲಾಧಿಕಾರಿಗಳ ಅನ್ವಯದಂತೆ ಪ್ರತಿಯೊಂದು ಆದೇಶವನ್ನು ಪಾಲಿಸದೆ ಹೋದರೆ ಮೊದಲಿಗೆ ನೇರವಾಗಿ ಕಂದಾಯ ಇಲಾಖೆ ಮತ್ತು ಜಿಲ್ಲಾ ಮಟ್ಟದ ಪೊಲೀಸ್ ಉತ್ತಮ ಕೆಲಸ ಮಾಡುತ್ತಿದ್ದಾರೆ.
ಪ್ರತಿಯೊಬ್ಬ ಅಧಿಕಾರಿ ಕೂಡ ಬಹಳ ಕಷ್ಟಪಟ್ಟು ಕೆಲಸ ಮಾಡುತ್ತಿದ್ದಾರೆ ಅದು ನನಗೂ ತಿಳಿದಿದೆ.ಪ್ರತಿಯೊಬ್ಬ ಅಧಿಕಾರಿಗಳಿಗೆ ಕಾಲಕಾಲಕ್ಕೆ ನಿಖರವಾದ ಸೂಚನೆಯನ್ನು ನೀಡುತ್ತಿದ್ದೇವೆ ಎಂದು ತಿಳಿಸಿದರು.ಅದೇ ರೀತಿ ಪ್ರತಿಯೊಬ್ಬ ಪ್ರಜೆಯೂ ತಾವೇ ಸ್ವಯಂ ಪ್ರೇರಿತರಾಗಿ ಲಾಕ್ ಡೌನ್ ಮಾಡಿಕೊಳ್ಳಬೇಕೆಂದು ಮಾನ್ಯ ಶಾಸಕರು ಕೈಮುಗಿದು ಮನವಿಯನ್ನು ಮಾಡಿಕೊಂಡರು. ಜನಸಾಮಾನ್ಯರು ಕೂಡ ಎಚ್ಚೆತ್ತುಕೊಂಡು ಮಾನ್ಯ ಶಾಸಕರ ಮಾತಿಗೆ ಬೆಲೆಕೊಟ್ಟು ಕರೋನಾ ಎಂಬ ಮಹಾಮಾರಿ ಯಿಂದ ಮುಕ್ತಿ ಹೊಂದಬೇಕು ಎಂಬುದೇ ನಮ್ಮ ಆಶಯವಾಗಿದೆ.


Leave a Reply