BelagaviState

ಬಲ ಪ್ರಯೋಗ ಬೇಡ ಮನ ಒಲಿಸುವ ಕೆಲಸ ಮಾಡೋಣ: ಎಡಿಜಿಪಿ ಭಾಷ್ಕರ್ ರಾವ್


ಬೆಳಗಾವಿ: ನಿಯಮ ಮತ್ತು ಸೂಚನೆಗಳು ಸಮರ್ಪಕವಾಗಿ ಅನುಷ್ಟಾನಗೊಳ್ಳಬೇಕೆಂದರೆ ಅಧಿಕಾರಿಗಳು ಸ್ವತಃ ರಸ್ತೆಗಿಳಿದು ಕೆಲಸ ಮಾಡಬೇಕು, ಇದೊಂದು ಯುದ್ದದ ಸಮಯವಾಗಿದೆ ಆದ್ದರಿಂದ ಹೃದಯವಂತಿಕೆಯಿಂದ ಕೆಲಸ ಮಾಡಬೇಕೆಂದು ಕರೋನಾ ನಿಯಂತ್ರಣ ವಿಶೇಷ ಅಧಿಕಾರಿ ಭಾಷ್ಕರ್ ರಾವ್ ಅವರು ತಿಳಿಸಿದ್ದಾರೆ.

ವೀಕೆಂಡ್ ಲಾಕ್ಡೌನ್ ನಿಮಿತ್ಯ ನಗರ ಸಂಚಾರ ಮಾಡಿ ಪರಿಶೀಲನೆ ನಮಾಡಿದ ಬಳಿಕ  ಮಾದ್ಯಮಗಳ ಜೊತೆ ಮಾತನಾಡಿದ ಅವರು ಅಧಿಕಾರಿಗಳ ಸಭೆ ಸಮಾರಂಭಗಳು ಬೇಗನೆ ಮುಗಿಸಬೇಕೆ ಗಂಟೆಗಟ್ಟಲೇ ಕಾಲ ಹರಣ ಮಾಡುವುದರಿಂದ ಏನೂ ಉಪಯೋಗವಿಲ್ಲ. ಇದು ಯುದ್ಧದ ಸಮಯ, ಬೆಂಗಳೂರಿನಿಂದ ಏನು ಸೂಚನೆ ಬರುತ್ತವೆ ಆ ಸೂಚನೆಗಳ ಅನುಷ್ಠಾನಕ್ಕೆ ತರಬೇಕಾದರೆ ಅಧಿಕಾರಿಗಳೆ ರಸ್ತೆಗಿಳಿದು ಕೆಲಸ ಮಾಡಬೇಕು ಎಂದರು.

ಕಿರಿಯ ಸಿಬ್ಬಂದಿ ಮತ್ತು ಹಿರಿಯ ಸಿಬ್ಬಂದಿಗಳು ಒಟ್ಟಾಗಿ ಕೆಲಸಮಾಡಬೇಕು. ಜೀವ ಮತ್ತು ಜೀವನ ರಡು ನಡೆಯುವುದು ಅವಶ್ಯಕವಾಗಿದ್ದು ಸಭೆ ಸಮಾರಂಭ ಅಂತ ಮಾಡಿ ಜಾಸ್ತಿ ವೇಳೆ ಸಮಯ ಹಾಳು ಮಾಡಬಾರದು. ಒಂದಿಷ್ಟು ಕಾರ್ಯಕ್ರಮ ನಡೆಯಬೇಕು. ಆದರೆ ಕಳೆದ ಭಾರಿ ನಡೆದ ರೀತಿಯಲ್ಲಿ ಲಾಕ್ ಡೌನ ಮಾಡುವುದಕ್ಕೆ ಆಗೋಲ್ಲ ಎಂದು ಅವರು ಸ್ಪಷ್ಟ ಪಡಿಸಿದರು.

ಸಾರ್ವಜನೀಕರ ಮೇಲೆ ಬಲ ಪ್ರಯೋಗ ಮಾಡುವ ಬದಲು ಅವರನ್ನು ಮನವಲಿಸುವ ಕೆಲಸವನ್ನು ಮಾಡುವುದು ಅವಶ್ಯಕವಾಗಿದೆ, ನಾಗರಿಕರು ಸಹ ನಾವೇ ನಾಯಕರು ಎಂದು ತಿಳಿದು ಸಾಧ್ಯವಾದರೆ ಮಾಸ್ಕ್ ವಿತರಣೆ ಮಾಡಬೇಕು. ಸೋಮವಾರ ಮುಂಜಾನೆ ೬ ರ ವರೆಗೆ ಲಾಕ್ ಡೌನ ಇರುತ್ತದೆ ಎಂಬ ಮಾಹಿತಿಯನ್ನು ಅವರು ನೀಡಿದರು.

 


Leave a Reply