BelagaviState

ಕೊರೊನಾ ಎರಡನೆ ಅಲೆ ತಡೆಗಟ್ಟಲು ದೇವರ ಮೊರೆ ಹೋದ ಶಿರಹಟ್ಟಿ ಗ್ರಾಮಸ್ಥರು


ಚಿಕ್ಕೋಡಿ:  ದೇಶದಲ್ಲಿ ಕೊರೊನಾ ವೈರಸ್ ವ್ಯಾಪಕವಾಗಿ ಹಬ್ಬತ್ತಿದ್ದು ಜನರಲ್ಲಿ ಆತಂಕಕ್ಕೆ ಕಾರಣವಾಗಿದೆ. ಇದನ್ನು ತಡೆಗಟ್ಟಲು ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಶಿರಹಟ್ಟಿ ಗ್ರಾಮಸ್ಥರು ದೇವರ ಮೊರೆ ಹೋಗಿದ್ದಾರೆ.

ಕೃಷ್ಣಾ ನದಿಗೆ ತೆರಳಿ ಮಡಿಯಿಂದ ನೀರು ತಂದು ದೇವರಿಗೆ ಜಲ ಅಭಿಷೇಕ ನೆರವೇರಿಸಿ, ದೇವರಲ್ಲಿ ಕೊರೊನಾ ಮಹಾಮಾರಿ ತಡೆಗಟ್ಟಲು ಭಕ್ತಿಯಿಂದ ಪೂಜೆ ಸಲ್ಲಿಸುತ್ತಿದ್ದಾರೆ. ಆರೂ ಕಿಲೋಮೀಟರ್ ದೂರದ ನದಿಯಿಂದ ಪಾದಯಾತ್ರೆ ಮುಖಾಂತರ ಗ್ರಾಮದಲ್ಲಿ ಇರುವಂತಹ ದರ್ಗಾ, ದೇವಸ್ಥಾನಗಳಿಗೆ ಜಲ ಅಭಿಷೇಕ ಮಾಡುವ ಮೂಲಕ ಭಕ್ತಿ ಪರಾಕಾಷ್ಠೆ ಮೆರೆದಿದ್ದಾರೆ.

ಶತಮಾನಗಳ ಹಿಂದೆ ಗ್ರಾಮಗಳಿಗೆ ಮಹಾಮಾರಿ ರೋಗಗಳು ಕಾಣಿಸಿದಾಗ ಐದು ವಾರಗಳ ಕಾಲ ಒಂದು ದಿನವನ್ನು ನಿಗದಿ ಪಡಿಸಿ ದೇವರಿಗೆ ಜಲ ಅಭಿಷೇಕ ಹಾಗೂ ವಿಶೇಷ ಪೂಜೆ ಸಲ್ಲಿಸಲಾಗುತ್ತಿತ್ತು ಇದರಿಂದಾಗಿ ಊರಿನಲ್ಲಿ ರೋಗಗಳು ಕಡಿಮೆಯಾಗುತ್ತದೆ ಎಂದು ಹಿರಿಯರು ಹೇಳುತ್ತಾ ಬಂದಿದ್ದಾರೆ ನಾವು ಕೂಡ ಅವರ ಮಾರ್ಗದರ್ಶನದಲ್ಲಿ ಈ ಕಾರ್ಯಕ್ಕೆ ಮುಂದಾಗಿದ್ದೆವೆಂದು ಗ್ರಾಮಸ್ಥರು ಹೇಳುತ್ತಾರೆ.


Leave a Reply